Site icon Vistara News

Rakul Preet Singh | ಮದುವೆ ಆಗಲಿದ್ದಾರಂತೆ ನಟಿ ರಾಕುಲ್‌: ವೈರಲ್‌ ಆಯ್ತು ಅಣ್ಣನ ಪೋಸ್ಟ್‌!

Rakul Preet Singh

ಬೆಂಗಳೂರು : ನಟ ಹಾಗೂ ನಿರ್ಮಾಪಕ ಜಕ್ಕಿ ಬಗ್‌ನಾನಿಯೊಂದಿಗೆ ನಟಿ ರಾಕುಲ್‌ ಪ್ರೀತ್‌ ಸಿಂಗ್‌ (Rakul Preet Singh) ಡೇಟಿಂಗ್‌ ಮಾಡುತ್ತಿರುವುದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಇದೀಗ ಜೋಡಿ ಶೀಘ್ರದಲ್ಲಿಯೇ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ ಎಂಬ ಅಧಿಕೃತ ಸುದ್ದಿ ಹೊರ ಬಂದಿದೆ.

ರಾಕುಲ್‌ ಹಾಗೂ ಜಕ್ಕಿ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರಂತೆ. ಮದುವೆ ಡೇಟ್‌ ಮತ್ತು ಜಾಗವನ್ನು ಫಿಕ್ಸ್‌ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಕುಲ್‌ ಮದುವೆ ದಿನದ ಬಗ್ಗೆ ಈಗಾಗಲೇ ಎಲ್ಲರೊಂದಿಗೆ ಹಂಚಿಕೊಂಡಿಡಿದ್ದಾರೆ ಎಂದು ರಾಕುಲ್‌ ಸಹೋದರ ಅಮನ್‌ ಸಿಂಗ್‌ ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿದೆ. ಮದುವೆ ವಿಚಾರವನ್ನು ಜಕ್ಕಿ ಬಗ್‌ನಾನಿ ತಂದೆ ವಾಸು ಕೂಡ ಖಚಿತಪಡಿಸಿದ್ದು, ಮದುವೆ ತಯಾರಿ ನಡೆದಿದೆ ಎಂದಿದ್ದಾರೆ.

ವೈರಲ್‌ ಆಯ್ತು ರಾಕುಲ್‌ ಸಹೋದರನ ಟ್ವೀಟ್‌
ರಾಕುಲ್‌ ಪ್ರೀತ್‌ ಸಿಂಗ್‌ ಸಹೋದರ 2023ರಲ್ಲಿ ರಾಕುಲ್‌ ಮದುವೆಯಾಗಬಹುದು ಎಂದು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಕುಲ್‌ ʻʻತನ್ನ ಸ್ವಂತ ಜೀವನದ ಬಗ್ಗೆ ನನಗೆ ತಿಳಿದಿಲ್ಲ. ನೀವು ದೃಢಪಡಿಸಿದ್ದೀರಾ? ನೀವು ನನಗೆ ಮಾಹಿತಿಯನ್ನೂ ನೀಡಲಿಲ್ಲʼʼ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Asha Parekh | ಬಾಲಿವುಡ್‌ನ ಸಾರ್ವಕಾಲಿಕ ಪ್ರಭಾವಿ ನಟಿ ಆಶಾ ಪಾರೇಖ್

ರಾಕುಲ್‌ ಈ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ರಿಲೇಶನ್‌ಶಿಪ್‌ ಕುರಿತು ಹೇಳಿಕೊಂಡಿದ್ದರು. “ನಾನು ಮತ್ತು ಜಕ್ಕಿ ಇಬ್ಬರೂ ಒಬ್ಬರಿಗೊಬ್ಬರು ಗೌರವವನ್ನು ನೀಡಬೇಕು ಎಂಬ ಅಭಿಪ್ರಾಯವನ್ನು ಹೊಂದಿದ್ದೇವೆ. ನಾವು ನಮ್ಮದೇ ಆದ ರೀತಿಯಲ್ಲಿ ತುಂಬಾ ಬ್ಯುಸಿ ಆಗಿದ್ದೇವೆ. ನಮ್ಮ ಕೆಲಸಗಳನ್ನು ಯಾವತ್ತೂ ಒಬ್ಬರಿಗೊಬ್ಬರು ಚರ್ಚಿಸುವುದಿಲ್ಲ. ಹಾಗೇ ನಮ್ಮ ವೈಯಕ್ತಿಕ ಜೀವನದಲ್ಲಿ ಯಾರೊಬ್ಬರು ಬರುವುದು ನನಗೆ ಇಷ್ಟ ಆಗುವುದಿಲ್ಲʼʼ ಎಂದು ಹೇಳಿಕೊಂಡಿದ್ದರು.

ಯಾರು ಈ ಜಕ್ಕಿ ಬಗ್‌ನಾನಿ
ಜಕ್ಕಿ ಬಗ್‌ನಾನಿ ಕೋಲ್ಕೊತಾ ಮೂಲದವಾರಾಗಿದ್ದಾರೆ. ಬಾಲಿವುಡ್‌ ನಟ ಹಾಗೂ ನಿರ್ಮಾಪಕ. 2001ರಲ್ಲಿ ʻʻರೆಹನಾ ಹೈ ತೆರೆ ದಿಲ್‌ ಮೆʼʼ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ʻಫಾಲ್ತುʼ ʻಅಜಬ್‌ ಗಜಬ್‌ʼ, ʻಮೋಹಿನಿʼ, ʻವೆಲ್‌ ಕಮ್‌ ಟು ಕರಾಚಿʼ. ʻರಂಗ್ರೇಜ್‌ʼ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ʻʻಕೂಲಿ ನಂ 1ʼ, ʻವೆಲ್‌ ಕಮ್‌ ಟು ನ್ಯೂಯಾರ್ಕ್‌ʼ, ʻಬೆಲ್‌ ಬಾಟಮ್‌ʼʼ ಸೇರಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಾಕುಲ್‌
ಇತ್ತೀಚೆಗಷ್ಟೆ ʻಕಟ್‌ಪುಟ್ಲಿʼಯಲ್ಲಿ ಕಾಣಿಸಿಕೊಂಡಿರುವ ರಾಕುಲ್, ಅನುಭೂತಿ ಕಶ್ಯಪ್ ಚೊಚ್ಚಲ ನಿರ್ದೇಶನದ ʻಡಾಕ್ಟರ್ ಜಿʼ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಜತೆ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಅಜಯ್ ದೇವಗನ್ ನಟಿಸಿರುವ ಹಿಂದಿ ಚಿತ್ರ ʻಥ್ಯಾಂಕ್ ಗಾಡ್ʻನಲ್ಲಿಯೂ ರಾಕುಲ್ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್ ನಟನೆಯ ʻಇಂಡಿಯನ್ 2 ʼಸೇರಿದಂತೆ, ʻಛತ್ರಿವಾಲಿʼ ಸಿನಿಮಾಗಳು ಬಿಡುಗಡೆಯಾಗಲು ಸಜ್ಜಾಗಿವೆ.

ಇದನ್ನೂ ಓದಿ | ವಿವಾಹ ಪೂರ್ವ ಲೈಂಗಿಕತೆ ಅವರವರ ವೈಯಕ್ತಿಕ ಆಯ್ಕೆ ಎಂದ ನಟಿ ದಿಯಾ ಮಿರ್ಜಾ

Exit mobile version