ಬೆಂಗಳೂರು: ಟಾಲಿವುಡ್ ಸ್ಟಾರ್ ರಾಮ್ ಚರಣ್ (Ram Charan) ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷ ಪೂರೈಸಿದ್ದಾರೆ. ಸೆ. 28, 2007ರಲ್ಲಿ ತೆರೆ ಕಂಡಿದ್ದ ‘ಚಿರುತ’ ಚಿತ್ರದ ಮೂಲಕ ರಾಮ ಚರಣ್ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ್ದರು. ಪುರಿ ಜಗನ್ನಾಥ್ ನಿರ್ದೇಶನವಿದ್ದ ಈ ಚಿತ್ರ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್ ಆಗಿತ್ತು. ರಾಮ್ ಚರಣ್ ಸಿನಿ ಪಯಣದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
2009ರಲ್ಲಿ ರಾಜಮೌಳಿ ನಿರ್ದೇಶನದ ‘ಮಗಧೀರ’ ಸಿನಿಮಾ ರಾಮಚರಣ್‌ಗೆ ಹೆಸರನ್ನು ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ದ್ವೀ ಪಾತ್ರದಲ್ಲಿ ರಾಮಚರಣ್ ಅಭಿನಯಿಸಿದ್ದಾರೆ. 150 ಕೋಟಿ ರೂ. ಕಲೆಕ್ಷನ್ ಮಾಡುವುದರ ಮೂಲಕ ಅನುಷ್ಕಾ ಶೆಟ್ಟಿ ಅಭಿನಯದ ʻಅರುಂಧತಿʼ ಸಿನಿಮಾವನ್ನು ಹಿಂದಿಕ್ಕಿತು. ಮಗಧೀರ ಯಶಸ್ಸಿನ ನಂತರ ಬಂದ ʻಆರೆಂಜ್ʼ ಸಿನಿಮಾ ಸೋತಿತು. ಹೀಗೆ ಸೋಲು ಏರಿಳಿತಗಳ ನಡುವೆ ಮತ್ತೆ ಬ್ರೇಕ್ ಕೊಟ್ಟಿದ್ದು ʻಎವಡುʼ ಚಿತ್ರ.
ಇದನ್ನೂ ಓದಿ | Tollywood News: ರೆಟ್ರೋ ಲುಕ್‌ನಲ್ಲಿ ಮಿಂಚಿದ ರಾಮ್‌ಚರಣ್!
ಆದರೆ ಈ ಯಶಸ್ಸಿನ ಬೆನ್ನಲ್ಲೇ ರಾಮ್ ಚರಣ್ ʻಗೋವಿಂದುಡು ಅಂದರಿವಾಡೆಲೆʼ ಹಾಗೂ ʻಬ್ರೂಸ್‌ಲಿ- ದ ಫೈಟರ್ʼ ಮೂಲಕ ಸೋತರು. ನಂತರ ತಮಿಳಿನ ʻತನಿ ಒರುವನ್ʼ ರಿಮೇಕ್ ಚಿತ್ರದ ಮೂಲಕ ಗೆಲುವಿನ ಟ್ರ್ಯಾಕ್‌ಗೆ ಮರಳಿದರು. ʻರಂಗಸ್ಥಲಂʼ ಮೂಲಕ ಸ್ಪಷ್ಟ ಗೆಲುವು ಕಂಡರು. ಹಾಗೂ ನಂತರ ಬಂದ ʻವಿನಯ ವಿಧೇಯ ರಾಮʼ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಕಂಡಿತಾದರೂ ಅಂಥ ಯಶಸ್ಸು ಕಾಣಲಿಲ್ಲ.
2021ರ ರಾಮ್‌ಚರಣ್ ಸಿನಿಮಾ ʻಆರ್‌ಆರ್‌ಆರ್ʼ ಹಾಗೂ ʻಆಚಾರ್ಯʼ ಸಿನಿಮಾ ತೆರೆ ಕಂಡಿತು. ʻಆರ್‌ಆರ್‌ಆರ್ʼ ಬ್ಲಾಕ್ ಬಸ್ಟರ್ ಆಗಿ ಹಿಟ್ ಆದರೆ ʻಆಚಾರ್ಯʼ ಸಿನಿಮಾ ಸೋಲು ಕಂಡಿತು .ರಾಮ್ ಚರಣ್ ಸಿನಿ ಬದುಕಿನಲ್ಲಿ ಅತಿ ಹೆಚ್ಚು ಕಲೆಕ್ಷನ್ ಪಡೆದ ಸಿನಿಮಾಗಳಲ್ಲಿ ʻಆರ್‌ಆರ್‌ಆರ್ʼ ಕೂಡ ಒಂದು. 1200 ಕೋಟಿ ರೂ. ಕಲೆಕ್ಷನ್ ಮಾಡಿದೆ. ಚಿರಂಜಿವಿ ಚಿತ್ರಗಳಾದ ʻಖೈದಿ ನಂ. 150ʼ, ʻಸೈರಾ ನರಸಿಂಹ ರೆಡ್ಡಿʼ, ʻಆಚಾರ್ಯʼ ಹಾಗೂ ʻಗಾಡ್‌ಫಾದರ್ʼ ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ.
ರಾಮ್‌ಚರಣ್ ನಿರ್ದೇಶಕ ಶಂಕರ್ ಅವರ RC 15 ಎಂಬ ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಜತೆ ನಟಿಸಲಿದ್ದಾರೆ. ಮಲ್ಲಿರಾವ ಮತ್ತು ಜರ್ಸಿ ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನನೂರಿ ಅವರೊಂದಿಗೆ ಚಿತ್ರವನ್ನು ಮಾಡಲಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ರಶಾಂತ್ ನೀಲ್‌ರ ಸಿನಿಮಾದಲ್ಲಿ ಕೂಡ ರಾಮ್ ಚರಣ್ ನಟಿಸಲಿದ್ದಾರೆ ಎಂಬ ಸುದ್ದಿ ಇದೆ.
ಇದನ್ನೂ ಓದಿ | Marriage Anniversary ನಿಮಿತ್ತ ರಾಮ್‌ಚರಣ್ ರಿಯಲ್ ಡ್ಯೂಯೆಟ್