Site icon Vistara News

Rakhi Sawant: ನನ್ನ ನಗ್ನ ವಿಡಿಯೊಗಳನ್ನು ಆದಿಲ್‌ ಮಾರುತ್ತಿದ್ದ ಎಂದು ರಾಖಿ ಆರೋಪ

Rakhi Sawant with Adil Khan Durrani

ಬೆಂಗಳೂರು: ನಟಿ ರಾಖಿ ಸಾವಂತ್ (Rakhi Sawant) ಅವರು ತಮ್ಮ ವಿಚ್ಛೇದಿತ ಪತಿ ಆದಿಲ್ ಖಾನ್ ದುರಾನಿ ತಮ್ಮ ‘ನಗ್ನ ವಿಡಿಯೊ’ವನ್ನು ವ್ಯಕ್ತಿಯೊಬ್ಬರಿಗೆ 47-50 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆಗಸ್ಟ್‌ 23ರ ಪತ್ರಿಕಾಗೋಷ್ಠಿಯಲ್ಲಿ, ರಾಖಿ ಅವರು ಆದಿಲ್ ತಮ್ಮ ಹನಿಮೂನ್ ಸಮಯದಲ್ಲಿ ನನ್ನ ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಿದರು.

ಮಾಧ್ಯಮಗಳ ಮುಂದೆ ರಾಖಿ ಮಾತನಾಡಿ ʻʻನಾನು ಬಾತ್‌ ರೂಮ್‌ನಲ್ಲಿದ್ದೆ. ಅವನು ಅಲ್ಲಿಂದ ವಿಡಿಯೊಗಳನ್ನು ಮಾಡುತ್ತಿದ್ದ. ನಾನು ಅವನ ಹೆಂಡತಿ. ಆದರೆ ಅವನು ನನ್ನ ಮೇಲೆ ಮನೆಯಲ್ಲೇ ಅತ್ಯಾಚಾರ ಮಾಡುತ್ತಿದ್ದ” ಎಂದಿದ್ದಾರೆ. ಇದನ್ನು ಯಾಕೆ ನೀವು ಸಹಿಸಿಕೊಳ್ಳುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು “ನನ್ನ ವಿಡಿಯೊ ಅವನ ಬಳಿಯಿತ್ತು. ವಿಡಿಯೊ ವೈರಲ್‌ ಆದ ಬಳಿಕ, ನನ್ನ ನಗ್ನ. ವಿಡಿಯೊ ಎಲ್ಲಾ ಜಗತ್ತು ನೋಡಿದ ಬಳಿಕ ನಾನು ಎಲ್ಲಿಗೆ ಹೋಗಲಿ, ಯಾವ ಸಮಾಜದಲ್ಲಿರಲಿ. ಯಾರಿಗೆ ಮುಖ ತೋರಿಸಲಿ? ಇದಾದ ಬಳಿಕ ನಾನು ವಿಷ ತೆಗೆದುಕೊಂಡು ಸಾಯಲೇ? ನಾನು ಸಾಮಾನ್ಯ ಹುಡುಗಿ ಅಲ್ಲ ಭಾರತದ ಸೆಲೆಬ್ರಿಟಿ, ಒಂದು ವರ್ಷದ ಒಳಗೆ ನನಗೆ ತಲಾಖ್‌ ಕೊಟ್ಟ” ಎಂದು ಮಾಜಿ ಪತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಖಿ ಸಾವಂತ್ ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೃತಪಟ್ಟ ತಾಯಿ ಯನ್ನು ಸಹ ನೋಡಲು ಬೇಗ ಹೋಗಲಿಲ್ಲ ಎಂದು ಇನ್ನೊಂದೆಡೆ ಆದಿಲ್‌ ಆರೋಪಿಸಿದ್ದಾರೆ. ‘ನಾನು ವಿಷಯ ತಿಳಿದು ತಕ್ಷಣ ನೋಡಲು ಹೋಗಲು ಸಿದ್ಧನಾದೆ. ಆದರೆ ಆಕೆ ಯಾವುದೇ ರೀತಿ ಗಡಿಬಿಡಿಯಲ್ಲಿದ್ದಂತೆ ಕಾಣಲಿಲ್ಲ. ನೋಡಿದರೆ ಆಕೆ ಮೀಡಿಯಾ ಬರದೆ ಹೋಗಲಾರೆ ಎಂದಳು. ಆಕೆಗೆ ಪ್ರಚಾರದ ಹುಚ್ಚು.’ ಎಂದು ಆದಿಲ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: Rakhi Sawant: ನನ್ನ ಬೆತ್ತಲೆ ವಿಡಿಯೊಗಳನ್ನು ಮಾರಾಟ ಮಾಡಿದ್ದಾನೆ: ಆದಿಲ್ ವಿರುದ್ಧ ರಾಕಿ ಸಾವಂತ್‌ ಹೊಸ ಆರೋಪ

‘ಮಧ್ಯಾಹ್ನ 3.30ಕ್ಕೆ ರಾಖಿ ತಾಯಿ ತೀರಿಕೊಂಡಿರುವ ವಿಷಯ ಗೊತ್ತಾಯಿತು. ನಾನು ತಕ್ಷಣ ರಾಖಿ ಬಳಿ ನೋಡಲು ಹೋಗುವಂತೆ ತಿಳಿಸಿದೆ. ಆದರೆ ಆಕೆ ಹೋಗಲು ನಿರಾಕರಿಸಿದಳು. ಯಾಕೆಂದರೆ ಮೀಡಿಯಾ ಅವತ್ತು ಜವಾನ್ ಸಿನಿಮಾದ ಯಾವುದೋ ಪ್ರೋಗ್ರಾಂ ಕವರ್ ಮಾಡುವಲ್ಲಿ ಇದ್ದರು. ಹೀಗಾಗಿ ರಾತ್ರಿ 7.30ಕ್ಕೆ ಮೀಡಿಯಾದವರು ಬಂದ ನಂತರ ರಾಖಿ ಸಾವಂತ್ ತನ್ನ ತಾಯಿಯ ಮೃತದೇಹವನ್ನು ನೋಡಲು ಹೋದಳು. ನಾನು ಅವತ್ತೇ ನಾನು ಈಕೆ ಅದೆಷ್ಟು ಕೆಟ್ಟ ಹೆಂಗಸೆಂದು ಮನಸ್ಸಿನಲ್ಲೇ ಅಂದುಕೊಂಡೆ’ ಎಂದು ಆದಿಲ್ ಖಾನ್ ಹೇಳಿದ್ದಾರೆ.

Exit mobile version