ಮುಂಬೈ: ಕರಣ್ ಜೋಹರ್ ನಿರ್ದೇಶನದ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ‘(Rocky aur Rani Kii Prem Kahaani) ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಮೋಡಿ ಮಾಡುತ್ತಿದ್ದು, ಮೊದಲ ವಾರಾಂತ್ಯದ ಅಂತ್ಯಕ್ಕೆ ಒಟ್ಟಾರೆಯಾಗಿ 46 ಕೋಟಿ ರೂ. ಗಳಿಸಿಕೊಂಡಿದೆ.
Sacnilk.com ವರದಿಯ ಪ್ರಕಾರ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟನೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಭಾನುವಾರದಂದು 19 ಕೋಟಿ ರೂ. ಗಳಿಸಿದೆ. ಸಿನಿಮಾ ಬಿಡುಗಡೆಯಾದ ಶುಕ್ರವಾರದಂದು ಸಿನಿಮಾ 11.1 ಕೋಟಿ ರೂ. ಗಳಿಸಿತ್ತು. ಹಾಗೆಯೇ ಶನಿವಾರದಂದು ಗಳಿಕೆ ಏರಿಕೆಯಾಗಿ 16.05 ಕೋಟಿ ಕಂಡಿತ್ತು. ಭಾನುವಾರಂದು ಸಿನಿಮಾ ದಾಖಲೆಯ ಗಳಿಕೆಯನ್ನು ಮಾಡಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗಾಗಿ ಭಾನುವಾರದ ಅಂತ್ಯದವರೆಗೆ ಸಿನಿಮಾ ಒಟ್ಟಾರೆಯಾಗಿ 46 ಕೋಟಿ ರೂ. ಗಳಿಸಿದಂತಾಗಿದೆ.
ಇದನ್ನೂ ಓದಿ: Viral video: ಹಿಂಡು ತಪ್ಪಿಸಿಕೊಂಡ ಕಾಡಾನೆ ಮರಿ ಕರೆದರೆ ಏನು ಮಾಡುತ್ತೆ ನೋಡಿ!
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ನಟಿಸಿದ್ದಾರೆ. ಇದರಲ್ಲಿ ಟೋಟಾ ರಾಯ್ ಚೌಧರಿ, ಚೂರ್ನಿ ಗಂಗೂಲಿ ಮತ್ತು ಅಮೀರ್ ಬಶೀರ್ ಕೂಡ ಬಣ್ಣ ಹಚ್ಚಿದ್ದಾರೆ.
ಈ ಚಿತ್ರವು ರಾಕಿ(ರಣವೀರ್ ಸಿಂಗ್) ಮತ್ತು ರಾಣಿ(ಆಲಿಯಾ) ಅವರ ಪ್ರೇಮಕಥೆಯನ್ನು ಸುತ್ತುವರೆದಿದೆ. ಸಿನಿಮಾದಲ್ಲಿ ರಾಕಿ ಪಂಜಾಬಿ ಕುಟುಂಬದವನಾಗಿದ್ದು, ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಇರುವವನಾಗಿರುತ್ತಾನೆ. ಇನ್ನೊಂದತ್ತ ರಾಣಿ ಬಂಗಾಳಿ ಕುಟುಂಬದ ಮಗಳಾಗಿದ್ದು, ಪತ್ರಕರ್ತೆಯಾಗಿ ಕೆಲಸ ಮಾಡುತ್ತಿರುತ್ತಾಳೆ.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಬಿಡುಗಡೆಗೆ ಮುನ್ನ, ರಣವೀರ್ ಅವರು ಹಿರಿಯರಾದ ಧರ್ಮೇಂದ್ರ, ಜಯಾ ಮತ್ತು ಶಬಾನಾ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದರು. “ಧರಮ್ ಜೀ ಅವರು ಶ್ರೇಷ್ಠ ಸೂಪರ್ಸ್ಟಾರ್ಗಳಲ್ಲಿ ಒಬ್ಬರು. ಅವರು ಕಮಾಂಡ್ ಮಾಡುವ ರೀತಿಯಿಂದಲೇ ಅವರತ್ತ ಒಂದು ಸೆಳವು ಹುಟ್ಟಿಕೊಳ್ಳುತ್ತದೆ. ಹಾಗೆಯೇ ಈ ಮೂವರು ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡಿರುವುದು ನಿಜಕ್ಕೂ ಅದ್ಭುತ ಅನುಭವವನ್ನು ನೀಡಿದೆ” ಎಂದು ರಣವೀರ್ ಹೇಳಿಕೊಂಡಿದ್ದರು.