Ram Charan: ಅಜ್ಜ,ಮೊಮ್ಮಗಳ ಕಣ್ ಸನ್ನೆ ಕಂಡು ತುಂಬಾ ಮುದ್ದು ಅಂದ್ರು ಫ್ಯಾನ್ಸ್! Yashaswi Devadiga 1 ವರ್ಷ ago ಟಾಲಿವುಡ್ ನಟ ರಾಮ್ಚರಣ್ (Ram Charan) ಮನೆಯಲ್ಲಿ ಅದ್ಧೂರಿಯಾಗಿ ಗಣೇಶ ಚತುರ್ಥಿ ನೆರವೇರಿದೆ. ಫೋಟೊಗಳನ್ನು ಉಪಾಸನಾ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಮಗಳು ‘ಕ್ಲೀಂಕಾರ ಕೊನಿಡೆಲಾ’ಗೆ ಇದು ಮೊದಲ ಹಬ್ಬ. ರಾಮ್ಚರಣ್ ಚರಣ್ ಹಂಚಿಕೊಂಡ ಫೋಟೊವೊಂದರಲ್ಲಿ, ಚಿರಂಜೀವಿ ತಮ್ಮ ಮೊಮ್ಮಗಳು ಕ್ಲಿನ್ ಕಾರಾ ಅವರನ್ನು ಪ್ರೀತಿಯಿಂದ ನೋಡುತ್ತಿರುವುದನ್ನು ಕಾಣಬಹುದು. ಈ ಫೋಟೊ ತುಂಬ ಮುದ್ದಾಗಿದೆ ಎಂದು ರಾಮ್ಚರಣ್ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಚಿರಂಜೀವಿ ಕುಟುಂಬ ಪೂಜೆಯಲ್ಲಿ ಭಾಗಿಯಾದ ಕ್ಷಣ. ಇದನ್ನೂ ಓದಿ: Ram Charan: ಫೋಟೊ ಆಯ್ತು, ಇದೀಗ ಹಾಡಿನ ಸರದಿ; ರಾಮ್ ಚರಣ್ ನಿರೀಕ್ಷಿತ ಚಿತ್ರ ‘ಗೇಮ್ ಚೇಂಜರ್’ಗೆ ಮತ್ತೊಂದು ಸಂಕಷ್ಟ! ರಾಮ್ಚರಣ್ ಸದ್ಯ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ನಟನ ಹುಟ್ಟುಹಬ್ಬದಂದು ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಲಾಯಿತು.