Site icon Vistara News

Rakshit Shetty: ಮಧ್ಯರಾತ್ರಿಯೇ ಒಟಿಟಿಗೆ ಎಂಟ್ರಿ ಕೊಟ್ಟ ʻಸಪ್ತ ಸಾಗರದಾಚೆ ಎಲ್ಲೋʼ; ಸೈಡ್‌ ʻಬಿʼ ರಿಲೀಸ್‌ ಯಾವಾಗ?

Rakshit Shetty sapta sagaradaache ello

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ (Rakshit Shetty) ಹಾಗೂ ರುಕ್ಮಿಣಿ ವಸಂತ್‌ (rukmini vasanth) ಅಭಿನಯದ ʻಸಪ್ತ ಸಾಗರದಾಚೆ ಎಲ್ಲೋʼ (saptha sagaradache ello) ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಸಕ್ಸಸ್ ಕಂಡಿದೆ. ಪ್ರೇಕ್ಷಕರು ಭಾಗ 2ಕ್ಕೆ ಕಾಯುತ್ತಿದ್ದಾರೆ. ‘ಸಪ್ತ ಸಾಗರಾಲು ದಾಟಿ’ ಟೈಟಲ್‌ನಲ್ಲಿ ಚಿತ್ರವನ್ನು ತೆಲುಗಿನಲ್ಲಿ ಡಬ್ ಮಾಡಿ ರಿಲೀಸ್ ಮಾಡಿದ್ದಾಗಿದೆ. ಇದೀಗ ಸದ್ದಿಲ್ಲದೇ ಮಧ್ಯರಾತ್ರಿ ಸೈಡ್- A ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಷ್ಟೇ ಅಲ್ಲದೇ ಭಾಗ 2ರ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಮಾಡಿದ್ದಾರೆ ಸಿಂಪಲ್‌ ಸ್ಟಾರ್‌.

ಈ ಮೊದಲು ಸೈಡ್‌ ಬಿ ಅಕ್ಟೋಬರ್‌ 20ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಆದರೀಗ ಸೈಡ್‌ ಬಿ ರಿಲೀಸ್ ಒಂದು ವಾರ ತಡವಾಗಿ ರಿಲೀಸ್‌ ಆಗುತ್ತಿದೆ. ತೆಲುಗಿನಲ್ಲಿ ಇತ್ತೀಚೆಗೆ ಸಿನಿಮಾ ‘ಸಪ್ತಸಾಗರಾಲು ದಾಟಿ’ ಹೆಸರಿನಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಅದರ 2ನೇ ಭಾಗ ಅಕ್ಟೋಬರ್ 27ಕ್ಕೆ ತೆರೆಗೆ ತರಲು ಪ್ಲ್ಯಾನ್ ಆಗಿತ್ತು. ಹಾಗಾಗಿ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್- B ಥ್ರಿಯೇಟ್ರಿಕಲ್ ರಿಲೀಸ್ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ.

ʻಭಾಗ 1 (‘Sapta Sagaralu Dhaati) ನೋಡದೇ ಇರುವವರು ಒಟಿಟಿಯಲ್ಲಿ ನೋಡಬಹುದು. ಮಧ್ಯರಾತ್ರಿಯಿಂದಲೇ ಅಮೆಜಾನ್‌ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳನ್ನು ಬದಲಿಸಿಕೊಂಡು ಸಿನಿಮಾ ನೋಡುವ ಅವಕಾಶ ಕೂಡ ಸಿಕ್ಕಿದೆ. 2ನೇ ಭಾಗ ಥಿಯೇಟರ್‌ಗೆ ಬಂದಮೇಲೆ ಮೊದಲ ಎರಡು ಭಾಗ ಒಟಿಟಿಗೆ ಬರಲಿದೆ ಎನ್ನಲಾಗಿತ್ತು.

ಇದನ್ನೂ ಓದಿ: Rakshit Shetty: ಹೌದು, ನಾನು ಈಗಲೂ ರಶ್ಮಿಕಾ ಜತೆ ಸಂಪರ್ಕದಲ್ಲಿದ್ದೇನೆ! ರಕ್ಷಿತ್ ಶೆಟ್ಟಿ ಹೇಳಿಕೆ

ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ.

Exit mobile version