Site icon Vistara News

Ram Charan: ಹಾಲಿವುಡ್‌‌ಗೆ ಹಾರಿದ್ರಾ ರಾಮ್ ಚರಣ್? RRR ನಟ ಹೇಳಿದ್ದೇನು?

Ram Charan reveals Hollywood project to be announced

ಬೆಂಗಳೂರು: ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್ (Ram Charan) ಸದ್ಯ ಅಮೆರಿಕಾದಲ್ಲಿ ಸಿನಿಮಾ ಪ್ರಚಾರದಲ್ಲಿದ್ದಾರೆ. ಪಾಡ್‌ಕಾಸ್ಟರ್ ಸ್ಯಾಮ್ ಫ್ರಾಗಸೊ ಅವರೊಂದಿಗಿನ ಇತ್ತೀಚಿನ ಚಾಟ್‌ನಲ್ಲಿ, ನಟ ಹಾಲಿವುಡ್ ಪ್ರಾಜೆಕ್ಟ್‌ ಬಗ್ಗೆ ಮಾತನಾಡಿದ್ದಾರೆ. ಸದ್ಯದಲ್ಲೇ ಅಮೆರಿಕನ್ ಸೆಟ್‌ಗೆ ಕಾಲಿಡುವುದರ ಕುರಿತು, ಅಧಿಕೃತ ಪ್ರಕಟಣೆಯನ್ನು ಕೆಲವೇ ತಿಂಗಳುಗಳಲ್ಲಿ ಹೊರಡಿಸಲಾಗುವುದು ಎಂದು ಬಹಿರಂಗಪಡಿಸಿದ್ದಾರೆ.

ಚಾಟ್‌ನಲ್ಲಿ, ನಟ ಈ ಬಗ್ಗೆ ಮಾತನಾಡಿ ಜೂಲಿಯಾ ರಾಬರ್ಟ್ಸ್, ಟಾಮ್ ಕ್ರೂಸ್ ಮತ್ತು ಬ್ರಾಡ್ ಪಿಟ್ ಅವರೊಂದಿಗೆ ಕೆಲಸ ಮಾಡಲು ಬಯಸಿರುವುದಾಗಿಯೂ ಹೇಳಿಕೊಂಡಿದ್ದಾರೆ”. ʻʻಆಸ್ಕರ್‌ನಲ್ಲಿ ನಾನು 1.4 ಶತಕೋಟಿ ಭಾರತೀಯ ಜನರನ್ನು ಪ್ರತಿನಿಧಿಸುತ್ತಿದ್ದೇನೆ. RRR ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಜವಾಬ್ದಾರಿಯೂ ಹೆಚ್ಚಾಗಿದೆ. ಆಸ್ಕರ್‌ ಕೇವಲ ಒಂದು ಬಾರಿಗೆ ಮಾತ್ರವಲ್ಲ. ಭಾರತಕ್ಕೆ ಇದು ನಿರಂತರವಾಗಿರಬೇಕು. ಎಲ್ಲಾ ಭಾರತೀಯ ಚಲನಚಿತ್ರ ನಿರ್ದೇಶಕರು ಮತ್ತು ನಟರು ಇಲ್ಲಿಗೆ ಬಂದು ಆಸ್ಕರ್‌ ಪಡೆಯುವದಕ್ಕಾಗಿ ಶ್ರಮಿಸಬೇಕು” ಎಂದು ಹೇಳಿದರು.

ಇದನ್ನೂ ಓದಿ: Actor Ram Charan : ಶಾರುಖ್‌ ಖಾನ್‌ ʼಜವಾನ್‌ʼ ಸಿನಿಮಾದಲ್ಲಿ ಅಲ್ಲು ಬದಲು ರಾಮ್‌ ಚರಣ್‌ ನಟನೆ?

ರಾಮ್‌ಚರಣ್‌ ಜನುಮದಿನದಂದೇ RC15 ಶೀರ್ಷಿಕೆ ಘೋಷಣೆ

ನಿರ್ಮಾಪಕ ದಿಲ್ ರಾಜು ಅವರು ಮಾರ್ಚ್ 27ರಂದು ರಾಮ್ ಚರಣ್ ಅವರ ಹುಟ್ಟುಹಬ್ಬದಂದು RC15 ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ. RC15 ಅನ್ನು ಶಂಕರ್ ನಿರ್ದೇಶಿಸಿದ್ದಾರೆ ಮತ್ತು ರಾಮ್ ಚರಣ್ ಮತ್ತು ಬಾಲಿವುಡ್ ನಟಿ ಕಿಯಾರಾ ಆಡ್ವಾಣಿ ನಟಿಸಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ಎಸ್ ಥಮನ್ ಸಂಗೀತವಿದೆ.

Exit mobile version