ಬೆಂಗಳೂರು: ರಕ್ಷಿತ್ ಶೆಟ್ಟಿ (Rakshit shetty) ಅಭಿನಯದ `ಸಪ್ತಸಾಗರದಾಚೆ ಎಲ್ಲೋ‘ ಸಿನಿಮಾದ ʻಹೋರಾಟʼ ಲಿರಿಕಲ್ ಸಾಂಗ್ ಬಿಡುಗಡೆಗೊಂಡಿದೆ. ರ‍್ಯಾಪರ್ ಶೈಲಿಯಲ್ಲಿ ಹಾಡು ಮೂಡಿ ಬಂದಿದೆ. “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಸೈಡ್ 1 ಅಂದರೆ ಮೊದಲ ಭಾಗ ಸೆಪ್ಟೆಂಬರ್ 1ರಂದು ರಿಲೀಸ್ ಆಗಲಿದೆ. ಸೈಡ್ 2 (ಭಾಗ-2) ಅಕ್ಟೋಬರ್ 20ರಂದು ರಿಲೀಸ್ ಆಗಲಿದೆ. ಮೊದಲ ಭಾಗದಲ್ಲಿ ಮನು-ಸುರಭಿ ಪ್ರೇಮಯಾನ, ಎರಡನೇ ಭಾಗದಲ್ಲಿ ನೋವಿನಲ್ಲಿ ಉಳಿದ ಮನುವಿನ ಕಥೆ ಸಿನಿಮಾದಲ್ಲಿ ಇರಲಿದೆ.
‘ಹೋರಾಟ’ ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಫಸ್ಟ್ ಸಿಂಗಲ್ ಪರಂವಃ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ನಾಯಕ ಪ್ರೀತಿ ಹಾಗೂ ಬದುಕಿನಲ್ಲಿ ಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಎಂಸಿ ಬಿಜ್ಜು ಹಾಗೂ ಕಿರಣ್ ಕಾವೇರಪ್ಪ ಬರೆದಿರುವ ನೋವಿನ ಸಾಲುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.
ವಿಭಿನ್ನ ಸಂಗೀತ ಹಾಗೂ ರಾಗ ಕೇಳುಗರ ಗಮನ ಸೆಳೆಯುವಂತಿದೆ. ಇನ್ನು ಕನ್ನಡದ ರ್‍ಯಾಪರ್ ಎಂಸಿ ಬಿಜ್ಜು ಈ ಹಾಡಿಗೆ ಸಾಹಿತ್ಯ ಬರೆಯುವುದು ಮಾತ್ರವಲ್ಲದೇ ದನಿಯನ್ನೂ ನೀಡಿದ್ದಾರೆ.
ಇದನ್ನೂ ಓದಿ; Raj B Shetty: ಮೂಗು ಚುಚ್ಚುವಾಗ ನೋವು ಬರದಂತೆ ಇಂಜೆಕ್ಷನ್ ನೀಡಲಾಗಿತ್ತು; ರಾಜ್ ಬಿ ಶೆಟ್ಟಿ ಮೂಗುತಿ ಕಥೆ!
ʻಸಪ್ತ ಸಾಗರದಾಚೆ ಎಲ್ಲೋʼನಲ್ಲಿ ರಕ್ಷಿತ್ ಶೆಟ್ಟಿ ಅವರು ಡಿಫರೆಂಟ್ ಲುಕ್ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಮನು–ಪ್ರಿಯಾ ಹೆಸರಿನ ನಾಯಕ ಮತ್ತು ನಾಯಕಿಯ ಪಾತ್ರಗಳ ಲಕ್ ಬಿಡುಗಡೆಗೊಂಡು ಗಮನ ಸೆಳೆದಿತ್ತು. ನಾಯಕಿ ರುಕ್ಮಿಣಿ ವಸಂತ್ ಕೂಡ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಈ ಸಿನಿಮಾಗಾಗಿ 20 ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಮೂಲಕ ಎರಡು ಕೋನಗಳಲ್ಲಿ ಈ ಸಿನಿಮಾದ ಕತೆ ಬಿಚ್ಚಿಕೊಳ್ಳಲಿದೆಯಾ ಎಂಬ ಪ್ರಶ್ನೆ ಟೀಸರ್ ವೀಕ್ಷಕರಲ್ಲಿ ಮೂಡುತ್ತದೆ.
ಹೇಮಂತ್ ರಾವ್ ಈ ಚಿತ್ರದ ನಿರ್ದೇಶಕರು. ಇವರ ʼಕವಲುದಾರಿʼ ಮತ್ತು ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ರಕ್ಷಿತ್ ಅಭಿಮಾನಿಗಳು ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಚಿತ್ರಕ್ಕೆ 137 ದಿನಗಳ ಕಾಲ ಶೂಟ್ ಮಾಡಲಾಗಿದೆ.