Site icon Vistara News

Rakhi Sawant | ಗುದ್ದಲಿ ಹಿಡಿದು ಬೀದಿಗೆ ಇಳಿದ ರಾಖಿ ಸಾವಂತ್!

Rakhi Sawant

ಬೆಂಗಳೂರು: ರಾಖಿ ಸಾವಂತ್ ಬಾಲಿವುಡ್‌ನ ಬೋಲ್ಡ್ ತಾರೆ. ಸದಾ ಫಿಟ್ ಮತ್ತು ಫೈನ್ ಆಗಿ ವರ್ಕ್ ಔಟ್ ಮಾಡುವ ರಾಖಿ ಇದೀಗ ಬೀದಿಗೆ ಇಳಿದಿದ್ದಾರೆ. ತಾವು ಜಿಮ್‌ಗೆ ಹೋಗುವ ರಸ್ತೆಯಲ್ಲಿ ಗುದ್ದಲಿ ಹಿಡಿದು ಸ್ವಚ್ಛತೆಗೆ ಮುಂದಾಗಿದ್ದಾರೆ.

ಸಾಕಷ್ಟು ಕಸ ಹಲವು ದಿನಗಳು ಇದ್ದ ಕಾರಣಕ್ಕಾಗಿ ತಾವೇ ಗುದ್ದಲಿ ತಗೆದುಕೊಂಡು ಅದನ್ನು ತಗೆಯಲು ಮುಂದಾಗಿದ್ದಾರೆ. ಸತತ ಮಳೆಯಿಂದಾಗಿ ಮುಂಬೈ ಸೇರಿದಂತೆ ಹಲವು ನಗರಗಳು ಕಸದಿಂದ ತುಂಬಿ ಹೋಗಿವೆ. ಇದನ್ನು ಗಮನಿಸಿದ ನಟಿ ರಾಖಿ ಸಾವಂತ್, ತಾವೇ ಗುದ್ದಲಿ ಹಿಡಿದು ಕಸವನ್ನ ತೆಗೆದು ಸ್ವಚ್ಛಗೊಳಿಸಿದ್ದಾರೆ.

ಇದನ್ನೂ ಓದಿ | Fashion News: ರಾಕಿ ಸಾವಂತ್‌ ಜೊತೆಗೆ ಕನ್ನಡತಿ ರಶ್ಮಿ ರ‍್ಯಾಂಪ್ ವಾಕ್‌

ರಸ್ತೆಯನ್ನು ಸ್ವಚ್ಛ ಮಾಡುವುದರ ಜತೆಗೆ ಬಿಎಂಸಿ ಸಿಬ್ಬಂದಿ ಮತ್ತು ಕಮಿಷನರ್‌ ಅವರಿಗೂ ರಾಖಿ ಟೀಕಿಸಿದ್ದಾರೆ. ಕೆಲವರು ಇದನ್ನು ಪ್ರಚಾರದ ಸ್ಟಂಟ್ ಅಂದರೆ, ಇನ್ನು ಕೆಲವರು ಒಂದೊಳ್ಳೆ ಕೆಲಸ ಮಾಡಿದ್ರಲ್ಲ ಬಿಡಿ ಎನ್ನುತ್ತಿದ್ದಾರೆ.

ಉದ್ಯಮಿ ಆದಿಲ್ ಖಾನ್ ದುರಾನಿಯೊಂದಿಗೆ ಸಹ ಜೀವನ ನಡೆಸುತ್ತಿರುವ ರಾಖಿ ಸಾವಂತ್ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ.

ಇದನ್ನೂ ಓದಿ | ಉದಯಪುರ ಶಿರಚ್ಛೇದ ಪ್ರಕರಣ; ಗಿರಾಕಿಗಳಂತೆ ಬಂದಿದ್ದ ಹಂತಕರು!

Exit mobile version