Site icon Vistara News

Rakshit Shetty: ನೂತನ ಗೃಹ ಪ್ರವೇಶ ನಿಮಿತ್ತ ಕೋಲದಲ್ಲಿ ಭಾಗಿಯಾದ ರಕ್ಷಿತ್‌ ಶೆಟ್ಟಿ!

Rakshit Shetty Participated In Daiva Kola At Udupi alevoor

ಬೆಂಗಳೂರು: ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ (Rakshit Shetty) ಅವರು ಉಡುಪಿಯ ಅಲೆವೂರಿನ ಕೋಲದಲ್ಲಿ ಭಾಗಿ ಆಗಿದ್ದಾರೆ. ಮನೆಯ ದೈವ ಕೋಲದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದಿದ್ದಾರೆ. ನೂತನ ಗೃಹ ಪ್ರವೇಶ ನಿಮಿತ್ತ ನಡೆದ ದೈವ ಕೋಲದಲ್ಲಿ ರಕ್ಷಿತ್‌ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಉಡುಪಿಯ ಅಲೆವೂರಿನಲ್ಲಿ (alevoor udupi kola) ದೈವಗಳ ಪುನರ್ ಪ್ರತಿಷ್ಠೆ, ಕೋಲ ಇತ್ತು. ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಕೋಲದಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ.

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ಎ ಹಾಗೂ ಬಿ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ರಿಚರ್ಡ್​ ಆಂಟನಿ ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್‌ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಮುಂದಿನ ಎರಡು ಸಿನಿಮಾಗಳಿಗೆ (ʻರಿಚರ್ಡ್​ ಆಂಟನಿ’ ಹಾಗೂ ‘ಪುಣ್ಯಕೋಟಿ’) ಪರಶುರಾಮ ಹಾಗೂ ಆತನ ಕೊಡಲಿಯೇ ಸ್ಫೂರ್ತಿ. ಈ ಕಥೆ ಜತೆ ಹೀಗಾಗಲೇ 4 ವರ್ಷ ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಕಳೆಯೋದು ಇದೆ ಅನಿಸುತ್ತಿದೆ ಎಂದು ರಕ್ಷಿತ್ ಶೆಟ್ಟಿ ಈ ಹಿಂದೆ ಹೇಳಿಕೊಂಡಿದ್ದರು.

ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಗೆ ಸಖತ್‌ ರೆಸ್ಪಾನ್ಸ್‌!

ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. ಟ್ರೈಲರ್‌ ನೋಡಿ ಸಖತ್‌ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಎಂದು ವೀಕ್ಷಕರು ಹಾಡಿ ಹೊಗಳುತ್ತಿದ್ದಾರೆ. ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 ‘ಬ್ಯಾಚುಲರ್’ಗಳ ಕಥೆ ಚಿತ್ರದಲ್ಲಿದೆ. ಜನವರಿ 26 ರಂದು ‘ಬ್ಯಾಚುಲರ್ ಪಾರ್ಟಿ’ ಸಿನಿಮಾ (Bachelor Party Trailer) ರಿಲೀಸ್‌ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿದೆ.

ಇದನ್ನೂ ಓದಿ: Rakshit Shetty: `ಬ್ಯಾಚುಲರ್ ಪಾರ್ಟಿ’ ಕೊಡಲು ಮುಂದಾಯಿತು ಕಿರಿಕ್ ಪಾರ್ಟಿ ಟೀಮ್‌!

ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಸಿನಿಮಾದಲ್ಲಿ ಮನರಂಜನೆಯ ರಸದೌತಣವಿರಲಿದೆ ಎಂದು ಚಿತ್ರತಂಡ ಮುನ್ಸೂಚನೆ ನೀಡಿದೆ. `ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕಿರಿಕ್‌ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಚಿತ್ರದ ಮೂಲಕ ಇದೀಗ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಕಾಲಿಡುತ್ತಿದ್ದಾರೆ. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Exit mobile version