ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit shetty) ಕೆಲವು ದಿನಗಳ ಹಿಂದೆ ಉಡುಪಿ ಕೃಷ್ಣ ಮಠ ಕುರಿತಾಗಿ ಚರ್ಚೆಯಲ್ಲಿದ್ದರು. ಇದೀಗ ಅವರ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಚಾರ್ಲಿ ಸಿನಿಮಾ ಬಳಿಕ ಅವರ ಮುಂಬರುವ ಸಿನಿಮಾ ರಿಲೀಸ್‌ಗಾಗಿ ಅವರ ಅಭಿಮಾನಿಗಳು ಕುತೂಹಲದಿದ್ದಾರೆ. ಇದೀಗ ನಟ ಟ್ವೀಟ್ ಮೂಲಕ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದೀಗ ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯ ದಿನಾಂಕ ಪ್ರಕಟಿಸಲಿದೆ.
ʻಸಪ್ತ ಸಾಗರದಾಚೆ ಎಲ್ಲೋʼನಲ್ಲಿ ರಕ್ಷಿತ್ ಶೆಟ್ಟಿ ಅವರು ಡಿಫರೆಂಟ್ ಲುಕ್ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಮನು–ಪ್ರಿಯಾ ಹೆಸರಿನ ನಾಯಕ ಮತ್ತು ನಾಯಕಿಯ ಪಾತ್ರಗಳ ಲಕ್ ಬಿಡುಗಡೆಗೊಂಡು ಗಮನ ಸೆಳೆಯುತ್ತಿದೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡ ರಕ್ಷಿತ್ “137 ಸೊಗಸಾದ ದಿನಗಳ ಚಿತ್ರೀಕರಣಕ್ಕೆ ಪೂರ್ಣವಿರಾಮ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಚಿತ್ರಮಂದಿರದಲ್ಲಿ ಅಪ್ಪಳಿಸಿದಾಗ, ನಿಮ್ಮ ಪ್ರೀತಿ ಪಾತ್ರರೊಂದಿಗೆ ಇರುತ್ತೀರಿ ಎಂದು ಬಾವಿಸುತ್ತೇವೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Rakshit Shetty | ʻಸಪ್ತ ಸಾಗರದಾಚೆ ಎಲ್ಲೋʼ ಮೇಕಿಂಗ್ ಫೋಟೊಗಳು ವೈರಲ್!
ರಕ್ಷಿತ್ ಶೆಟ್ಟಿ ಪೋಸ್ಟ್
ರುಕ್ಮಿಣಿ ವಸಂತ್ ಕೂಡ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಈ ಸಿನಿಮಾಗಾಗಿ 20 ಕೆ. ಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಮೂಲಕ ಎರಡು ಕೋನಗಳಲ್ಲಿ ಈ ಸಿನಿಮಾದ ಕತೆ ಬಿಚ್ಚಿಕೊಳ್ಳಲಿದೆಯಾ ಎಂಬ ಪ್ರಶ್ನೆ ಟೀಸರ್ ವೀಕ್ಷಕರಲ್ಲಿ ಮೂಡುತ್ತದೆ.
ಹೇಮಂತ್ ರಾವ್ ಈ ಚಿತ್ರದ ನಿರ್ದೇಶಕರು. ಇವರ ʼಕವಲುದಾರಿʼ ಮತ್ತು ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ರಕ್ಷಿತ್ ಅಭಿಮಾನಿಗಳು ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇರಿಸಿದ್ದಾರೆ. ಈ ಚಿತ್ರಕ್ಕೆ 137 ದಿನ ಶೂಟ್ ಮಾಡಲಾಗಿದೆ.