ಬೆಂಗಳೂರು: ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಮೂಲಕ ವಿಶ್ವಾದ್ಯಂತ ಮನ್ನಣೆ ಗಳಿಸುತ್ತಿರುವ ನಟ ರಾಮ್ ಚರಣ್ (Ram Charan), ತಮ್ಮ ಹಾಲಿವುಡ್ ಸಿನಿಮಾ ಪ್ರವೆಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶೇರ್ ಇ ಕಾಶ್ಮೀರ್ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ಎಸ್‌ಕೆಐಸಿಸಿ) ಫಿಲ್ಮ್ ಟೂರಿಸಂ ಫಾರ್ ಎಕನಾಮಿಕ್ ಆ್ಯಂಡ್ ಕಲ್ಚರಲ್ ಪ್ರಿಸರ್ವೇಶನ್ ಸಮಾರಂಭದಲ್ಲಿ ನಟ ಈ ಬಗ್ಗೆ ಮಾತನಾಡಿದರು. ಮುಂದೆ ಯಾವ ರೀತಿಯ ಸಿನಿಮಾ ಮಾಡಬೇಕೆಂದಿದ್ದೇನೆ, ಹಾಗೆಯೇ ಭಾರತದ ಸಂಸ್ಕೃತಿಯ ಕುರಿತಾದ ಚಿತ್ರಗಳನ್ನು ಮಾಡುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಸಮಾರಂಭದಲ್ಲಿ, ರಾಮ್ ಚರಣ್ ಬಾಲ್ಯದಿಂದಲೂ ಕಾಶ್ಮೀರದ ಮೇಲಿನ ಅಭಿಮಾನದ ಬಗ್ಗೆಯೂ ವ್ಯಕ್ತಪಡಿಸಿದರು.
ಹಾಲಿವುಡ್‌ಗೆ ಎಂಟ್ರಿ ಕೊಡುವ ಬಗ್ಗೆ ನಟ ರಾಮ್ ಚರಣ್ ಮಾತನಾಡಿ ʻʻನಾನು ಭಾರತವನ್ನು ಹೆಚ್ಚು ಅನ್ವೇಷಿಸಲು ಬಯಸುತ್ತೇನೆ. ನಾನು ನನ್ನ ಸಂಸ್ಕೃತಿಗೆ ಹೆಚ್ಚಾಗಿ ಒತ್ತು ಕೊಡಲು ಇಷ್ಟಪಡುತ್ತೇನೆ. ನಮ್ಮ ಭಾರತೀಯ ಸೆಂಟಿಮೆಂಟ್‌ಗಳು, ಹಾಗೆಯೇ ನಮ್ಮ ಸಂಸ್ಕೃತಿ ಎಷ್ಟು ಪ್ರಬಲವಾಗಿವೆ ಎಂಬುದನ್ನು ಹೇಳಲು ಬಯಸುತ್ತೇನೆ. ನಮ್ಮ ಕಥೆಗಳಲ್ಲಿ ಸಾಕಷ್ಟು ಘನತೆ ಇದೆ. ಈಗಿನ ಕಾಲದಲ್ಲಿ ನೋಡಿದಾಗ ಅದು ಸೌತ್ ಇಂಡಿಯಾ ಅಥವಾ ನಾರ್ತ್ ಇಂಡಿಯನ್ ಸಿನಿಮಾ ಅಂತಲ್ಲ. ಇಡೀ, ಭಾರತೀಯ ಮಣ್ಣಿನ ಕಥೆಗಳ ಬಗ್ಗೆ ನಾನು ಹೇಳುತ್ತಿರುವೆʼʼ ಎಂದರು.
ʻʻಭಾರತದಲ್ಲಿ ಶೂಟ್ ಮಾಡಲು ತಂಪಾದ ಸ್ಥಳವೆಂದರೆ ಕಾಶ್ಮೀರ. ನಾನು ಎರಡನೇ ತಲೆಮಾರಿನ ನಟ. ನನ್ನ ತಂದೆ ಚಿರಂಜೀವಿ ಅವರು ಕಾಶ್ಮೀರದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ನಾನು 2016ರಲ್ಲಿ ಈ ಆಡಿಟೋರಿಯಂನಲ್ಲಿ (SKICC) ಚಿತ್ರೀಕರಣ ಮಾಡಿದ್ದೇನೆ. ಹಾಗಾಗಿ, ಬೇಸಿಗೆಯಲ್ಲಿ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಹೊಸ ಸಾಧನೆ ಎಂದು ಅನ್ನಿಸಿದೆʼʼ ಎಂದರು.
ಇದನ್ನೂ ಓದಿ: Ram Charan: ಹಾಲಿವುಡ್‌ಗೆ ಹಾರಿದ್ರಾ ರಾಮ್ ಚರಣ್? RRR ನಟ ಹೇಳಿದ್ದೇನು?
ವೈರಲ್ ವಿಡಿಯೊ
ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾದ ರಾಮ್‌ಚರಣ್
ರಾಮ್‌ಚರಣ್ ಸದ್ಯ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಎಸ್ ಥಮನ್ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಿರು ಮತ್ತು ಆರ್.ರತ್ನವೇಲು ಛಾಯಾಗ್ರಹಣ, ಶಮೀರ್ ಮಹಮ್ಮದ್ ಸಂಕಲನ ಚಿತ್ರಕ್ಕಿದೆ.ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.