ಬೆಂಗಳೂರು: ರಾಖಿ ಸಾವಂತ್ (Rakhi Sawant) ಮಾಜಿ ಪತಿ ಆದಿಲ್ ಖಾನ್ ದುರಾನಿ (Adil Khan Durrani ) ಅವರೊಂದಿಗಿನ ಸಂಬಂಧದ ಕುರಿತಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಅನೇಕ ಆರೋಪಗಳನ್ನು ಮಾಡುತ್ತಿವೆ. ರಾಖಿ ಸಾವಂತ್ ಈ ಬಗ್ಗೆ ವಿಡಿಯೊ ಹಂಚಿಕೊಂಡಿರುವುದು ಇದೇನು ಮೊದಲಲ್ಲ. ಜೈಲಿನಿಂದ ಹೊರ ಬರುತ್ತಿದ್ದಂತೆಯೇ ನಟಿ ರಾಖಿ ಸಾವಂತ್ ಬಗ್ಗೆ ಆದಿಲ್ ಕೂಡ ಆರೋಪಗಳನ್ನು ಮಾಡಿದ್ದರು. ‘ತನ್ನಿಂದಾಗಿ ರಾಖಿ ಪ್ರೆಗ್ನೆಂಟ್ ಆಗಿದ್ದಳು ಎಂದು ಸುಳ್ಳು ಹೇಳಿದ್ದಾಳೆ. ಅವಳಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಬಸುರಿಯಾಗಲು ಸಾಧ್ಯವೇ ಇಲ್ಲ. ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿದ್ದಾಳೆ’ ಎಂದು ಆದಿಲ್ ಹೇಳಿದ್ದಾನೆ. ಈ ಬಗ್ಗೆ ವಿಡಿಯೊದಲ್ಲಿ ರಾಖಿ ಸಮರ್ಥಿಸಿಕೊಂಡಿದ್ದಾರೆ.
ರಾಖಿ ವೈದ್ಯರ ಜತೆ ಬಂದು ವಿಡಿಯೊ ಮಾಡಿ ಮಾತನಾಡಿದ್ದಾರೆ. ʻನನಗೆ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ. ಮಗುವನ್ನು ಹೆರಲು ನಾನು ಸಮರ್ಥಳುʼʼ ಎಂದು ಹೇಳಿದ್ದಾರೆ. ಈ ವಿಷಯದ ಕುರಿತು ವೈದ್ಯರನ್ನೂ ಮಾತನಾಡಿಸಿದ್ದಾರೆ. ಆ ವಿಡಿಯೊವನ್ನು ಶೇರ್ ಕೂಡ ಮಾಡಿದ್ದಾರೆ ಕೆಲವರು ಆದಿಲ್ಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ಇತರರು ರಾಖಿಯನ್ನು ಬೆಂಬಲಿಸುತ್ತಿದ್ದಾರೆ. ತೇಜ್ ಜೊತೆ ಈಗಲೂ ರಾಖಿ ಸಂಪರ್ಕದಲ್ಲಿ ಇದ್ದಾಳೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ ಆದಿಲ್.
ನನ್ನ ನಗ್ನ ವಿಡಿಯೊಗಳನ್ನು ಆದಿಲ್ ಮಾರುತ್ತಿದ್ದ ಎಂದ ರಾಖಿ
ನಟಿ ರಾಖಿ ಸಾವಂತ್ (Rakhi Sawant) ಅವರು ತಮ್ಮ ವಿಚ್ಛೇದಿತ ಪತಿ ಆದಿಲ್ ಖಾನ್ ದುರಾನಿ ತಮ್ಮ ‘ನಗ್ನ ವಿಡಿಯೊ’ವನ್ನು ವ್ಯಕ್ತಿಯೊಬ್ಬರಿಗೆ 47-50 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ ಎಂತಲೂ ಆರೋಪಿಸಿದ್ದಾರೆ. ಆಗಸ್ಟ್ 23ರ ಪತ್ರಿಕಾಗೋಷ್ಠಿಯಲ್ಲಿ, ರಾಖಿ ಅವರು ಆದಿಲ್ ತಮ್ಮ ಹನಿಮೂನ್ ಸಮಯದಲ್ಲಿ ನನ್ನ ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Rakhi Sawant: ನನ್ನ ನಗ್ನ ವಿಡಿಯೊಗಳನ್ನು ಆದಿಲ್ ಮಾರುತ್ತಿದ್ದ ಎಂದು ರಾಖಿ ಆರೋಪ
ಮಾಧ್ಯಮಗಳ ಮುಂದೆ ರಾಖಿ ಮಾತನಾಡಿ ʻʻನಾನು ಬಾತ್ ರೂಮ್ನಲ್ಲಿದ್ದೆ. ಅವನು ಅಲ್ಲಿಂದ ವಿಡಿಯೊಗಳನ್ನು ಮಾಡುತ್ತಿದ್ದ. ನಾನು ಅವನ ಹೆಂಡತಿ. ಆದರೆ ಅವನು ನನ್ನ ಮೇಲೆ ಮನೆಯಲ್ಲೇ ಅತ್ಯಾಚಾರ ಮಾಡುತ್ತಿದ್ದ” ಎಂದಿದ್ದಾರೆ. ಇದನ್ನು ಯಾಕೆ ನೀವು ಸಹಿಸಿಕೊಳ್ಳುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು “ನನ್ನ ವಿಡಿಯೊ ಅವನ ಬಳಿಯಿತ್ತು. ವಿಡಿಯೊ ವೈರಲ್ ಆದ ಬಳಿಕ, ನನ್ನ ನಗ್ನ ವಿಡಿಯೊ ಎಲ್ಲಾ ಜಗತ್ತು ನೋಡಿದ ಬಳಿಕ ನಾನು ಎಲ್ಲಿಗೆ ಹೋಗಲಿ, ಯಾವ ಸಮಾಜದಲ್ಲಿರಲಿ. ಯಾರಿಗೆ ಮುಖ ತೋರಿಸಲಿ? ಇದಾದ ಬಳಿಕ ನಾನು ವಿಷ ತೆಗೆದುಕೊಂಡು ಸಾಯಲೇ? ನಾನು ಸಾಮಾನ್ಯ ಹುಡುಗಿ ಅಲ್ಲ ಭಾರತದ ಸೆಲೆಬ್ರಿಟಿ, ಒಂದು ವರ್ಷದ ಒಳಗೆ ನನಗೆ ತಲಾಖ್ ಕೊಟ್ಟ” ಎಂದು ಮಾಜಿ ಪತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.