Site icon Vistara News

Rakul Preet Singh: ಮೈ ಕೊರೆಯುವ ಚಳಿಯಲ್ಲಿ, ಹಿಮದ ನೀರಿನಲ್ಲಿ ಮಿಂದೆದ್ದ ರಕುಲ್ ಪ್ರೀತ್ ಸಿಂಗ್, ಇಲ್ಲಿದೆ ವಿಡಿಯೊ

Rakul Preet Singh takes a dip in -15 C water wearing swimsuit,

ಬೆಂಗಳೂರು: ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಬಿಕನಿಯಲ್ಲಿ ನಟಿ ಹಾಟ್‌ ಆಗಿ ಕಾಣಿಸಿಕೊಳ್ಳದ್ದಲ್ಲದೇ ಮೈನಸ್ 15 ಡಿಗ್ರಿ ಸೆಲ್ಸಿಯಸ್ ಹಿಮದ ನೀರಿನಲ್ಲಿ ಮಿಂದೆದ್ದು ಫ್ಯಾನ್ಸ್‌ಗೆ ಅಚ್ಚರಿಗೊಳಿಸಿದ್ದಾರೆ. ಇದೀಗ ಕಾಮೆಂಟ್‌ ಮೂಲಕ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈನಸ್ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ ಹಿಮದ ನೀರಿನಲ್ಲಿ ಮಿಂದೆದ್ದು ರಕುಲ್ ಪ್ರೀತ್ ಸಿಂಗ್ ಓಡುವುದು ನೋಡಬಹುದು. ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ಕಾಮೆಂಟ್ ವಿಭಾಗದಲ್ಲಿ “ರಾಕುಲ್ ಪ್ರೀತ್ ಸಿಂಗ್ ತುಂಬಾ ಹಾಟ್‌ ಆಗಿದ್ದಾರೆ ಎಂಬುದಕ್ಕೆ ಇದೊಂದು ಪ್ರೂಫ್‌ʼʼಎಂದು ಕಾಮೆಂಟ್‌ ಮಾಡಿದರೆ, ಇನ್ನೊಬ್ಬರು ʻʻಸಿನಿಮಾಗಾಗಿ ಶೂಟ್‌ ಮಾಡುತ್ತೀದ್ದೀರಾʼʼಎಂದು ಕಾಮೆಂಟ್‌ ಮಾಡಿದ್ದಾರೆ.

ಈಗಾಗಲೇ ರಕುಲ್ ಪ್ರೀತ್ ಸಿಂಗ್ ಅಭಿನಯದ ʻಛತ್ರಿವಾಲಿʼ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅವರ ಅಭಿನಯಕ್ಕೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮುಂದೆ ಇಂಡಿಯನ್‌-2 ಸಿನಿಮಾಗೆ ರಕುಲ್ ಪ್ರೀತ್ ಸಿಂಗ್‌ ನಾಯಕಿಯಾಗಿ ಮಿಂಚಲಿದ್ದಾರೆ.

ವೈರಲ್‌ ವಿಡಿಯೊ

ತಮಿಳು ಚಿತ್ರಗಳಾದ ಇಂಡಿಯನ್ 2 ಮತ್ತು ಅಯಾಲನ್ ಎರಡರ ಚಿತ್ರೀಕರಣವನ್ನು ಪೂರ್ಣಗೊಳಿಸಿರುವುದಾಗಿ ರಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Rakul Preet Singh | ಇಲ್ಲಿವೆ ರಕುಲ್ ಪ್ರೀತ್ ಸಿಂಗ್ ಮನಮೋಹಕ ಫೋಟೊಗಳು

ಶಂಕರ್ ನಿರ್ದೇಶನದ ಇಂಡಿಯನ್ 2ನಲ್ಲಿ ಸಿದ್ಧಾರ್ಥ್, ಗುಲ್ಶನ್ ಗ್ರೋವರ್, ದಿವಂಗತ ನೆಡುಮುಡಿ ವೇಣು, ದೆಹಲಿ ಗಣೇಶ್, ಸಮುದ್ರಕನಿ, ಬಾಬಿ ಸಿಂಹ, ಪ್ರಿಯಾ ಭವಾನಿ ಶಂಕರ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿದೆ. ಚಿತ್ರದ ಹಾಡುಗಳು ಮತ್ತು ಮೂಲ ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದಾರೆ.

Exit mobile version