ಬೆಂಗಳೂರು: ಮಾರ್ಚ್ 12ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿ 2023ಗಾಗಿ ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ (Ram Charan) ಈಗಾಗಲೇ ಅಮೆರಿಕಕ್ಕೆ ಹಾರಿದ್ದಾರೆ. ಅಕಾಡೆಮಿ ಅವಾರ್ಡ್ಸ್ ಮುಂಚಿತವಾಗಿ, ಅವರು ಹಲವು ಕಾರ್ಯಕ್ರಮಗಳು ಮತ್ತು ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕಾದ ಜನಪ್ರಿಯ ಟಾಕ್ ಶೋ ʻಗುಡ್ ಮಾರ್ನಿಂಗ್ ಅಮೆರಿಕʼದಲ್ಲಿ ನಟ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮವು ಎಬಿಸಿಯಲ್ಲಿ ರಾತ್ರಿ 11.30ಕ್ಕೆ ಪ್ರಸಾರವಾಗಲಿದೆ. ಪ್ರತಿಷ್ಠಿತ 6ನೇ ವಾರ್ಷಿಕ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ (HCA) ಪ್ರಶಸ್ತಿ ಸಮಾರಂಭದಲ್ಲಿ ನಟ ಪ್ರಸ್ತುತ ಪಡಿಸಲಿದ್ದಾರೆ.
ವರದಿಗಳ ಪ್ರಕಾರ, ರಾಮ್ ಚರಣ್ ʻಗುಡ್ ಮಾರ್ನಿಂಗ್ ಅಮೆರಿಕ ಎಪಿಸೋಡ್ ಗುರುವಾರ (ಫೆಬ್ರವರಿ 23) ಬೆಳಗ್ಗೆ (ಭಾರತದಲ್ಲಿ ಸಂಜೆ)ಪ್ರೀಮಿಯರ್ ಆಗಲಿದೆ. ಕಾರ್ಯಕ್ರಮವನ್ನು ಎಬಿಸಿಯಲ್ಲಿ ಪ್ರಸಾರ ಮಾಡಲಾಗುತ್ತದೆ.
ಗುಡ್ ಮಾರ್ನಿಂಗ್ ಅಮೆರಿಕ ಶೋನಲ್ಲಿ ಕಾಣಿಸಿಕೊಳ್ಳಲಿರುವ ರಾಮ್ ಚರಣ್
ರಾಮ್ ಚರಣ್ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ವಿಡಿಯೊಗಳು, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಮೆರಿಕಾಗೆ (Oscars 2023) ತೆರಳುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ರಾಮ್ ಚರಣ್ ಅಯ್ಯಪ್ಪ ಸ್ವಾಮಿಯ ಭಕ್ತ. ಸದ್ಯ ಮಾಲೆ ಧರಿಸಿರುವ ಚರಣ್ ಕಪ್ಪು ಉಡುಪಿನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಮಯಕ್ಕೆ ನಾಟು ನಾಟು…ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ಗೆ ನಾಮನಿರ್ದೇಶನಗೊಂಡಿದೆ. ಹಾಗಾಗಿ ವಿದೇಶಕ್ಕೆ ಹೋಗುತ್ತಿರುವಾಗಲೂ ಕಪ್ಪು ಉಡುಪು ಧರಿಸಿ ಬರಿಗಾಲಿನಲ್ಲೇ ರಾಮ್ ಚರಣ್ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ: Oscars 2023: ಬರಿಗಾಲಿನಲ್ಲೇ ಅಮೆರಿಕಕ್ಕೆ ಹಾರಿದ ನಟ ರಾಮ್ಚರಣ್: ಹಾಡಿ ಹೊಗಳಿದ ಅಭಿಮಾನಿಗಳು
ಚಾಟ್ ಶೋನಲ್ಲಿ ಕಾಣಿಸಿಕೊಳ್ಳುವುದರ ಜತೆಗೆ, ರಾಮ್ ಚರಣ್ 6 ನೇ ವಾರ್ಷಿಕ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ (HCA) ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಸಹ ನೀಡಲಿದ್ದಾರೆ. ಟೆರ್ರಿ ಕ್ರ್ಯೂಸ್, ಸೋಫಿ ಥ್ಯಾಚರ್, ಜೋಸೆಫ್ ಗಾರ್ಡನ್-ಲೆವಿಟ್ ಮತ್ತು ಬ್ರಿಟಾನಿ ಸ್ನೋ ಸೇರಿದಂತೆ ಜನಪ್ರಿಯ ಅಮೆರಿಕನ್ ಸೆಲೆಬ್ರಿಟಿಗಳು ಪ್ರಶಸ್ತಿ ಸಮಾರಂಭದಲ್ಲಿ ನಿರೂಪಕರಾಗಿದ್ದಾರೆ. ಇದು ನಿಜಕ್ಕೂ ತೆಲುಗು ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದ ಬಹುದೊಡ್ಡ ಸಾಧನೆ ಎಂದು ರಾಮ್ಚರಣ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಸಂತಸ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: Ram Charan | ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ರಾಮ್ಚರಣ್-ಉಪಾಸನಾ ದಂಪತಿ!
ಸಿನಿಮಾಗಳಲ್ಲಿ ಬ್ಯುಸಿಯಾದ ನಟ
ರಾಮ್ ಚರಣ್ ಪ್ರಸ್ತುತ ನಿರ್ದೇಶಕ ಶಂಕರ್ ಅವರ ಮುಂಬರುವ ಚಲನಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇದು ತಾತ್ಕಾಲಿಕವಾಗಿ RC15 (ಆರ್ಸಿ 15) ಎಂದು ಹೆಸರಿಡಲಾಗಿದೆ. ಈ ಚಿತ್ರ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಿಸಿದ್ದಾರೆ.