Site icon Vistara News

Rakhi Sawant : ಪತಿ ಆದಿಲ್‌ ಅಕ್ರಮ ಸಂಬಂಧದ ಬಗ್ಗೆ ಸುಳಿವು ನೀಡಿದ ರಾಖಿ ಸಾವಂತ್‌: ಗಳಗಳನೆ ಅತ್ತ ನಟಿ

Rakhi Sawant hints at husband Adil Khan's extra-marital affair,

ಬೆಂಗಳೂರು: ರಾಖಿ ಸಾವಂತ್ (Rakhi Sawant) ತಮ್ಮ ʼಹೊಸ ಗಂಡʼ ಆದಿಲ್ ಖಾನ್ ಅವರ ಅಕ್ರಮ ಸಂಬಂಧದ ಕುರಿತು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡಿರುವ ರಾಖಿ ಸಾವಂತ್, ಮಾಧ್ಯಮಗಳಿಗೆ ವಿಶೇಷವಾದ ಮನವಿಯನ್ನು ಸಲ್ಲಿಸುವ ಭರದಲ್ಲಿ ತಮ್ಮ ಮದುವೆಯ ಬಗ್ಗೆ ಮಾತನಾಡಿ ಭಾವುಕರಾದರು. ಆದಿಲ್ ವಿರುದ್ಧ ಅವರು ಬೇರೆ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಮಾಡಿದ್ದಾರೆ.

ರಾಖಿ ಸಾವಂತ್‌ ಅವರು ಪತಿ ಆದಿಲ್‌ ಇನ್ನೊಬ್ಬ ಮಹಿಳೆಯ ಜತೆ ಸಲುಗೆಯಿಂದ ಇರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದಿಲ್ ದುರಾನಿ ಜತೆಗೆ ಯಾವುದೇ ಸಂದರ್ಶನಗಳನ್ನು ನಡೆಸದಂತೆ, ಅವರೊಂದಿಗೆ ಸಂವಹನ ನಡೆಸದಂತೆ ರಾಖಿ ವಿನಂತಿಸಿದ್ದಾರೆ. “ನೀವು ಆದಿಲ್‌ನ ಯಾವುದೇ ಸಂದರ್ಶನಗಳನ್ನು ತೆಗೆದುಕೊಳ್ಳಬಾರದು ಅಥವಾ ಅವನನ್ನು ದೊಡ್ಡ ಸ್ಟಾರ್ ಮಾಡಲು ಪ್ರಯತ್ನಿಸುವುದು ನನಗೆ ಇಷ್ಟವಿಲ್ಲ. ನಾನು ಆದಿಲ್‌ಗೆ ಹತ್ತು ಅವಕಾಶ ನೀಡಿದೆ. ಆದಿಲ್ ಸುಧಾರಿಸಿಕೊ, ಇದು ಸರಿಯಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಆದರೆ ಅವನು ಕೇಳಲಿಲ್ಲ. ಆ ಹುಡುಗಿಗೆ ಸಹ ನಾನು ಹೇಳಲು ಇಚ್ಛಿಸುತ್ತೇನೆ. ಯಾರು ಪತ್ನಿಗೆ ವಿಧೇಯರಾಗಿ ಇರುವುದಿಲ್ಲವೊ ಅವರು ಯಾರಿಗೂ ವಿಧೇಯರಾಗಿ ಇರುವುದಿಲ್ಲ” ಎಂದಿದ್ದಾರೆ. ಅಂದ ಹಾಗೆ ರಾಖಿ ಸಾವಂತ್‌ ಆದಿಲ್‌ರನ್ನು ಮದುವೆಯಾಗಿ ಹತ್ತು ದಿನವೂ ಕಳೆದಿಲ್ಲ!

ಇದನ್ನೂ ಓದಿ: Rakhi Sawant: ತಾಯಿಯ ಅಂತಿಮ ವಿಧಿ ವಿಧಾನ ಪೂರೈಸಿದ ರಾಖಿ ಸಾವಂತ್‌ ದಂಪತಿ: ವಿಡಿಯೊ ವೈರಲ್‌

ಇದನ್ನೂ ಓದಿ: Rakhi Sawant Mother Dies | ನಟಿ ರಾಖಿ ಸಾವಂತ್‌ ತಾಯಿ ಜಯಾ ಭೇದಾ ಇನ್ನಿಲ್ಲ

ಇತ್ತೀಚೆಗಷ್ಟೆ ರಾಖಿ ಸಾವಂತ್ ತಾಯಿ ನಿಧನರಾದಾಗ ಅವರ ಅಂತಿಮ ಸಂಸ್ಕಾರದಲ್ಲಿ ಆದಿಲ್‌ ಭಾಗವಹಿಸಿದ್ದರು. ಅವರ ಎದೆಗೆ ಒರಗಿ ರಾಖಿ ಅತ್ತಿದ್ದರು. ಆದರೆ ಆ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದೀಗ ಆದಿಲ್ ವಿರುದ್ಧ ರಾಖಿ ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ. ರಾಖಿ ಸಾವಂತ್ ಅವರ ತಾಯಿ ಜಯಾ ಜನವರಿ 28ರಂದು ಮುಂಬೈನಲ್ಲಿ ನಿಧನರಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

Exit mobile version