ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಈಗಾಗಲೇ `ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಗುರು ಪೂರ್ಣಿಮೆ ದಿನದಂದು ಬಂದ ದಾರಿ ಹಾಗೂ ಮುಂದೆ ಹೋಗಬೇಕಿರುವ ಹಾದಿಯ ಬಗ್ಗೆ ಸಣ್ಣ ವಿಡಿಯೊ ಹಂಚಿಕೊಂಡಿದ್ದಾರೆ. ‘ಕೆಲವರಿಗೆ ಯಶಸ್ಸು ರಾತ್ರೋರಾತ್ರಿ ಕಥೆ ಆದ್ರೆ, ಇನ್ನೂ ಕೆಲವರಿಗೆ ಅದೆಷ್ಟೋ ವರ್ಷಗಳ ತಪಸ್ಸು ಆಗಿಬಿಡುತ್ತದೆ ಎಂದು ಹೇಳುವ ಮೂಲಕ ತಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ.
ವಿಡಿಯೊದಲ್ಲಿ ʻರಿಚರ್ಡ್ ಆಂಟನಿ’ ಸಿನಿಮಾದ ಪ್ರೋಮೊ ಶೂಟ್ ಮಾಡಿದ ಸ್ಥಳದಿಂದ ರಕ್ಷಿತ್ ಶೆಟ್ಟಿ ವಿಡಿಯೊ ಆರಂಭ ಆಗುತ್ತದೆ. ನಂತರ ರಕ್ಷಿತ್ ಅವರು ಕನಸುಗಳ ಬಗ್ಗೆ ಮಾತನಾಡಿದ್ದಾರೆ. ತಾವು ಮಾಡಿರುವ ಸಿನಿಮಾಗಳ ಸಣ್ಣ ಝಲಕ್ ಕೂಡ ಇದೆ. ಅಷ್ಟೇ ಅಲ್ಲದೇ ಡೈರೆಕ್ಟರ್ ಕ್ಯಾಪ್ ತೊಟ್ಟು, ಮುಂದಿನ ಸಿನಿಮಾಗಳ ಬಗ್ಗೆ ಅಪ್‌ಡೇಟ್ ಕೂಡ ನೀಡಿದ್ದಾರೆ.
ʻರಿಚರ್ಡ್ ಆಂಟನಿ ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ನಟ ರಕ್ಷಿತ್ ಮಾತಾಡಿದ್ದಾರೆ. ರಿಚರ್ಡ್ ಆಂಟನಿ ಸಿನಿಮಾದ ಶೂಟಿಂಗ್ ಸ್ಥಳ ಹಾಗೂ ತಮ್ಮ ಕಚೇರಿಯಲ್ಲಿ ಮಾಡಿದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತನ್ನ ಕನಸಿನ ಬಗ್ಗೆ ರಕ್ಷಿತ್ ಮಾತಾಡಿದ್ದಾರೆ. ಯಶಸ್ಸು ಸಿಕ್ಕ ಬಳಿಕ ಆ ಯಶಸ್ಸಿನಲ್ಲಿ ತೇಲಿ ಸಮುದ್ರ ಸೇರಬೇಕಾ ಅಥವಾ ಆ ಸಮುದ್ರದಲ್ಲಿ ಈಜುವುದನ್ನು ಕಲಿತು ಮತ್ತೊಂದು ಯಶಸ್ಸನ್ನು ಪಡೆಯುವ ಪ್ರಯತ್ನ ಪಡಬೇಕಾ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: Rakshit Shetty: ‘ಸಪ್ತಸಾಗರದಾಚೆ ಎಲ್ಲೋ’, ʻಟೋಬಿʼ ಕ್ಲ್ಯಾಶ್; ಈ ಬಗ್ಗೆ ರಾಜ್ ಶೆಟ್ಟಿ ಹೇಳಿದ್ದೇನು?
ನನ್ನ ಮುಂದಿನ ಎರಡು ಸಿನಿಮಾಗಳಿಗೆ (ʻರಿಚರ್ಡ್ ಆಂಟನಿ’ ಹಾಗೂ ‘ಪುಣ್ಯಕೋಟಿ’) ಪರಶುರಾಮ ಹಾಗೂ ಆತನ ಕೊಡಲಿಯೇ ಸ್ಫೂರ್ತಿ. ಈ ಕಥೆ ಜತೆ ಹೀಗಾಗಲೇ 4 ವರ್ಷ ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಕಳೆಯೋದು ಇದೆ ಅನಿಸುತ್ತಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.