ಬೆಂಗಳೂರು: ಮಾರ್ಚ್ 12ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿ 2023ಗಾಗಿ ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ (Ram Charan) ಈಗಾಗಲೇ ಅಮೆರಿಕಕ್ಕೆ ಹಾರಿದ್ದಾರೆ. ಅಕಾಡೆಮಿ ಅವಾರ್ಡ್ಸ್ ಮುಂಚಿತವಾಗಿ, ಅವರು ಹಲವು ಕಾರ್ಯಕ್ರಮಗಳು ಮತ್ತು ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕಾದ ಜನಪ್ರಿಯ ಟಾಕ್ ಶೋ ʻಗುಡ್ ಮಾರ್ನಿಂಗ್ ಅಮೆರಿಕʼದಲ್ಲಿ ನಟ ಮುಖ್ಯ ಅತಿಥಿಯಾಗಿ ಆಗಮಿಸಿ ಆರ್‌ಆರ್‌ಆರ್ ಸಿನಿಮಾ ಕುರಿತು ಮಾತನಾಡಿದ್ದಾರೆ.
ಕಪ್ಪು ಬಟ್ಟೆಯನ್ನು ಧರಿಸಿದ ರಾಮ್, ಸೆಟ್‌ಗಳ ಹೊರಗೆ ನೆರೆದಿದ್ದ ಅಭಿಮಾನಿಗಳನ್ನು ಸ್ವಾಗತಿಸಿದರು. RRR ಕುರಿತು ಮಾತನಾಡಿ ʻʻನಿರ್ದೇಶಕ ರಾಜಮೌಳಿ ಅವರ ಅತ್ಯುತ್ತಮ ಚಿತ್ರಗಳಲ್ಲಿ ಆರ್‌ಆರ್‌ಆರ್ ಕೂಡ ಒಂದು ಎಂದು ನಾನು ಭಾವಿಸುತ್ತೇನೆ. ಅವರನ್ನು ಭಾರತದ ʻಸ್ಟೀವನ್ ಸ್ಪೀಲ್ಬರ್ಗ್ʼ ಎಂದು ಕರೆಯಬಹುದು. ಮುಂದಿನ ಚಿತ್ರದೊಂದಿಗೆ ಅವರು ಶೀಘ್ರದಲ್ಲೇ ಜಾಗತಿಕ ಚಿತ್ರರಂಗಕ್ಕೆ ದಾರಿ ಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆʼʼ ಎಂದರು.
ನಾಟು ನಾಟು…ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ನಾಟು ನಾಟು “ಭಾರತೀಯ ಚಿತ್ರರಂಗಕ್ಕೆ ಗೌರವವಾಗಿದೆ” ಎಂದು ರಾಮಚರಣ್ ಈ ವೇಳೆ ಹಂಚಿಕೊಂಡರು. RRR ಮಾರ್ಚ್ 3 ರಂದು ಅಮೆರಿಕಾದಲ್ಲಿ ಮರು-ಬಿಡುಗಡೆಯಾಗುತ್ತಿದೆ ಎಂದು ಬಹಿರಂಗಪಡಿಸಿದರು.
ಇದನ್ನೂ ಓದಿ: Ram Charan: ಅಮೆರಿಕದ ಜನಪ್ರಿಯ ಟಾಕ್ ಶೋ ʻಗುಡ್ ಮಾರ್ನಿಂಗ್ ಅಮೆರಿಕʼದಲ್ಲಿ ಆರ್‌ಆರ್‌ಆರ್ ನಟ ರಾಮ್‌ಚರಣ್ ಮುಖ್ಯ ಅತಿಥಿ!
ಗುಡ್ ಮಾರ್ನಿಂಗ್ ಅಮೆರಿಕ ಶೋದಲ್ಲಿ ರಾಮ್‌ಚರಣ್
ಇದನ್ನೂ ಓದಿ: Actor Ram Charan : ನಾವು ಪ್ರತಿಸ್ಪರ್ಧಿಗಳೂ ಹೌದು, ಸ್ನೇಹಿತರೂ ಹೌದೆಂದ ರಾಮ್ ಚರಣ್
ರಾಮ್ ಚರಣ್ 6 ನೇ ವಾರ್ಷಿಕ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ (HCA) ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಸಹ ನೀಡಲಿದ್ದಾರೆ. ಟೆರ್ರಿ ಕ್ರ್ಯೂಸ್, ಸೋಫಿ ಥ್ಯಾಚರ್, ಜೋಸೆಫ್ ಗಾರ್ಡನ್-ಲೆವಿಟ್ ಮತ್ತು ಬ್ರಿಟಾನಿ ಸ್ನೋ ಸೇರಿದಂತೆ ಜನಪ್ರಿಯ ಅಮೆರಿಕನ್ ಸೆಲೆಬ್ರಿಟಿಗಳು ಪ್ರಶಸ್ತಿ ಸಮಾರಂಭದಲ್ಲಿ ನಿರೂಪಕರಾಗಿದ್ದಾರೆ. ಇದು ನಿಜಕ್ಕೂ ತೆಲುಗು ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದ ಬಹುದೊಡ್ಡ ಸಾಧನೆ ಎಂದು ರಾಮ್‌ಚರಣ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಸಂತಸ ಹೊರಹಾಕುತ್ತಿದ್ದಾರೆ.