ಬೆಂಗಳೂರು: ರಕ್ಷಿತ್ ಶೆಟ್ಟಿ- ರುಕ್ಮಿಣಿ ವಸಂತ್ ಅಭಿನಯದ ʻಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾ ಸೈಡ್ A ಮತ್ತು ಸೈಡ್ B ಎಂದು ಎರಡು ಪಾರ್ಟ್‌ಗಳಲ್ಲಿ ಬರಲಿದೆ ಎಂದು ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ (Rakshit shetty) ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ನಟ ರಕ್ಷಿತ್ ಶೆಟ್ಟಿ ಸಿನಿಮಾದ ರಿಲೀಸ್ ಡೇಟ್‌ವನ್ನು ರಿವೀಲ್ ಮಾಡಿದ್ದಾರೆ.“ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಸೈಡ್ 1 ಅಂದರೆ ಮೊದಲ ಭಾಗ ಸೆಪ್ಟೆಂಬರ್ 1 ರಂದು ರಿಲೀಸ್ ಆಗಿಲಿದೆ ಸೈಡ್ 2 (ಭಾಗ-2) ಅಕ್ಟೋಬರ್ 20 ರಂದು ರಿಲೀಸ್ ಆಗಲಿದೆ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಮೊದಲ ಭಾಗದಲ್ಲಿ ಮನು- ಸುರಭಿ ಪ್ರೇಮಯಾನ, ಎರಡನೇ ಭಾಗದಲ್ಲಿ ನೋವಿನಲ್ಲಿ ಉಳಿದ ಮನುವಿನ ಕಥೆ ಸಿನಿಮಾದಲ್ಲಿ ಇರಲಿದೆ.
ಹೇಮಂತ್ ರಾವ್ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಕ್ಷಿತ್ ಶೆಟ್ಟಿಯೊಂದಿಗೆ ರುಕ್ಮಿಣಿ ವಸಂತ್ ಮತ್ತು ಚೈತ್ರ ಆಚಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇತ್ತೀಚೆಗೆ ಟ್ವೀಟ್ ಮಾಡಿದ್ದ ರಕ್ಷಿತ್ ಶೆಟ್ಟಿ, ʼʼ137 ದಿನಗಳ ಸೊಗಸಾದ ಚಿತ್ರೀಕರಣಕ್ಕೆ ಪೂರ್ಣವಿರಾಮ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಚಿತ್ರಮಂದಿರಗಳಿಗೆ ಅಪ್ಪಳಿಸಿದಾಗ, ನಿಮ್ಮ ಪ್ರೀತಿಪಾತ್ರರೊಂದಿಗೆ ಇರುತ್ತೀರಿ ಎಂದು ಭಾವಿಸುತ್ತೇವೆʼʼ ಎಂದು ಬರೆದುಕೊಂಡಿದ್ದರು.
ಚಾರ್ಲಿ ಸಿನಿಮಾ ಬಳಿಕ ಅವರ ಮುಂಬರುವ ಸಿನಿಮಾ ರಿಲೀಸ್‌ಗಾಗಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit shetty) ಅವರ ಅಭಿಮಾನಿಗಳು ಕುತೂಹಲದಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋʼನಲ್ಲಿ ರಕ್ಷಿತ್ ಶೆಟ್ಟಿ ಅವರು ಡಿಫರೆಂಟ್ ಲುಕ್ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಮನು–ಪ್ರಿಯಾ ಹೆಸರಿನ ನಾಯಕ ಮತ್ತು ನಾಯಕಿಯ ಪಾತ್ರಗಳ ಲಕ್ ಬಿಡುಗಡೆಗೊಂಡು ಗಮನ ಸೆಳೆಯುತ್ತಿದೆ. ನಾಯಕಿ ರುಕ್ಮಿಣಿ ವಸಂತ್ ಕೂಡ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಈ ಸಿನಿಮಾಗಾಗಿ 20 ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಮೂಲಕ ಎರಡು ಕೋನಗಳಲ್ಲಿ ಈ ಸಿನಿಮಾದ ಕತೆ ಬಿಚ್ಚಿಕೊಳ್ಳಲಿದೆಯಾ ಎಂಬ ಪ್ರಶ್ನೆ ಟೀಸರ್ ವೀಕ್ಷಕರಲ್ಲಿ ಮೂಡುತ್ತದೆ.
ಇದನ್ನೂ ಓದಿ: Rakshit shetty: ಎರಡು ಭಾಗಗಳಲ್ಲಿ ಬರಲಿದೆ ʻಸಪ್ತ ಸಾಗರದಾಚೆ ಎಲ್ಲೋʼ
The first of him.. and the rest of him! 🤍
— Rakshit Shetty (@rakshitshetty) June 15, 2023
SSE Side A – releasing on September 1st.
SSE Side B – releasing on October 20th.
Mark your calenders ☺️🤗 #SSESideASep1 #SSESideBOct20 @hemanthrao11 @rukminitweets @Chaithra_Achar_ @charanrajmr2701 @AdvaithaAmbara #ParamvahPictures… pic.twitter.com/gbFgoLnzQT
ಹೇಮಂತ್ ರಾವ್ ಈ ಚಿತ್ರದ ನಿರ್ದೇಶಕರು. ಇವರ ʼಕವಲುದಾರಿʼ ಮತ್ತು ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ರಕ್ಷಿತ್ ಅಭಿಮಾನಿಗಳು ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಚಿತ್ರಕ್ಕೆ 137 ದಿನಗಳ ಕಾಲ ಶೂಟ್ ಮಾಡಲಾಗಿದೆ.