ಮುಂಬಯಿ: ಸಲ್ಮಾನ್ ಖಾನ್ ಅವರ ಕಭಿ ಈದ್ ಕಭಿ ದೀಪಾವಳಿ ಚಿತ್ರವು ಆರಂಭದಿಂದಲೂ ಸದ್ದು ಮಾಡುತ್ತಲೇ ಇದೆ. ಇದೀಗ ಹೊಸ ಸುದ್ದಿಯೊಂದು ಸೇರ್ಪಡೆಯಾಗಿದೆ. RRR ಖ್ಯಾತಿಯ ಸ್ಟಾರ್ ರಾಮ್ ಚರಣ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಒಂದು ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ ಎನ್ನುವುದೇ ಆ ಸ್ಪೆಷಲ್ ನ್ಯೂಸ್.
ಚಿತ್ರದ ಶೂಟಿಂಗ್ ಸದ್ಯ ಹೈದರಾಬಾದ್ನಲ್ಲಿ ನಡೆಯುತ್ತಿದ್ದು, ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಮತ್ತು ವೆಂಕಟೇಶ್ ಭಾಗವಹಿಸುತ್ತಿದ್ದಾರೆ. ಚಿತ್ರದಲ್ಲಿ ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ, ರಾಘವ್ ಜುಯಲ್ ಮತ್ತು ಸಿದ್ಧಾರ್ಥ್ ನಿಗಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ದಿನ ಕಳೆದಂತೆ ನಿರ್ದೇಶಕ ಫರ್ಹಾದ್ ಸಾಮ್ಜಿ ಸ್ಟಾರ್ ನಟರನ್ನು ಹೊಸದಾಗಿ ಸೇರಿಸುತ್ತಿದ್ದಾರೆ.
ಹೈದರಾಬಾದ್ನಲ್ಲಿ ಹಾಡೊಂದರ ಚಿತ್ರೀಕರಣ ನಡೆದಿದೆ. ಆಗ ಸಲ್ಮಾನ್ ರಾಮ್ ಚರಣ್ ಅವರನ್ನು ಭೇಟಿಯಾಗಲು ಹೋಗಿದ್ದರಂತೆ. ಅವರ ಜತೆ ಮಾತನಾಡುವಾಗ ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಕೇಳಿಕೊಂಡರಂತೆ. ಅದಕ್ಕೆ ತಕ್ಷಣ ಒಪ್ಪಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗಿದೆ.ಅಂದ ಹಾಗೆ ಈ ಚಿತ್ರದ ಹೆಸರನ್ನು ʻಬಾಯಿಜಾನ್ʼ ಎಂದು ಬದಲಿಸಲಾಗಿದೆ. ಈ ಚಿತ್ರ ಕ್ರಿಸ್ಮಸ್ ವೇಳೆಗೆ ತೆರೆಗೆ ಬರಲಿದೆ.
ಇದನ್ನೂ ಓದಿ: ಕಭಿ ಈದ್ ಕಭಿ ದಿವಾಲಿ: Salman Khan ಹೊಸ ಚಿತ್ರದ ಹೆಸರು ಬದಲಾಗುತ್ತಾ? ಹಾಗಿದ್ರೆ ಯಾಕೆ?