Site icon Vistara News

Rakshit Shetty: ‘SSE’ ಬಿಡುಗಡೆಗೆ ಒಂದು ದಿನ ಮೊದಲೇ ಪ್ರೇಕ್ಷಕರಿಗೆ ಹಬ್ಬ; ಎಲ್ಲೆಲ್ಲಿ ಪ್ರದರ್ಶನ? ಟಿಕೆಟ್‌ ದರ ಎಷ್ಟು?

Rakshit Shetty sapta sagadache ello

ಬೆಂಗಳೂರು: ಹೇಮಂತ್ ಎಮ್​ ರಾವ್​ ನಿರ್ದೇಶನದ ರಕ್ಷಿತ್​ ಶೆಟ್ಟಿ (Rakshit Shetty) ಅಭಿನಯಿಸಿದ ʻಸಪ್ತ ಸಾಗರದಾಚೆ ಎಲ್ಲೊʼ (Sapta Sagaradaache Ello) ಸಿನಿಮಾ ಸೆಪ್ಟೆಂಬರ್ 1ರಂದು ತೆರೆ ಕಾಣುತ್ತಿದೆ. ಎರಡನೇ ಭಾಗ ಸೈಡ್ ಬಿ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಬಿಡುಗಡೆಗೂ ಹಿಂದಿನ ದಿನವೇ ಚಿತ್ರದ ಪ್ರೀಮಿಯರ್ ಶೋಗಳನ್ನು ಆಯೋಜಿಸಿದೆ. ಸೆಲೆಬ್ರಿಟಿ ಪ್ರೀಮಿಯರ್ ಶೋಗಳು ಮಾತ್ರವಲ್ಲದೇ ಸಾಮಾನ್ಯ ಸಿನಿ ರಸಿಕರಿಗೂ ಸಹ ಪ್ರೀಮಿಯರ್ ಶೋಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟಿದೆ.

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ನಗರಗಳಲ್ಲಿ ಆಗಸ್ಟ್ 31ರ ಸಂಜೆಯೇ ಸಪ್ತ ಸಾಗರದಾಚೆ ಎಲ್ಲೋ ಸಿನಿ ರಸಿಕರಿಗೆ ದರ್ಶನ ನೀಡಲಿದೆ. ಬೆಂಗಳೂರಿನಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಒಟ್ಟು 28 ಪೇಯ್ಡ್ ಪ್ರೀಮಿಯರ್ ಶೋಗಳು ಬೆಂಗಳೂರಿನಲ್ಲಿ ಆಯೋಜನೆಗೊಂಡಿವೆ. ಪಿವಿಆರ್ ಹಾಗೂ ಇತರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 700 ರಿಂದ 900 ರೂಪಾಯಿಗಳವರೆಗೆ ಇದ್ದು, ಸಾಮಾನ್ಯ ಕ್ಲಬ್ ಕ್ಲಾಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ 300 ರಿಂದ 500 ರೂಪಾಯಿಗಳವರೆಗೂ ಇದೆ. ಮೈಸೂರಿನಲ್ಲಿ ಚಿತ್ರದ ನಾಲ್ಕು ಪ್ರದರ್ಶನಗಳು ನಾಳೆ ಆಯೋಜನೆಗೊಂಡಿದ್ದು ಅಲ್ಲಿ ಟಿಕೆಟ್ ದರ 250 ರೂಪಾಯಿಗಳಾಗಿವೆ. ಇನ್ನು ಚಿತ್ರದ ಬಹುತೇಕ ಎಲ್ಲಾ ಪ್ರದರ್ಶನಗಳ ಟಿಕೆಟ್‌ಗಳೂ ಭರ್ಜರಿಯಾಗಿ ಸೇಲ್ ಆಗುತ್ತಿದ್ದು, ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ.

ಟ್ರೈಲರ್​ನಲ್ಲಿ ನಾಯಕಿ ಪಾತ್ರ ವಹಿಸಿರುವ ರುಕ್ಮಿಣಿ ವಸಂತ್ ಅವರ ಧ್ವನಿಯೇ ಕೇಳಿ ಬರುತ್ತಿದೆ. ಅವರೇ ಕತೆಯನ್ನು ನಿರೂಪಣೆ ಮಾಡಿದಂತಿದೆ. ಸರಳವಾಗಿ ಕಾಣುವ ಅವರು ತಮ್ಮ ಪಾತ್ರದಲ್ಲಿ ತುಸು ಹೆಚ್ಚು ತಲ್ಲೀನರಾಗಿದ್ದಾರೆ. ರಕ್ಷಿತ್​ ಶೆಟ್ಟಿ ಲವರ್​ ಬಾಯ್​ ಆಗಿ, ದುರಂತ ನಾಯಕನಾಗಿ ಮಿಂಚಿದ್ದಾರೆ. ವಿಭಿನ್ನವಾದ ಹೇರ್​ಸ್ಟೈಲ್​ ಮೂಲಕವೂ ಅವರು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Rakshit Shetty: ರಕ್ಷಿತ್​ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೊ ಟ್ರೈಲರ್’​ ಬಿಡುಗಡೆ

ಇದನ್ನೂ ಓದಿ: Rakshit Shetty: ರಕ್ಷಿತ್​ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೊ ಟ್ರೈಲರ್’​ ಬಿಡುಗಡೆ

ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಟ್ರೈಲರ್​ನಲ್ಲಿ ಮೇಳೈಸಿದೆ. ಹಿತ ಮತ್ತು ಮಿತವಾಗಿರುವ ಸಂಗೀತ ವೀಕ್ಷಕನ ಮನಕ್ಕೆ ನಾಟುವಂತಿದೆ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 1ಕ್ಕೆ ಬಿಡುಗಡೆ ಆಗಲಿದೆ. ಒಂದು ತಿಂಗಳ ಅಂತರದಲ್ಲಿ ಸಿನಿಮಾದ ಎರಡನೇ ಭಾಗವೂ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜೊತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ.

Exit mobile version