ಬೆಂಗಳೂರು: ಟಾಲಿವುಡ್ ನಟ ರಾಮ್‌ಚರಣ್ (Ram Charan) ಸದಾ ಸುದ್ದಿಯಲ್ಲಿರುತ್ತಾರೆ. ರಾಮ್ ಚರಣ್ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿರುವುದಲ್ಲದೇ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ವಿ ಮೆಗಾ ಪಿಕ್ಚರ್ಸ್’ (V Mega Pictures) ನಿರ್ಮಾಣ ಸಂಸ್ಥೆಯ ಜತೆ ಕೈ ಜೋಡಿಸಿದ್ದಾರೆ.
ಪ್ರೊಡಕ್ಷನ್ ಹೌಸ್ ಪ್ಯಾನ್-ಇಂಡಿಯನ್ ಪ್ರೇಕ್ಷಕರನ್ನು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಹೊಸ ವೇದಿಕೆಯನ್ನು ನೀಡುತ್ತದೆ. ಈ ಉದ್ದೇಶಕ್ಕಾಗಿ ಅವರು ತಮ್ಮ ಸ್ನೇಹಿತ ಯುವಿ ಕ್ರಿಯೇಷನ್ಸ್‌ನ ವಿಕ್ರಮ್ ರೆಡ್ಡಿ ಅವರಿಗೆ ಸಾಥ್ ನೀಡಿದ್ದಾರೆ. ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಮಾಣ ಸಂಸ್ಥೆ ಕೆಲಸ ಮಾಡಲಿದೆ. ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುವುದು. ಈ ಮೂಲಕ ರಾಮ್ ಚರಣ್ ಅವರ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ರಾಮ್‌ಚರಣ್ ಈ ಬಗ್ಗೆ ಮಾತನಾಡಿ ʻʻವಿ ಮೆಗಾ ಪಿಕ್ಚರ್ಸ್‌ನಲ್ಲಿ ನಾವು ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ ಹೊಸಬರಿಗೆ ಅವಕಾಶ ನೀಡುವ ಗುರಿ ಹೊಂದಿದ್ದೇವೆ. ನಾವು ಮನರಂಜನಾ ಉದ್ಯಮದ ಮೇಲೆ ಶಾಶ್ವತವಾದ ಪ್ರಭಾವವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ನೀಡುವ ನಿಲುವು ನಮ್ಮದು. ಪ್ರತಿಭಾವಂತ ಕಲಾವಿದರು, ಬರಹಗಾರರು, ನಿರ್ದೇಶಕರು ಮತ್ತು ತಂತ್ರಜ್ಞರೊಂದಿಗೆ ಸಹಕರಿಸುವ ಮೂಲಕ, ವಿ ಮೆಗಾ ಪಿಕ್ಚರ್ಸ್ ಹೊಸ ಪ್ರತಿಭೆಗಳನ್ನು ತೆರೆಯ ಮೇಲೆ ತರಲು ಗುರಿಯನ್ನು ಹೊಂದಿದೆ” ಎಂದು ಹೇಳಿದರು.
ಇತ್ತೀಚೆಗೆ ಶ್ರೀನಗರದಲ್ಲಿ ನಡೆದ ಜಿ 20 ಸಭೆಯಲ್ಲಿ ರಾಮ್ ಚರಣ್ ಅವರು ಭಾಗವಹಿಸಿದ್ದರು. ಭಾರತದ ಸಿನಿಮಾ ಮತ್ತು ಸಂಸ್ಕೃತಿ ಬಗ್ಗೆ ಅವರು ಮಾತನಾಡಿದ್ದರು. ʻʻನಾನು ನನ್ನ ಸಂಸ್ಕೃತಿಗೆ ಹೆಚ್ಚಾಗಿ ಒತ್ತು ಕೊಡಲು ಇಷ್ಟಪಡುತ್ತೇನೆ. ನಮ್ಮ ಭಾರತೀಯ ಸೆಂಟಿಮೆಂಟ್‌ಗಳು, ಹಾಗೆಯೇ ನಮ್ಮ ಸಂಸ್ಕೃತಿ ಎಷ್ಟು ಪ್ರಬಲವಾಗಿವೆ ಎಂಬುದನ್ನು ಹೇಳಲು ಬಯಸುತ್ತೇನೆ. ನಮ್ಮ ಕಥೆಗಳಲ್ಲಿ ಸಾಕಷ್ಟು ಘನತೆ ಇದೆ. ಈಗಿನ ಕಾಲದಲ್ಲಿ ನೋಡಿದಾಗ ಅದು ಸೌತ್ ಇಂಡಿಯಾ ಅಥವಾ ನಾರ್ತ್ ಇಂಡಿಯನ್ ಸಿನಿಮಾ ಅಂತಲ್ಲ. ಇಡೀ, ಭಾರತೀಯ ಮಣ್ಣಿನ ಕಥೆಗಳ ಬಗ್ಗೆ ನಾನು ಹೇಳುತ್ತಿರುವೆʼʼ ಎಂದಿದ್ದರು.
ಇದನ್ನೂ ಓದಿ: Ram Charan: ಸ್ನೇಹಿತರಿಂದ ಉಪಾಸನಾರಿಗೆ ಭರ್ಜರಿ ಗಿಫ್ಟ್: ಅಲ್ಲು ಅರ್ಜುನ್ ಪೋಸ್ಟ್‌ನಲ್ಲಿ ಏನಿದೆ?
@AlwaysRamCharan is starting a new production company called #VMegaPictures ✨#RamCharanEncouragesNewTalent #GameChanger #VMegaPictures pic.twitter.com/YW9e8H1aqT
— charan kishore (@Charankishor47) May 26, 2023
ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾದ ರಾಮ್‌ಚರಣ್
ರಾಮ್‌ಚರಣ್ ಸದ್ಯ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಸ್ ಥಮನ್ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಿರು ಮತ್ತು ಆರ್.ರತ್ನವೇಲು ಛಾಯಾಗ್ರಹಣ, ಶಮೀರ್ ಮಹಮ್ಮದ್ ಸಂಕಲನ ಚಿತ್ರಕ್ಕಿದೆ.ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.