Site icon Vistara News

Rakhi Sawant | ನಟಿ ರಾಕಿ ಸಾವಂತ್ ಈಗ ಮೈಸೂರು ಸೊಸೆ, ಹುಡುಗ ಯಾರು?

Rakhi Sawant

ಬೆಂಗಳೂರು : ಬಾಲಿವುಡ್‌ ನಟಿ ರಾಕಿ ಸಾವಂತ್‌‌ (Rakhi Sawant ) ಸುದ್ದಿಯಲ್ಲೇ ಇರುತ್ತಾರೆ. ಇದೀಗ ಮೈಸೂರು ಹುಡುಗ ಆದಿಲ್ ಜತೆ ಸುತ್ತುತ್ತಿದ್ದ ಅವರು, ಅದೇ ಆದಿಲ್ ಜತೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಸೊಷಿಯಲ್‌ ಮೀಡಿಯಾದಲ್ಲಿ ಆದಿಲ್ ಮತ್ತು ರಾಖಿ ಸಾವಂತ್ ಮದುವೆಯನ್ನು ರಿಜಿಸ್ಟರ್ ಮಾಡಿಸುತ್ತಿರುವ ಫೋಟೊಗಳು ಹರಿದಾಡುತ್ತಿವೆ.

ಬಾಯ್ ಫ್ರೆಂಡ್ ಆದಿಲ್  ಜತೆ ಕಾಣಿಸಿಕೊಂಡಿದ್ದ ರಾಕಿ ಸಾವಂತ್‌ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಇದೀಗ ಕುಟುಂಬಕ್ಕೆ ಸೊಸೆಯಾಗಿ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. 

ಇದನ್ನೂ ಓದಿ | Fashion News: ರಾಕಿ ಸಾವಂತ್‌ ಜೊತೆಗೆ ಕನ್ನಡತಿ ರಶ್ಮಿ ರ‍್ಯಾಂಪ್ ವಾಕ್‌

ಈ ಮದುವೆ ಕುರಿತಾಗಿ ಆದಿಲ್ ಆಗಲಿ ಅಥವಾ ರಾಖಿ ಸಾವಂತ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ರಿಜಿಸ್ಟರ್‌ ಮದುವೆ ಆಗಿರುವ ಕುರಿತು ಸಹಿ ಮಾಡುತ್ತಿರುವ ಪತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಬಿಗ್ ಬಾಸ್ ಮರಾಠಿ 4ರ ನಂತರ, ರಾಖಿ ಆದಿಲ್ ಅವರೊಂದಿಗೆ ಮೊದಲಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ರಾಖಿ ಅವರು ರಿತೇಶ್‌ನಿಂದ ಬೇರ್ಪಟ್ಟ ನಂತರ ಇಬ್ಬರೂ ಡೇಟಿಂಗ್ ಪ್ರಾರಂಭಿಸಿದರು.

ಇದನ್ನೂ ಓದಿ | Rakhi Sawant | ಗುದ್ದಲಿ ಹಿಡಿದು ಬೀದಿಗೆ ಇಳಿದ ರಾಖಿ ಸಾವಂತ್!

Exit mobile version