ಹೈದರಾಬಾದ್: ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ (Ram Charan) ಹಾಗೂ ಉಪಾಸನಾ ಕಮಿನೇನಿ (Upasana Kamineni) ದಂಪತಿಗೆ ಹೆಣ್ಣು ಮಗು ಜನಿಸಿದೆ.
ಮದುವೆಯಾಗಿ 11 ವರ್ಷಗಳ ಬಳಿಕ ರಾಮ್ ಚರಣ್- ಉಪಾಸನಾ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದಾರೆ. ರಾಮ್ ಚರಣ್ ಅವರು ತಾವಿಬ್ಬರು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿರುವ ವಿಡಿಯೋವನ್ನು ಶೇರ್ ಮಾಡಿಕೊಂಡ ಕೆಲವೇ ಗಂಟೆಗಳ ಬಳಿಕ ಈ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಹೈದರಾಬಾದ್‌ನ ಅಪೋಲೋ ಆಸ್ಪತ್ರೆ ಈ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ. ʼʼಮಿಸೆಸ್ ಉಪಾಸನಾ ಕಮಿನೇನಿ ಕೊನಿಡೇಲ ಹಾಗೂ ರಾಮ್ ಚರಣ್ ಅವರಿಗೆ ಜೂನ 20ರ ಮುಂಜಾನೆ ಹೆಣ್ಣು ಮಗುವಾಗಿದೆ. ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆʼʼ ಎಂದು ಆಸ್ಪತ್ರೆ ಬುಲೆಟಿನ್ ಪ್ರಕಟಿಸಿದೆ.
ರಾಮ್ ಚರಣ್ ಅವರ ತಂದೆ, ನಟ ಚಿರಂಜೀವಿ ಅವರು, ದಂಪತಿ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಕಳೆದ ವರ್ಷದ ಅಂತ್ಯದಲ್ಲಿ ಟ್ವೀಟ್ ಮಾಡಿದ್ದರು. ಈ ವರ್ಷ ಮದರ್ಸ್ ಡೇ ಸೆಲೆಬ್ರೇಷನ್ ಸಂದರ್ಭ ಉಪಾಸನಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯ ಶೇರ್ ಮಾಡಿಕೊಂಡಿದ್ದರು. ʼʼಮಾತೃತ್ವವನ್ನು ಹೊಂದಲು ಹೆಮ್ಮೆಯೆನಿಸುತ್ತಿದೆ. ನಾನು ಇದನ್ನು ಸಮಾಜದ, ಕುಟುಂಬದ ಒತ್ತಡಕ್ಕಾಗಿ ಪಡೆಯುತ್ತಿಲ್ಲ. ಬದಲಾಗಿ ನಾನು ತಾಯ್ತನಕ್ಕೆ ಸಂಪೂರ್ಣ ಸಜ್ಜಾಗಿದ್ದು, ಅದಕ್ಕೆ ನನ್ನೆಲ್ಲ ಪ್ರೀತಿಯನ್ನು ಧಾರೆಯೆರೆಯಲು ಸಿದ್ಧ ಎಂದು ಗೊತ್ತು ಮಾಡಿಕೊಂಡ ಬಳಿಕ ತಾಯಿಯಾಗುತ್ತಿದ್ದೇನೆʼʼ ಎಂದಿದ್ದರು.
ಇದಕ್ಕೂ ಮೊದಲು ಒಂದು ಸಂದರ್ಶನದಲ್ಲಿ, ಮಗುವಿಗೆ ʼಹರ್ʼ ಎಂದು ಸಂಬೋಧಿಸುವ ಮೂಲಕ, ಮಗು ಹೆಣ್ಣು ಇರಬಹುದು ಎಂಬ ಸೂಚನೆಯನ್ನು ರಾಮ್ ಚರಣ್ ನೀಡಿದ್ದರು.
ಇದನ್ನೂ ಓದಿ: Ram Charan : ಹಾಲಿವುಡ್ ಎಂಟ್ರಿ ಬಗ್ಗೆ ನಟ ರಾಮ್ ಚರಣ್ ಹೇಳಿದ್ದೇನು? ವಿಡಿಯೊ ವೈರಲ್