ಬೆಂಗಳೂರು: ಮುಂಬೈನಲ್ಲಿ ಸೆಪ್ಟೆಂಬರ್ 2ರಂದು ನಡೆದ ಕಾರ್ಯಕ್ರಮವೊಂದರಲ್ಲಿ ರಾಖಿ ಸಾವಂತ್ (Rakhi Sawant) ಬೆಳ್ಳಿಯ ಕಿರೀಟ, ಬೆಳ್ಳಿಯ ಪರ್ಸ್ ನೊಂದಿಗೆ ಹೊಸ ವೇಷಭೂಷಣದಲ್ಲಿ ಕಂಡಿದ್ದಾರೆ. ಕೆಲವು ದಿನಗಳ ಹಿಂದಯಷ್ಟೇ ಮಾಜಿ ಪತಿ ಆದಿಲ್ ಖಾನ್ ದುರಾನಿ ಜತೆ ಅವರು ಕಿರಿಕ್ ಮಾಡಿಕೊಂಡು ಮೆಕ್ಕಾ (Mecca) ಮದೀನಾಗೆ ಭೇಟಿ ನೀಡಿ ಬಂದಿದ್ದಾರೆ. ಯಾತ್ರೆ ಮುಗಿಸಿ ಬಂದ ಬಳಿಕ ಅವರ ಮಾತಿನ ಧಾಟಿ ಬದಲಾಗಿದೆ. ವೇಷ-ಭೂಷಣ ಕೂಡ ಬದಲಾಗಿಹೋಗಿದೆ. ‘ಗಂಡಸರು ಹತ್ತಿರಕ್ಕೆ ಬಂದರೆ ಹುಷಾರ್’ ಎಂದು ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಇದೀಗ ರಾಖಿ ಸಾವಂತ್ ಹೇಳಿರುವ ವಿಡಿಯೊ ವೈರಲ್ ಆಗಿದೆ.
ಪ್ರಶಸ್ತಿ ಗೆದ್ದ ಬಳಿಕ ಸುದ್ದಿಗಾರರೊಂದಿಗೆ ರಾಖಿ ಸಾವಂತ್ ಮಾತನಾಡಿದರು. ʻʻಪುರುಷರೇ, ಈ ಟ್ರೋಫಿ ಸಾಕಷ್ಟು ಭಾರವಾಗಿರುವುದರಿಂದ ನನ್ನ ಹತ್ತಿರ ಬರಬೇಡಿ. ಈ ಟ್ರೋಫಿಯಿಂದ ಒಬ್ಬ ವ್ಯಕ್ತಿಗೆ ಪೆಟ್ಟಾದರೆ, ಅವನು ಎದ್ದೇಳಲು ಸಾಧ್ಯವಾಗುವುದಿಲ್ಲ . ಇದು ಮಹಿಳಾ ಶಕ್ತಿಗೆ ಸಿಕ್ಕ ಪ್ರಶಸ್ತಿʼʼಎಂದು ಹೇಳಿಕೊಂಡಿದ್ದಾರೆ. ಪುರುಷರು ತನ್ನಿಂದ ದೂರವಿರಿ ಎಂದು ರಾಖಿ ಸಾವಂತ್ ಎಚ್ಚರಿಕೆಯನ್ನೂ ನೀಡಿದ್ದಾರೆ.‘ನಾನು ಮೆಕ್ಕಾ ಮದೀನಾಗೆ ಹೋಗಿ ಬಂದಿದ್ದೇನೆ. ಗಂಡಸರು ದೂರ ನಿಲ್ಲಿ. ನನ್ನನ್ನು ಮುಟ್ಟಬೇಡಿ. ನಾನು ಪವಿತ್ರಳಾಗಿದ್ದೇನೆ’ ಎಂದು ರಾಖಿ ಸಾವಂತ್ ಗರಂ ಆಗಿದ್ದಾರೆ.
ಇದನ್ನೂ ಓದಿ: Rakhi Sawant: ಮೆಕ್ಕಾದಲ್ಲಿ ರಾಖಿ ಸಾವಂತ್; ಕ್ಯಾಮೆರಾ ಕಂಡರೆ ಸಾಕು ನಾಟಕ ಶುರು ಅಂದ್ರು ನೆಟ್ಟಿಗರು!
ರಾಖಿ ಇತ್ತೀಚೆಗಷ್ಟೇ ತಮ್ಮ ಮೊದಲ ಉಮ್ರಾ ಮುಗಿಸಿ ವಾಪಸಾಗಿದ್ದರು. ಈ ವರ್ಷದ ಆರಂಭದಲ್ಲಿ ಆದಿಲ್ ಖಾನ್ ದುರಾನಿ ಅವರನ್ನು ಮದುವೆಯಾಗುವ ಸಮಯದಲ್ಲಿ ಅವರು ಇಸ್ಲಾಂಗೆ ಮತಾಂತರಗೊಂಡಿದ್ದರು.
ಆದಿಲ್ ಖಾನ್ ದುರಾನಿ ಅವರು ರಾಖಿ ಸಾವಂತ್ ವಿರುದ್ಧ ಹಲವು ಆರೋಪಗಳಿಗೆ ತೆರೆ ಎಳೆದಿದ್ದಾರೆ. ತನ್ನ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ್ದಾರೆ. ರಿತೇಶ್ ಜತೆ ಮದುವೆಯಾಗಿರುವಾಗಲೇ ರಾಖಿ ತನ್ನನ್ನು ಮದುವೆಯಾಗಿದ್ದಾಳೆ ಎಂದು ಆದಿಲ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಮದುವೆಯಾದ ಮೇಲೂ ಆಕೆ ಮೊದಲ ಪತಿ ರಿತೇಶ್ (Ritesh) ಜತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದಿದ್ದರು. ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್ ಮಾಡಿದಳು ಎಂದೆಲ್ಲಾ ಹೇಳಿದ್ದರು.