ಬೆಂಗಳೂರು : ರಾಮ್ಚರಣ್ (Ram Charan) ಮತ್ತು ಪತ್ನಿ ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ ನಟ ರಾಮ್ ಚರಣ್.
ರಾಮ್ಚರಣ್ ಮತ್ತು ಪತ್ನಿ ಉಪಾಸನಾ ಕಾಮನೇನಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಿಂದೆ ಅಷ್ಟೇ ವೆಕೇಶನ್ ಫೋಟೊಗಳನ್ನು ಹಂಚಿಕೊಂಡಿದ್ದರು. ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಜೂನ್ 14, 2012 ರಂದು ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ರಾಮ್ ಚರಣ್ ದಂಪತಿ ಪೋಷಕರಾಗುತ್ತಿರುವ ಬಗ್ಗೆ ಚಿರಂಜೀವಿ ಸಾಮಾಜಿಕ ಜಾಲತಾಣದ ಮೂಲಕ ಸಿಹಿ ಸುದ್ದಿ ತಿಳಿಸಿದ್ದಾರೆ.
ಇದನ್ನೂ ಓದಿ | Ram Charan | ಸಿನಿರಂಗದಲ್ಲಿ 15 ವರ್ಷ ಪೂರೈಸಿದ ರಾಮ್ ಚರಣ್
ರಾಮ್ಚರಣ್ ಈ ಹಿಂದೆ ಕೂಡ ಸಾಕಷ್ಟು ಪೋಸ್ಟ್ ಹಂಚಿಕೊಂಡು ಸುದ್ದಿ ಮಾಡಿದ್ದರು. ಪತ್ನಿ ಉಪಾಸನಾ ಕೂಡ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಲೇ ಇರುತ್ತಾರೆ. ಈ ಹಿಂದೆ ʻಆಚಾರ್ಯʼ ಸಿನಿಮಾ ಕುರಿತ ಪೋಸ್ಟ್ ಹಂಚಿಕೊಂಡು, ʼಆಚಾರ್ಯ ಮೂವಿ ನನ್ನ ಪ್ರೀತಿಯ ಅತ್ತೆಗೋಸ್ಕರ, ತೆರೆಯ ಮೇಲೆ ಬರಲು ಸಿದ್ಧʼ ಎಂದು ಪೋಸ್ಟ್ ಶೇರ್ ಮಾಡಿದ್ದರು. ಅತ್ತೆ ಮತ್ತು ಸೊಸೆಯ ಪ್ರೀತಿಗೆ ಜನರು ಕಮೆಂಟ್ ಮೂಲಕ ಖುಷಿಯನ್ನು ಹಂಚಿಕೊಂಡಿದ್ದರು.
ಆರ್ಆರ್ಆರ್ ಸಿನಿಮಾ ಸಂದರ್ಭದಲ್ಲಿ ರಾಮ್ಚರಣ್ ಏರ್ಪೋರ್ಟ್ನ ಟ್ರಾಲಿಯಲ್ಲಿ ಉಪಾಸನಾ ಅವರನ್ನು ಕೂರಿಸಿ ಎಳೆದುಕೊಂಡು ಹೋಗುವ ಪೋಟೊ ಶೇರ್ ಮಾಡಿ, ʼರೆಡಿ ಫಾರ್ RRRʼ ಎಂದು ಕ್ಯಾಪ್ಷನ್ ನೀಡಿ ಪ್ರಮೋಟ್ ಮಾಡಿದ್ದರು.
ಇದನ್ನೂ ಓದಿ | Marriage Anniversary ನಿಮಿತ್ತ ರಾಮ್ಚರಣ್ ರಿಯಲ್ ಡ್ಯೂಯೆಟ್