ಬೆಂಗಳೂರು: ಆರ್‌ಆರ್‌ಆರ್ ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ರಾಮಚರಣ್ ಅವರ ಆ್ಯಕ್ಟಿಂಗ್ ಗತ್ತು, ಸ್ಟೈಲ್ ಗಮ್ಮತ್ತು ಎಲ್ಲವೂ ಅವರ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಆಸ್ಕರ್ ಅಂಗಳದಲ್ಲಿ ರಾಮ್ ಹಾಗೂ ಪತ್ನಿ ಉಪಾಸನಾ ನಡೆದುಕೊಂಡ ರೀತಿ, ಡ್ರೆಸ್ಟಿಂಗ್ ಸ್ಟೈಲ್ ಎಲ್ಲವೂ ನೋಡುಗರ ಗಮನಸೆಳೆದಿತ್ತು. ವಿದೇಶಿ ನೆಲದಲ್ಲಿ ಭಾರತೀಯ ಸೀರೆಯಲ್ಲಿ ಉಪಾಸನಾ, ರಾಜಮೌಳಿ ಪತ್ನಿ ಎಲ್ಲರೂ ಕಂಗೊಳಿಸಿದ್ದರು. ಪ್ರತಿಷ್ಠಿತ ಆಸ್ಕರ್ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವುದಕ್ಕೂ ಮುನ್ನ ರಾಮ್ ಉಪಾಸನಾ ಜೋಡಿ ಕಾರ್ಯಕ್ರಮಕ್ಕೆ ತಯಾರಾದ ವಿಡಿಯೊವೊಂದನ್ನು ವ್ಯಾನಿಟಿ ಫೇರ್ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.
ವ್ಯಾನಿಟಿ ಫೇರ್ ಯೂಟ್ಯೂಬ್‌ನಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಆಸ್ಕರ್‌ಗೂ ಮೊದಲು ಹೇಗೆಲ್ಲಾ ರೆಡಿಯಾದರೂ ಎಂಬುದನ್ನು ತೋರಿಸಲಾಗಿತ್ತು. ರಾಮ್ ಬಟ್ಟೆಗಳನ್ನು ಹೇಗೆಲ್ಲಾ ತಯಾರಿಸಲಾಗಿದೆ. ಬಟ್ಟೆಯ ಗುಣಮಟ್ಟ ವಿನ್ಯಾಸ, ರೆಡಿಯಾಗಿ ದೇವರಿಗೆ ನಮಸ್ಕರಿಸುವ ಪದ್ದತಿ ಎಲ್ಲದರ ವಿಡಿಯೊ ತುಣುಕಿನಲ್ಲಿ ತೋರಿಸಲಾಗಿತ್ತು. ಈ ವಿಡಿಯೊ ವ್ಯಾನಿಟಿ ಫೇರ್ ಯೂಟ್ಯೂಬ್‌ನಲ್ಲಿ 6.5 ಮಿಲಿಯನ್ಸ್ ವೀವ್ಸ್ ಪಡೆದುಕೊಂಡು ದಾಖಲೆ ಬರೆದಿದೆ. ಈ ಯೂಟ್ಯೂಬ್ ಚಾನೆಲ್‌ನಲ್ಲಿ ಅತಿ ಹೆಚ್ಚು ವೀವ್ಸ್ ಪಡೆದಿರುವುದು ಇದೇ ವಿಡಿಯೊ ಎನ್ನುವುದೇ ವಿಶೇಷ.
ಇದನ್ನೂ ಓದಿ: Actor Ram Charan : ದಿಲ್ಲಿ ಏರ್‌ಪೋರ್ಟ್‌ನಲ್ಲಿ ಪತ್ನಿಯೊಂದಿಗೆ ಕಾಣಿಸಿಕೊಂಡ ನಟ ರಾಮ್ ಚರಣ್, ಅಭಿಮಾನಿಗಳ ಮುತ್ತಿಗೆ
ರಾಮ್ ಚರಣ್ ಕಪ್ಪು ಬಣ್ಣದ ಉಡುಗೆ ತೊಟ್ಟು ಮಿಂಚಿದ್ದರೆ, ಉಪಾಸನಾ ಬಿಳಿ ಬಣ್ಣದ ಸಿಲ್ಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ವಿದೇಶಿ ನೆಲದಲ್ಲಿ ಈ ಜೋಡಿ ದೇವರಿಗೆ ನಮಸ್ಕರಿಸಿ ಹೊರಟ ಬಗೆಗೆ ಬಹಳ ಮೆಚ್ಚುಗೆ ಸಿಕ್ಕಿತ್ತು. ಇದೀಗ ರಾಮ್-ಉಪಾಸನಾ ದಂಪತಿಯ ಆಸ್ಕರ್ ವಿಡಿಯೊ ರೆಕಾರ್ಡ್ ಬರೆದಿದೆ. ಇದು ರಾಮ್ ಚರಣ್ ಜನಪ್ರಿಯತೆಗೆ ಕೈಗನ್ನಡಿ ಎನ್ನಬಹುದು.