Site icon Vistara News

Rakhi Sawant: ಪತಿ ಆದಿಲ್ ಖಾನ್​​ ಅರೆಸ್ಟ್ ಆದ ಬೆನ್ನಲ್ಲೇ ಪೊಲೀಸ್ ಠಾಣೆ ಹೊರಗೆ ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸಾವಂತ್

Rakhi Sawant Faints out side of Police Station In Mumbai

#image_title

ಮುಂಬಯಿ: ದಿನಕ್ಕೊಂದು ಹೈಡ್ರಾಮಾ ಮೂಲಕವೇ ಸುದ್ದಿಯಲ್ಲಿರುವ ರಾಖಿ ಸಾವಂತ್ (Rakhi Sawant)​ ಪೊಲೀಸ್ ಠಾಣೆ ಎದುರಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಸುದ್ದಿಯಾಗಿದ್ದಾರೆ. ಕರ್ನಾಟಕ ಮೂಲದ ಆದಿಲ್ ಖಾನ್​ ದುರಾನಿ ಜತೆ ತನಗೆ ಮದುವೆಯಾಗಿದೆ ಎಂದು ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದ ಬಾಲಿವುಡ್​ ನಟಿ ರಾಖಿ ಸಾವಂತ್​ ಇದೀಗ ಆದಿಲ್​ ವಿರುದ್ಧ ಹತ್ತು-ಹಲವು ಆರೋಪಗಳನ್ನು ಮಾಡಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಅದರಂತೆ ಆದಿಲ್​ ಖಾನ್​ರನ್ನು ಮಂಗಳವಾರ ಮುಂಬಯಿಯ ಓಶಿವಾರಾ ಠಾಣೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇದೇ ವೇಳೆ ಠಾಣೆಯ ಹೊರಗೆ ರಾಖಿ ಸಾವಂತ್​ ಅವರು ಎಚ್ಚರ ತಪ್ಪಿ ಬಿದ್ದಿದ್ದರು.

ಓಶಿವಾರಾ ಪೊಲೀಸರು ಆದಿಲ್ ಖಾನ್​ ದುರಾನಿಯನ್ನು ಬಂಧಿಸುತ್ತಿದ್ದಂತೆ ಅದೇ ಠಾಣೆಯ ಹೊರಗೆ ರಾಖಿ ಸಾವಂತ್​ ಅವರು ಮಾಧ್ಯಮ ಸಿಬ್ಬಂದಿಗೆ ಬೈಟ್ ಕೊಡುತ್ತಿದ್ದರು. ಇದೇ ವೇಳೆ ಪ್ರಜ್ಞೆ ತಪ್ಪಿದ್ದಾರೆ. ಬಳಲಿದಂತೆ ಕಾಣಿಸುತ್ತಿದ್ದ ಅವರು ಅಲ್ಲೇ ಬಿದ್ದಿದ್ದಾರೆ. ಬಳಿಕ ಅಲ್ಲಿದ್ದವರೆಲ್ಲ ಸೇರಿ ಅವರ ಮೈಮೇಲೆ ನೀರು ಹಾಕಿ, ನೀರು ಕುಡಿಸಿ ಎತ್ತಿ ಕರೆದುಕೊಂಡುಹೋಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Rakhi Sawant: ರಾಖಿ ಸಾವಂತ್​ ಪತಿ ಆದಿಲ್​ ಖಾನ್​ ದುರಾನಿ ಬಂಧನ; ಆತ ಮೋಸಗಾರ ಎಂದ ನಟಿ!

ರಾಖಿ-ಆದಿಲ್ ಸಂಬಂಧ ಸಿಕ್ಕಾಪಟೆ ಕಾಂಪ್ಲಿಕೇಟ್​ ಆಗಿದೆ. ಆದಿಲ್​ ಖಾನ್​​ಗೆ ಇನ್ನೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧವಿದೆ. ಆತ ತನ್ನ ದುಡ್ಡನ್ನೆಲ್ಲ ಲಪಟಾಯಿಸಿದ್ದಾನೆ. ನನ್ನಮ್ಮನ ಸರ್ಜರಿಗೆ ಹಣ ಕೊಡಲಿಲ್ಲ. ನಾನು ಇನ್ನೊಬ್ಬಳು ಶ್ರದ್ಧಾ ವಾಳ್ಕರ್​ ಆಗಲು ಸಿದ್ಧಳಿಲ್ಲ ಎಂದು ರಾಖಿ ಸಾವಂತ್​ ಅತ್ತುಗೋಳಾಡಿದ್ದರು. ಹಾಗೇ, ಪೊಲೀಸರಿಗೂ ದೂರು ನೀಡಿದ್ದರು. ಅದರ ಬೆನ್ನಲ್ಲೇ ಆದಿಲ್​ ಅರೆಸ್ಟ್ ಆಗಿದೆ. ಮಂಗಳವಾರ ರಾಖಿ ಸಹೋದರ ರಾಕೇಶ್​ ಸಾವಂತ್​ ಇನ್ನಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ‘ನನ್ನ ಸೋದರಿ ರಾಖಿಯನ್ನು ಕೊಲ್ಲಲು ಆದಿಲ್ ಖಾನ್​ ದುರಾನಿ ಪ್ರಯತ್ನ ಮಾಡಿದ್ದಾನೆ. ಮಂಗಳವಾರ ಕೂಡ ಆಕೆಯೆಡೆಗೆ ಗ್ಲಾಸ್​ ಎಸೆದ. ಈ ಮದುವೆಯನ್ನು ಉಳಿಸಿಕೊಳ್ಳಬೇಕು ಎಂದು ರಾಖಿ ತುಂಬ ಯತ್ನಿಸಿದಳು. ಆದರೆ ಆದಿಲ್​ ಅದಕ್ಕೆ ಕೊಡಲಿಲ್ಲ’ ಎಂದು ರಾಕೇಶ್​ ಹೇಳಿದ್ದಾರೆ.

Exit mobile version