Ram Charan-Upasana: ಆಸ್ಪತ್ರೆಯಿಂದ ಉಪಾಸನಾ ಡಿಸ್ಚಾರ್ಜ್; ಮೆಗಾ ಫ್ಯಾಮಿಲಿಗೆ ಖುಷಿಯೋ ಖುಷಿ! Yashaswi Devadiga 2 ವರ್ಷಗಳು ago 11 ವರ್ಷಗಳ ಬಳಿಕ ರಾಮ್ ಚರಣ್ ಮತ್ತು ಉಪಾಸನಾ (Ram Charan-Upasana) ದಂಪತಿ ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಉಪಾಸನಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೆಗಾ ಕುಡಿಯ ನೋಡಲು ಆಸ್ಪತ್ರೆ ಬಳಿ ಸೇರಿದ್ದ ಅಭಿಮಾನಿಗಳತ್ತ ರಾಮ್ ಚರಣ್-ಉಪಾಸನಾ ಕೈಬೀಸಿದ್ದಾರೆ. ಚರಣ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ತಮ್ಮ ಮಗುವಿನ ಆರೋಗ್ಯ ಮತ್ತು ಪತ್ನಿ ಉಪಾಸನಾ ಬಗ್ಗೆ ಮಾತನಾಡಿದರು. ಈ ವೇಳೆ ಮಾಧ್ಯಮದ ಮುಂದೆ ಬಂದ ರಾಮ್‌ಚರಣ್, ಮಗಳು ಆರೋಗ್ಯವಾಗಿದ್ದಾಳೆ, ನಿಮ್ಮೆಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ ಎಂದಿದ್ದಾರೆ. ಮೆಗಾ ಪ್ರಿನ್ಸೆಸ್ ಆಗಮನದ ಅಧಿಕೃತ ಘೋಷಣೆ ಹೊರಬಿದ್ದ ತಕ್ಷಣ ಆಸ್ಪತ್ರೆ ಸಂಭ್ರಮದಿಂದ ತುಂಬಿತ್ತು. ಚಿರಂಜೀವಿ ಮತ್ತು ಅವರ ಪತ್ನಿ, ಅಲ್ಲು ಅರವಿಂದ್ ಮತ್ತು ಅವರ ಪತ್ನಿ, ಅಲ್ಲು ಅರ್ಜುನ್, ವರುಣ್ ತೇಜ್, ಚರಣ್ ಸಹೋದರಿಯರಾದ ಸುಶ್ಮಿತಾ, ಶ್ರೀಜಾ, ನಿಹಾರಿಕಾ ಕೊನಿಡೇಲ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಗುವಿನ ಮುಖವನ್ನು ಕ್ಯಾಮೆರಾಕ್ಕೆ ಇನ್ನೂ ತೋರಿಸಿಲ್ಲವಾದರು ರಾಮ್ ಹಾಗೂ ಉಪಾಸನಾ ಮಗುವಿನ ಮುಖ ಕಾಣದಂತೆ ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ. ರಾಮ್ ಚರಣ್ ಹಾಗೂ ಉಪಾಸನಾ ಇನ್ನು ಕೆಲವು ವರ್ಷಗಳ ಕಾಲ ಮಗುವನ್ನು ಮಾಧ್ಯಮಗಳ ಕ್ಯಾಮೆರಾದಿಂದ ದೂರವೇ ಇಡಲಿದ್ದಾರೆ. ಆಸ್ಪತ್ರೆಯಿಂದ ಹೊರಡುವ ಮುನ್ನ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಾಮ್ ಚರಣ್, ಸಂತಸ ವ್ಯಕ್ತಪಡಿಸಿದ್ದಾರೆ.