Site icon Vistara News

Rakhi Sawant: ರಾಖಿ ಸಾವಂತ್‌ ಬಯೋಪಿಕ್‌ಗೆ ರಿಷಬ್‌ ಶೆಟ್ಟಿ ನಿರ್ದೇಶನ; ನಟಿಯ ಹೊಸ ಆಸೆ ಪೂರೈಸ್ತಾರಾ ಶೆಟ್ರು?

Rakhi Sawant Rishab Shetty

ಬೆಂಗಳೂರು: ರಾಖಿ ಸಾವಂತ್ (Rakhi Sawant) ಆಗಾಗ ವೈಯಕ್ತಿಕ ವಿಚಾರಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಹೆಚ್ಚಾಗಿ ಮಾಜಿ ಪತಿ ಆದಿಲ್ ಖಾನ್ ದುರಾನಿ (Adil Khan Durrani ) ಕುರಿತ ವಿಚಾರಗಳಿಗೆ ಸೌಂಡ್‌ ಮಾಡುತ್ತಲೇ ಇರುತ್ತಾರೆ. ಆದರೀಗ ನಟಿ ತಮ್ಮ ಬಯೋಪಿಕ್‌ ಬಗ್ಗೆ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ತನ್ನ ಜೀವನ ಚರಿತ್ರೆಯನ್ನು ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ ರಾಖಿ ಸಾವಂತ್‌.

ಕೆಲವು ದಿನಗಳ ಹಿಂದೆ ರಾಖಿ ಸಾವಂತ್​ ಅವರ ಮಾಜಿ ಪತಿ ಆದಿಲ್​ ಖಾನ್​ ಮನೆ ಮುಂದೆ ಬುಲ್ಡೋಜರ್​ ತಂದು ಹೈಡ್ರಾಮಾ ಮಾಡಿದ್ದರು. ಮದುವೆ ಬಳಿಕ ತಾವು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವುದಾಗಿ ಈಗಾಗಲೇ ರಾಖಿ ಸಾವಂತ್ ಹೇಳಿದ್ದಾರೆ. ಅವರು ಫಾತಿಮಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಮೆಕ್ಕಾ ಮದೀನಾಗೂ ಅವರು ಹೋಗಿ ಬಂದಿದ್ದಾರೆ. ಆಗಾಗ ತಮ್ಮ ಹೊಸ ಅವತಾರಗಳಿಂದ ಮಾಧ್ಯಮದ ಮುಂದೆ ಅದೆಷ್ಟೋ ಬಾರಿ ಅತ್ತಿದ್ದೂ ಇದೆ. ಇದೀಗ ರಾಖಿ ಸಾವಂತ್‌ ಜೀವನ ಕಥೆ ಸಿನಿಮಾವಾಗುತ್ತಿದೆಯಂತೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್​ ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನನಗೆ ಕಾಂತಾರ ಚಿತ್ರದ ನಿರ್ದೇಶಕ ರಿಷಬ್​ ಶೆಟ್ಟಿ ಹೆಚ್ಚು ಇಷ್ಟ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ. ಮೈಸೂರಿನಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಹೇಳಿದ್ದಾರೆ.

ಇದನ್ನೂ ಓದಿ: Rakhi Sawant: ನನ್ನ ಸಾವಿಗೆ ರಾಖಿ ಸಾವಂತ್ ಕಾರಣ ಎಂದ ಆದಿಲ್; ಮಾಜಿ ಪತಿಯಿಂದ ಮತ್ತೊಂದು ದೂರು!

ಆದಿಲ್ ಖಾನ್ ದುರಾನಿ ಅವರು ರಾಖಿ ಸಾವಂತ್ ವಿರುದ್ಧ ಹಲವು ಆರೋಪಗಳಿಗೆ ತೆರೆ ಎಳೆದಿದ್ದಾರೆ. ತನ್ನ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ್ದಾರೆ. ರಿತೇಶ್ ಜತೆ ಮದುವೆಯಾಗಿರುವಾಗಲೇ ರಾಖಿ ತನ್ನನ್ನು ಮದುವೆಯಾಗಿದ್ದಾಳೆ ಎಂದು ಆದಿಲ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಮದುವೆಯಾದ ಮೇಲೂ ಆಕೆ ಮೊದಲ ಪತಿ ರಿತೇಶ್​ (Ritesh) ಜತೆ ಸಂಬಂಧವನ್ನೂ ಇಟ್ಟುಕೊಂಡಿದ್ದಳು ಎಂದಿದ್ದರು. ನನ್ನದಲ್ಲದ ತಪ್ಪಿಗೆ ನಾನು ಜೈಲು ಅನುಭವಿಸುವಂತಾಯಿತು. ರಾಖಿ ನನ್ನನ್ನು ಟ್ರ್ಯಾಪ್​ ಮಾಡಿದಳು ಎಂದೆಲ್ಲಾ ಹೇಳಿದ್ದರು. ಇದಾದ ಬಳಿಕ ರಾಖಿ ಸಾವಂತ್​ ಪತ್ರಿಕಾಗೋಷ್ಠಿ ಕರೆದು, ಆದಿಲ್​ ವಿರುದ್ಧ ಕಿಡಿ ಕಾರಿ ಪತಿ ಹೇಗೆಲ್ಲ ಮೋಸ ಮಾಡಿದರು ಎಂದು ತಿಳಿಸಿದ್ದರು.

Exit mobile version