ಬೆಂಗಳೂರು: ಮಾರ್ಚ್ 12ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿಗಾಗಿ ರಾಮ್ ಚರಣ್ (Ram Charan) ಈಗಾಗಲೇ ಪ್ರಚಾರದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮೆರಿಕಾದ ಜನಪ್ರಿಯ ಟಾಕ್ ಶೋ ʻಗುಡ್ ಮಾರ್ನಿಂಗ್ ಅಮೆರಿಕʼದಲ್ಲಿ ನಟ ಮುಖ್ಯ ಅತಿಥಿಯಾಗಿ ಭಾಗವಿಹಿಸಿದ್ದರು. ಇದೀಗ ಅಮೆರಿಕನ್ ಟಾಕ್ ಶೋ KLTA ಎಂಟರ್ಟೈನ್ಮೆಂಟ್‌ನಲ್ಲಿ (KLTA Entertainment) ರಾಮ್‌ಚರಣ್ ಭಾಗಿಯಾಗಿ ಸಿನಿಮಾ ಕುರಿತು ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಚರಣ್ ಅವರನ್ನು ನಿರೂಪಕರು ‘ಭಾರತದ ಬ್ರಾಡ್ ಪಿಟ್’ (‘Brad Pitt of India’) ಎಂದು ಪರಿಚಯಿಸಿದ್ದಾರೆ. ʻಭಾರತದ ಬ್ರಾಡ್ ಪಿಟ್’ ಎಂಬ ಹೋಲಿಕೆಗೆ ರಾಮ್‌ಚರಣ್ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಅಮೆರಿಕದ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿರುವ ಆಸ್ಕರ್ 2023ರ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಮ್ ಚರಣ್ ಕಳೆದ ವಾರ ಅಮೆರಿಕಕ್ಕೆ ತೆರಳಿದ್ದರು.
‘ಬ್ರಾಡ್ ಪಿಟ್ ಆಫ್ ಇಂಡಿಯಾ’ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿದ ರಾಮ್ ಚರಣ್
RRRನ ಸಂಪೂರ್ಣ ತಂಡ ಮಾರ್ಚ್ 12 ರಂದು (ಭಾರತದಲ್ಲಿ ಮಾರ್ಚ್ 13) ಆಸ್ಕರ್ 2023ರಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 28 ರಂದು, ರಾಮ್ ಚರಣ್ KLTA ಎಂಟರ್ಟೈನ್ಮೆಂಟ್ ಟಾಕ್ ಶೋನಲ್ಲಿ ಕಾಣಿಸಿಕೊಂಡರು. RRR ಚಿತ್ರದ ನಾಟು ನಾಟು ಹಾಡು ಹಾಗೂ ಚಿತ್ರದ ಅದ್ಭುತ ಯಶಸ್ಸಿನ ಬಗ್ಗೆ ಮಾತನಾಡಿದರು. ಚರಣ್ ಅವರನ್ನು ಪರಿಚಯಿಸುವಾಗ, ಆತಿಥೇಯರು ಅವರನ್ನು ‘ಭಾರತದ ಬ್ರಾಡ್ ಪಿಟ್’ ಎಂದು ಕರೆದರು. ಇದಕ್ಕೆ ಪ್ರತಿಕ್ರಿಯಿಸಿದ ನಟ, ‘ನನಗೆ ಬ್ರಾಡ್ ಪಿಟ್ ಇಷ್ಟವಾಗುವುದು ಖಚಿತ’ ಎಂದಿದ್ದಾರೆ.
ಇದನ್ನೂ ಓದಿ: Ram Charan: ʻಗುಡ್ ಮಾರ್ನಿಂಗ್ ಅಮೆರಿಕʼ ಟಾಕ್ ಶೋನಲ್ಲಿ ರಾಜಮೌಳಿ ಭಾರತದ ʻಸ್ಟೀವನ್ ಸ್ಪೀಲ್‌ಬರ್ಗ್ʼಎಂದ ರಾಮ್‌ಚರಣ್!
ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ನಾಟು ನಾಟು RRR ಮಾರ್ಚ್ 3 ರಂದು ಅಮೆರಿಕಾದಲ್ಲಿ ಮರು-ಬಿಡುಗಡೆಯಾಗುತ್ತಿದೆ.