Site icon Vistara News

Rakhi Sawant: ಮೆಕ್ಕಾದಲ್ಲಿ ರಾಖಿ ಸಾವಂತ್‌; ಕ್ಯಾಮೆರಾ ಕಂಡರೆ ಸಾಕು ನಾಟಕ ಶುರು ಅಂದ್ರು ನೆಟ್ಟಿಗರು!

Rakhi Sawant at Mecca

ರಾಖಿ ಸಾವಂತ್ (Rakhi Sawant) ಅವರು ಪ್ರಸ್ತುತ ಮೆಕ್ಕಾದ ಮದೀನಾದಲ್ಲಿ ಪವಿತ್ರ ತೀರ್ಥಯಾತ್ರೆಯಲ್ಲಿದ್ದಾರೆ ( holy pilgrimage in Mecca). ಮಸ್ಜಿದ್-ಅಲ್-ಹರಾಮ್‌ನಲ್ಲಿ ಉಮ್ರಾ (Umra) ನೆರವೇರಿಸಿದ್ದಾರೆ. ನಟಿಯ ಅನೇಕ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರ ಜತೆಗೆ ನಟಿ ಪ್ರಾರ್ಥಿಸುವಾಗ ಅಳುತ್ತಿರುವ ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಅನೇಕ ನೆಟಿಜನ್‌ಗಳು ಇದು ಸರಿಯಲ್ಲ ಎಂದು ನಟಿಯನ್ನು ಟ್ರೋಲ್‌ ಮಾಡಲು ಶುರು ಮಾಡಿದ್ದಾರೆ.

ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ಪರಸ್ಪರರ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. 2022ರಲ್ಲಿ ಇಬ್ಬರೂ ಮದುವೆಯಾಗುವ ಮೊದಲು ರಾಖಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಫಾತಿಮಾ ಎಂಬುದಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ನಂತರ ಫೆಬ್ರವರಿ 7ರಂದು ಆದಿಲ್ ಖಾನ್ ದುರಾನಿ ವಿರುದ್ಧ ವಂಚನೆ, ವಿವಾಹೇತರ ಸಂಬಂಧಗಳು ಮತ್ತು ಇತರ ವಿಷಯಗಳ ಆರೋಪ ಮಾಡಿ ಜೈಲು ಶಿಕ್ಷೆಗೆ ಕಾರಣರಾದರು. ಈಗ ಜಾಮೀನಿನ ಮೇಲೆ ಆದಿಲ್​ ಹೊರಗಡೆ ಇದ್ದಾರೆ. ಇದೀಗ ನಟಿ ಮೆಕ್ಕಾದ ಮದೀನಾದಲ್ಲಿ ಪವಿತ್ರ ತೀರ್ಥಯಾತ್ರೆಯಲ್ಲಿದ್ದಾರೆ. ವಿಡಿಯೊದಲ್ಲಿ ರಾಖಿ ಸಾವಂತ್ ಪ್ರಾರ್ಥನೆ ವೇಳೆ ಮಂಡಿಯೂರಿ ʻʻಆದಿಲ್ ಖಾನ್ ದುರಾನಿ ನನ್ನನ್ನು ಮದುವೆಯಾಗುವ ಮೂಲಕ ನನ್ನ ಜೀವನವನ್ನು ನಾಶಪಡಿಸಿದ್ದಾನೆʼʼ ಎಂದು ಕಣ್ಣೀರಿಡುತ್ತ ಆರೋಪಿಸಿದ್ದಾರೆ.

ನೆಟ್ಟಿಗರೊಬ್ಬರು ಈ ವಿಡಿಯೊ ನೋಡಿ “ಪವಿತ್ರ ಸ್ಥಳದಲ್ಲಿ ನಾಟಕವೇ? ಅದು ನಿಮ್ಮ ಮತ್ತು ದೇವರ ನಡುವೆ ಮಾತ್ರ ಇರಬೇಕು. ಅದನ್ನು ರೀಲ್ಸ್‌ ಬೇರೆ ಮಾಡುತ್ತಿದ್ದೀರಾ? ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಕ್ಯಾಮೆರಾ ಕಂಡರೆ ಸಾಕು ರಾಕಿ ನಾಟಕ ಶುರುʼʼಎಂದು ಕಮೆಂಟ್‌ ಮಾಡಿದ್ದಾರೆ. ಈ ವಿಡಿಯೊ ಜತೆಗೆ ಮತ್ತೊಂದು ಹಳೆಯ ವಿಡಿಯೊ ವೈರಲ್ ಆಗುತ್ತಿದೆ, ಆದಿಲ್ ಖಾನ್ ದುರಾನಿ ಅವರು ರಾಖಿ ಸಾವಂತ್ ಅವರನ್ನು ತಮ್ಮ ಮದುವೆಯ ಬಳಿಕ ಉಮ್ರಾಗೆ ಕರೆದೊಯ್ಯುವುದಾಗಿ ಭರವಸೆ ನೀಡಿರುವ ವಿಡಿಯೊ.

ಇದನ್ನೂ ಓದಿ: Rakhi Sawant: ನನ್ನ ನಗ್ನ ವಿಡಿಯೊಗಳನ್ನು ಆದಿಲ್‌ ಮಾರುತ್ತಿದ್ದ ಎಂದು ರಾಖಿ ಆರೋಪ

ಆದಿಲ್ ಖಾನ್ ದುರಾನಿ ಅವರು ರಾಖಿ ಸಾವಂತ್ ವಿರುದ್ಧ ಹಲವು ಆರೋಪಗಳಿಗೆ ತೆರೆ ಎಳೆದಿದ್ದಾರೆ. ತನ್ನ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ್ದಾರೆ. ರಿತೇಶ್ ಜತೆ ಮದುವೆಯಾಗಿರುವಾಗಲೇ ರಾಖಿ ತನ್ನನ್ನು ಮದುವೆಯಾಗಿದ್ದಾಳೆ ಎಂದು ಆದಿಲ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಮದುವೆಯಾದ ಮೇಲೂ ಆಕೆ ಮೊದಲ ಪತಿ ರಿತೇಶ್​ (Ritesh) ಜತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದಿದ್ದರು. ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್​ ಮಾಡಿದಳು ಎಂದೆಲ್ಲಾ ಹೇಳಿದ್ದರು.

ಇದಾದ ಬಳಿಕ ರಾಖಿ ಸಾವಂತ್​ ಪತ್ರಿಕಾಗೋಷ್ಠಿ ಕರೆದು, ಆದಿಲ್​ ವಿರುದ್ಧ ಕಿಡಿ ಕಾರಿ ಪತಿ ಹೇಗೆಲ್ಲ ಮೋಸ ಮಾಡಿದರು ಎಂದು ತಿಳಿಸಿದ್ದರು.

Exit mobile version