Site icon Vistara News

Rakshit Shetty: ಶೆಟ್ರೆ ಜಾಸ್ತಿ ಬಕೆಟ್ ಹಿಡಿಯೋಕೆ ಹೋಗ್ಬೇಡಿ ಅಂದಿದ್ದಕ್ಕೆ ಟ್ಯಾಂಕರ್ ಹಿಡಿತೀನಿ ಅಂದ್ರು ರಕ್ಷಿತ್‌ ಶೆಟ್ಟಿ

rakshit shetty issue about krishna matha

ಬೆಂಗಳೂರು: ಉಡುಪಿ ಕೃಷ್ಣ ಮಠದ ಜಾಗವನ್ನು ಮುಸ್ಲಿಂ ರಾಜರು (Krishna mutt politics) ನೀಡಿದ್ದಾರೆ ಎಂಬ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕ ಮಿಥುನ್‌ ರೈ ನೀಡಿದ್ದರು. ಅವರ ಹೇಳಿಕೆಯ ವಿರುದ್ಧ ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ (Rakshit Shetty) ಟ್ವೀಟ್‌ ಮೂಲಕ ಅಭಿಪ್ರಾಯ ಹೊರಹಾಕಿದ್ದಾರೆ. ಆದರೆ ಇದೀಗ ನೆಟ್ಟಿಗರು ರಕ್ಷಿತ್‌ ಶೆಟ್ಟಿ ಅವರ ಟ್ವೀಟ್‌ಗೆ ಭಾರಿ ಆಕ್ರೋಶ ಹೊರಹಾಕುತ್ತಿದ್ದಾರೆ. `ಶೆಟ್ರೆ ಬಕೆಟ್ ಜಾಸ್ತಿ ಹಿಡಿಬೇಡಿʼ ಎಂದು ನೆಟ್ಟಿಗರೊಬ್ಬರ ಅಭಿಪ್ರಾಯಕ್ಕೆ, ʻಬಕೆಟ್ ಅಲ್ಲಾ ಟ್ಯಾಂಕರ್ ಹಿಡಿತೀನಿ’ ಎಂದು ರಕ್ಷಿತ್‌ ಶೆಟ್ಟಿ ರಿಟ್ವೀಟ್ ಮಾಡಿದ್ದಾರೆ.

ಕೃಷ್ಣ ಮಠಕ್ಕೆ ಭೂಮಿ ಕೊಟ್ಟವರು ಮುಸ್ಲಿಂ ರಾಜರು ಎಂದು ಕಾಂಗ್ರೆಸ್‌ ನಾಯಕ ಮಿಥುನ್ ರೈ ಹೇಳಿಕೆ ನೀಡಿದ್ದರು. ಮಿಥುನ್ ರೈ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಹುಟ್ಟು ಹಾಕಿತ್ತು. ಈ ಬಗ್ಗೆ ರಕ್ಷತ್‌ ಶೆಟ್ಟಿ ಗರಂ ಆಗಿ ʻʻಟ್ವೀಟ್‌ನಲ್ಲಿ ʻʻದೇವಾಲಯದ ಪಟ್ಟಣವೆಂದೇ ಖ್ಯಾತಿ ಪಡೆದ ಉಡುಪಿ, ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಇದರ ಬಗ್ಗೆ ನಿಮಗೆ ತಿಳಿದಿಲ್ಲದಿರುವಾಗ ಸಾರ್ವಜನಿಕ ವೇದಿಕೆಯಲ್ಲಿ ಅಸಂಬದ್ಧವಾಗಿ ಮಾತನಾಡುವುದೇಕೆ ???ʼʼಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವು ನೆಟ್ಟಿಗರು ರಕ್ಷಿತ್ ಶೆಟ್ಟಿ ವಿರುದ್ಧ ಕಮೆಂಟ್‌ ಮಾಡಿದ್ದಾರೆ.

ನೆಟ್ಟಿಗರೊಬ್ಬರು ʻʻರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ. ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟು ಸಾಕುʼʼಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Rakshit Shetty: ಕಾಂಗ್ರೆಸ್‌ ನಾಯಕ ಮಿಥುನ್‌ ರೈ ವಿರುದ್ಧ ರಕ್ಷಿತ್‌ ಶೆಟ್ಟಿ ಗರಂ: ಟ್ವೀಟ್‌ ಮೂಲಕ ಅಸಮಾಧಾನ ಹೊರಹಾಕಿದ ನಟ

ಇದಕ್ಕೆ ಪ್ರತ್ಯುತ್ತರ ನೀಡಿರುವ ರಕ್ಷಿತ್‌ ಶೆಟ್ಟಿ ʻʻಮೊದಲನೆದಾಗಿ ಉಡುಪಿ ನನ್ನ ಜನ್ಮಸ್ಥಳ… ಬಕೆಟ್ ಅಲ್ಲಾ, ಟ್ಯಾಂಕರ್ ಹಿಡಿತೀನಿ.. ಎರಡನೇ ವಿಚಾರ ಅಂದರೆ ಅವರು ಯಾವ ಭೂಮಿಯ ಬಗ್ಗೆ ಮಾತನಾಡುತ್ತಿದ್ದಾರೆಂದು ಖಚಿತವಾಗಿಲ್ಲ, ಆದರೆ ಕಾರ್ ಸ್ಟ್ರೀಟ್‌ನಲ್ಲಿರುವ ಜಮೀನು ಖಂಡಿತವಾಗಿಯೂ ಅಲ್ಲ, ಮೂರನೇ ವಿಚಾರಕ್ಕೆ ಬಂದರೆ ಅನಂತೇಶ್ವರ ದೇವಸ್ಥಾನವು ಕೃಷ್ಣಮಠಕ್ಕಿಂತಲೂ ಹಳೆಯದು ಮತ್ತು ಚಂದ್ರಮೌಳೀಶ್ವರ ದೇವಸ್ಥಾನ ಇನ್ನೂ ಹಳೆಯದುʼʼಎಂದು ಬರೆದುಕೊಂಡಿದ್ದಾರೆ.

ರಕ್ಷಿತ್‌ ಶೆಟ್ಟಿ ಅವರ ಟ್ವೀಟ್‌ಗೆ ಬಹುತೇಕರು ನಟರನ್ನೇ ದೂರುತ್ತಿದ್ದಾರೆ. ಇನ್ನೂ ಕೆಲವರು ʻಲೆಫ್ಟ್, ರೈಟು ಎಂದು ಶುರುವಾಗುತ್ತದೆ. ಇದಕ್ಕೆಲ್ಲ ತಲೆ ಹಾಕಬೇಡಿʼ ಎಂದು ಕಮೆಂಟ್‌ ಮೂಲಕ ಹೇಳುತ್ತಿದ್ದಾರೆ.

ಇದನ್ನೂ ಓದಿ: Rakshit Shetty: ಶಿವಪಾಡಿ ಉಮಾಮಹೇಶ್ವರ ದೇಗುಲದಲ್ಲಿ ಪುಂಗನೂರು ತಳಿ ಗೋವನ್ನು ಮುದ್ದಾಡಿದ ರಕ್ಷಿತ್ ಶೆಟ್ಟಿ

ಮಿಥುನ್‌ ರೈ ಹೇಳಿದ್ದೇನು?

ದ.ಕ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ನಡೆದ ʻನಮ್ಮೂರ ಮಸೀದಿ ನೋಡ ಬನ್ನಿʼ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್‌ ರೈ ಅವರು, ಉಡುಪಿಯ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಹೇಳಿಕೆ ನೀಡಿದ್ದರು. ಇದು ಆಕ್ರೋಶಕ್ಕೆ ಕಾರಣವಾದಾಗ ಮಿಥುನ್‌ ರೈ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಳಿಕ ಮತ್ತೊಮ್ಮೆ ಮೂಡುಬಿದಿರೆಯಲ್ಲಿ ಮಾತನಾಡಿದ ಅವರು, ನಾನೇನೂ ಇತಿಹಾಸಕಾರನಲ್ಲ. ಪೂಜ್ಯರಾದ ಪೇಜಾವರ ಹಿರಿಯ ಶ್ರೀಗಳು ಹೇಳಿದ ವಿಚಾರವನ್ನು ಪತ್ರಿಕೆಯಲ್ಲಿ ಓದಿದ್ದೆ. ಅದನ್ನೇ ಹೇಳಿದ್ದೆನೆ ಎಂದಿದ್ದರು.

ʻʻನಾನು ಉಡುಪಿ ಮಠದ ಪೇಜಾವರ ಶ್ರೀಗಳು ಈ ಹಿಂದೆ ಹೇಳಿದ್ದನ್ನೆ ಪುನರುಚ್ಚರಿಸಿದ್ದೇನೆ. ಅವರು ಹೇಳಿದ ಮಾತನ್ನೇ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಅದನ್ನೇ ನಾನು ಉಲ್ಲೇಖಿಸಿದ್ದೇನೆ. ನಾನು ಯಾವುದೇ ತಪ್ಪು ಸಂದೇಶ ನೀಡಲು ಹೊರಟಿರಲಿಲ್ಲʼʼ ಎಂದಿರುವ ಅವರು, ತಪ್ಪಾಗಿದ್ದರೆ ನಾನು ಕ್ಷಮಾಪಣೆ ಬೇಕಾದರೂ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.

Exit mobile version