ಬೆಂಗಳೂರು : ನಟಿ ರಾಖಿ ಸಾವಂತ್ (Rakhi Sawant), ಪ್ರಸ್ತುತ ಆದಿಲ್ ಖಾನ್ ದುರಾನಿ ಅವರೊಂದಿಗಿನ ಮದುವೆಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸೋಮವಾರ ಅಭಿಮಾನಿಯೊಬ್ಬರು ರಾಕಿ ಜತೆಗೆ ಫೋಟೊ ಕ್ಲಿಕ್ಕಿಸುವ ವೇಳೆ ನಡೆದುಕೊಂಡ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ನಟಿ. ಇದೀಗ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಖಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ವ್ಯಕ್ತಿಯೊಬ್ಬರು ಪ್ರಯತ್ನಿಸಿದಾಗ ರಾಕಿ ಸಾವಂತ್ ಅಸಮಾಧಾನಗೊಂಡಿದ್ದಾರೆ. ”ಅಣ್ಣ ಸ್ಪಲ್ಪ ದೂರ ನಿಲ್ಲಿ. ನಾನು ಮದುವೆಯಾಗಿದ್ದೇನೆ. ಈ ಮೊದಲು ಬೇರೆಯಾಗಿತ್ತುʼʼಎಂದು ಅಭಿಮಾನಿಗೆ ರಾಕಿ ಸಾವಂತ್ ಹೇಳಿರುವ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ | Fashion News: ರಾಕಿ ಸಾವಂತ್ ಜೊತೆಗೆ ಕನ್ನಡತಿ ರಶ್ಮಿ ರ‍್ಯಾಂಪ್ ವಾಕ್ `
ರಾಖಿ ಹೇಳುವ ಪ್ರಕಾರ ಕಳೆದ ವರ್ಷವೇ ನಟಿ ಆದಿಲ್ ಅವರನ್ನು ಮದುವೆಯಾಗಿದ್ದಾರೆ. ಆದಿಲ್ ಪರಿಚಯವಾಗಿ ಮೂರು ತಿಂಗಳಲ್ಲಿ ಮದುವೆಯಾಗಿದ್ದಾರೆ. ರಾಖಿ ಸಾವಂತ್ ತಾಯಿ ಜಯಾ ಭೇಡಾ ಅವರು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ರಾಖಿ, ಆಸ್ಪತ್ರೆಯಿಂದಲೇ ಲೈವ್ ಮಾಡಿ ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಇದ್ದು ನೀವೆಲ್ಲರೂ ಆಕೆಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು. ಆಸ್ಪತ್ರೆ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯನ್ನು ಕೂಡಾ ರಾಖಿ ಸಾವಂತ್ ತೋರಿಸಿದ್ದರು. ಇದರ ಬೆನ್ನಲ್ಲೇ ರಾಖಿ ಸಾವಂತ್, ತಾವು ಆದಿಲ್ ಖಾನ್‌ನನ್ನು ಮದುವೆಯ ಫೋಟೋ ಹಂಚಿಕೊಂಡಿದ್ದರು. ಆದಿಲ್ ಜತೆಗೆ ಮದುವೆಯ ನಂತರ ರಾಖಿ ತನ್ನ ಹೆಸರನ್ನು ‘ರಾಖಿ ಸಾವಂತ್ ಫಾತಿಮಾ’ ಎಂದು ಬದಲಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ | Rakhi Sawant | ನಟಿ ರಾಕಿ ಸಾವಂತ್ ಈಗ ಮೈಸೂರು ಸೊಸೆ, ಹುಡುಗ ಯಾರು?