Site icon Vistara News

Rakshita Suresh: ಮಲೇಷ್ಯಾದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾದ ಕನ್ನಡದ ಗಾಯಕಿ ರಕ್ಷಿತಾ ಸುರೇಶ್

rakshita suresh meets with major car accident,

ಬೆಂಗಳೂರು: ದಕ್ಷಿಣ ಭಾರತದ ಜನಪ್ರಿಯ ಗಾಯಕಿ ರಕ್ಷಿತಾ ಸುರೇಶ್ (Rakshita Suresh) ಅವರು ಮೇ 7ರ ಭಾನುವಾರ ಬೆಳಗ್ಗೆ ಅಪಘಾತಕ್ಕೆ ಒಳಗಾಗಿದ್ದಾರೆ. ರಕ್ಷಿತಾ ಸುರೇಶ್ ಚಲಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಮಲೇಷ್ಯಾ ನಡೆದಿದೆ. ಈ ವೇಳೆ ರಕ್ಷಿತಾ ಅವರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎ.ಆರ್​ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ‘ಕಿರುನಗೆ..’ ಹಾಡನ್ನು ರಕ್ಷಿತಾ ಹಾಡಿದ್ದರು. ಇತ್ತೀಚೆಗೆ ಅವರು ಮಲೇಷ್ಯಾಗೆ ತೆರಳಿದ್ದರು. ಅಲ್ಲಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಟ್ವಿಟ್ಟರ್ ಖಾತೆಯಲ್ಲಿ ರಕ್ಷಿತಾ ಸುರೇಶ್ ಅದೃಷ್ಟವಶಾತ್ ಭೀಕರ ಅಪಘಾತದಿಂದ ಪಾರಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ, “ಮಲೇಷ್ಯಾದಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಾನು ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿದ್ದಾಗ ನಾನು ಇದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಢಿಕ್ಕಿ ಹೊಡೆದಿದೆ. 10 ಸೆಕೆಂಡುಗಳು ನನ್ನ ಜೀವ ಕಣ್ಣು ಮುಂದೆ ಬಂದೋಯ್ತುʼʼಎಂದು ಬರೆದುಕೊಂಡಿದ್ದಾರೆ.

ʻʻಏರ್‌ಬ್ಯಾಗ್‌ಗಳಿಗೆ ಧನ್ಯವಾದ. ಇಲ್ಲದಿದ್ದರೆ ಪರಿಸ್ಥಿತಿ ಕೆಟ್ಟದ್ದಾಗಿರುತ್ತಿತ್ತು. ಆಗಿದ್ದರ ಬಗ್ಗೆ ಇನ್ನೂ ನಡುಕವಿದೆ. ನಾನು, ನನ್ನ ಜೊತೆ ಇದ್ದವರು, ಕಾರು ಚಾಲಕರು ಸುರಕ್ಷಿತವಾಗಿದ್ದಾರೆ ಎನ್ನುವುದೇ ಖುಷಿಯ ವಿಚಾರ. ಗಾಯಗಳು ಆಗಿವೆ. ನಾನು ಬದುಕುಳಿದಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Road Accident : ತುಮಕೂರು ಬಳಿ ರಸ್ತೆ ಅಪಘಾತ; ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ದುರ್ಮರಣ

ಗಾಯಕಿ ರಕ್ಷಿತಾ ಸುರೇಶ್ ಪೋಸ್ಟ್‌

ರಕ್ಷಿತಾ ಸುರೇಶ್ ತಮಿಳು, ಹಿಂದಿ, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರುವಾಸಿಯಾದ ಹಿನ್ನೆಲೆ ಗಾಯಕಿಯಾಗಿದ್ದಾರೆ. ರಕ್ಷಿತಾ ಸುರೇಶ್ ʻರಿದಮ್ ತಧೀಮ್‌ʼನಲ್ಲಿ ವಿಜೇತರಾಗಿದ್ದರು ಮತ್ತು 2009ರ ʻಲಿಟ್ಲ್ ಸ್ಟಾರ್ ಸಿಂಗರ್ʼ ವಿಜೇತರಾಗಿದ್ದರು. ʻಸೂಪರ್ ಸಿಂಗರ್ 6ರʼ ರಿಯಾಲಿಟಿ ಶೋನಲ್ಲಿ ಮೊದಲ ರನ್ನರ್ ಅಪ್ ಆಗಿದ್ದರು.

ಯಾನೆ ಯಾನೆ (ಮಿಮಿ) ( Yaane Yaane (Mimi)), ಕಾಲತುಕ್ಕಂ ನೀ ವೇಣುಂ (ವೆಂದು ತಾನಿಂಧತು ಕಾಡು), ಎಲೆ ಇಳಂಚಿಂಗಮೆ (ಕೋಬ್ರಾ) ನಂತಹ ಹಿಟ್ ಹಾಡುಗಳನ್ನು ನೀಡಿದ್ದಾರೆ. ಪೊನ್ನಿಯನ್‌ ಸೆಲ್ವನ್‌ ಸಿನಿಮಾದ ಕನ್ನಡ ಆವೃತ್ತಿ ವೀರ ರಾಜ ವೀರ ಹಾಗೂ ಕಿರು ನಗೆ ಹಾಡಿದ್ದಾರೆ.

Exit mobile version