Site icon Vistara News

ARM Teaser: ಮಲಯಾಳಿ ಹಿರೋನ ಪ್ಯಾನ್ ಇಂಡಿಯಾ ಸಿನಿಮಾ ಟೀಸರ್​ ಬಿಡುಗಡೆ ಮಾಡಿದ ನಟ ರಕ್ಷಿತ್ ಶೆಟ್ಟಿ

rakhit shetty release tovino thomas ARM movie Teaser

#image_title

‘ಮಿನ್ನಲ್ ಮುರಳಿ’ ಎಂಬ ಮಲಯಾಳಂ ಭಾಷೆಯ, ಸೂಪರ್ ಹೀರೋ ಚಲನಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ನಟ ಟೊವಿನೋ ಥಾಮಸ್​ ಅವರ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ ‘ಅಜಯಂತೆ ರಂದಂ ಮೋಷನಂ‘ (Ajayante Randam Moshanam- ARM)ನ ಟೀಸರ್​ ಇಂದು ಬಿಡುಗಡೆಯಾಗಿದೆ. ಸಿನಿಮಾದ ಕನ್ನಡ ಟೀಸರ್​ನ್ನು ಸಿಂಪಲ್​ ಸ್ಟಾರ್ ರಕ್ಷಿತ್​ ಶೆಟ್ಟಿಯವರು ರಿಲೀಸ್ ಮಾಡಿದ್ದಾರೆ. ಟೊವಿನೋ ಥಾಮಸ್​ ಅವರ ಸಿನಿ ಬದುಕಿನ ಅತ್ಯಂತ ಮಹತ್ವದ ಪ್ರಾಜೆಕ್ಟ್​ ಎನ್ನಿಸಿರುವ ‘ಅಜಯಂತೆ ರಂದಂ ಮೋಷನಂ’ ಸಿನಿಮಾದ ಟೀಸರ್​​ನ್ನು ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಹಿಂದಿಯಲ್ಲಿ ಹೃತಿಕ್ ರೋಷನ್, ತೆಲುಗಿನಲ್ಲಿ ನಾನಿ, ತಮಿಳಿನಲ್ಲಿ ಲೋಕೇಶ್ ಕನಕರಾಜ್ ಮತ್ತು ಆರ್ಯ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಸೋಷಿಯಲ್ ಮೀಡಿಯಾ ಮೂಲಕ ಬಿಡುಗಡೆ ಮಾಡಿದ್ದಾರೆ.

ಕನ್ನಡ ಟೀಸರ್​ ಬಿಡುಗಡೆ ಮಾಡಿದ ರಕ್ಷಿತ್ ಶೆಟ್ಟಿ ‘ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ತುಂಬ ಖುಷಿಯಾಯಿತು. ಈ ಸಿನಿಮಾದಲ್ಲಿ ಟೊವಿನೋ ಥಾಮಸ್ ಅವರ ನಟನೆಯನ್ನು ನೋಡಲು ಉತ್ಸುಕನಾಗಿದ್ದೇನೆ. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ. ಹಾಗೇ, ಟೀಸರ್​​ನ ಯೂಟ್ಯೂಬ್ ಲಿಂಕ್ ಅಡ್ರೆಸ್ ಕೊಟ್ಟಿದ್ದಾರೆ. ಹಿಂದಿಯಲ್ಲಿ ಬಿಡುಗಡೆ ಮಾಡಿದ ಹೃತಿಕ್ ರೋಷನ್ ಅವರು ‘ARM ಸಿನಿಮಾದ ಹಿಂದಿ ಟೀಸರ್​ ಬಿಡುಗಡೆ ಮಾಡಿದ್ದು ಖುಷಿಯಾಯಿತು. ಮಲಯಾಳಂ ಸಿನಿಮಾ ಇಂಡಸ್ಟ್ರಿಯ ತಾರಾಗಣ ಸೇರಿಕೊಂಡು ಒಂದು ಮಹಾತ್ವಾಕಾಂಕ್ಷಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ.

ARM ಕನ್ನಡ ಟೀಸರ್ ಇಲ್ಲಿದೆ

ಟೊವಿನೋ ಥಾಮಸ್ ಅವರು ಅಜಯಂತೆ ರಂದಂ ಮೋಷನಂ ಸಿನಿಮಾದಲ್ಲಿ ಮಾಸ್ ಅವತಾರ ತಾಳಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಘಟನೆ ಸುತ್ತ ಇಡೀ ಟೀಸರ್ ಸಾಗುತ್ತದೆ. ಈ ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ.

ಟೊವಿನೋ ಥಾಮಸ್ ಜೋಡಿಯಾಗಿ ಕೃತಿ ನಟಿಸುತ್ತಿದ್ದು, ಉಳಿದಂತೆ ನಟಿಯರಾದ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಜಿತಿನ್ ಲಾಲ್ ನಿರ್ದೇಶಿಸುತ್ತಿದ್ದು ಇದು ಇವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಬಾಸಿಲ್ ಜೋಸೆಫ್, ಕಿಶೋರ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಜಗದೀಶ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿರುವ 3ಡಿಯಲ್ಲಿ ತೆರೆ ಕಾಣುವ ‘ಅಜಯಂತೆ ರಂದಂ ಮೋಷನಂ’ ಚಿತ್ರವನ್ನು ಯುಜಿಎಂ ಪ್ರೊಡಕ್ಷನ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಮ್ಯಾಜಿಕ್ ಫ್ರೇಮ್ಸ್ ಸಹ ನಿರ್ಮಾಣ ಮಾಡುತ್ತಿದೆ.

Exit mobile version