Site icon Vistara News

Ram Charan | ಥಾಯ್ಲೆಂಡ್‌ಗೆ ಹಾರಿದ ರಾಮ್‌ಚರಣ್‌ ದಂಪತಿ: ಫೋಟೊ ವೈರಲ್‌!

Ram Charan

ಬೆಂಗಳೂರು : ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಸಿಹಿ ಸುದ್ದಿ ಕೊಟ್ಟ ಬೆನ್ನಲ್ಲೇ ರಾಮ್‌ಚರಣ್‌ (Ram Charan) ದಂಪತಿ ಥಾಯ್ಲೆಂಡ್‌ಗೆ ತೆರಳಿದ್ದಾರೆ. ಇನ್‌ಸ್ಟಾದಲ್ಲಿ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ ರಾಮಚರಣ್‌ ಪತ್ನಿ ಉಪಾಸನಾ.

ಕಳೆದ ವಾರ, ರಾಮ್ ಚರಣ್‌ ಮತ್ತು ಉಪಾಸನಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಿರಿಯ ನಟ ಚಿರಂಜೀವಿ ಘೋಷಿಸಿದ್ದರು. “ಶ್ರೀ ಹನುಮಾನ್ ಜಿ ಅವರ ಆಶೀರ್ವಾದದೊಂದಿಗೆ, ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆʼʼ ಎಂದು ಪೋಸ್ಟ್ ಶೇರ್‌ ಮಾಡಿಕೊಂಡಿದ್ದರು.

ಇದನ್ನೂ ಓದಿ | Ramcharan | ʻಉಪ್ಪೇನʼ ಖ್ಯಾತಿಯ ನಿರ್ದೇಶಕರ ಜತೆ ನಟ ರಾಮ್‌ ಚರಣ್‌ ಹೊಸ ಸಿನಿಮಾ ಅನೌನ್ಸ್‌!

ಇದರ ಬೆನ್ನಲ್ಲೇ ಉಪಾಸನಾ ಹಾಗೂ ರಾಮ್‌ ಚರಣ್‌ ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಿದ್ದಾರೆ ಎಂಬ ಮಾತು ಟಾಲಿವುಡ್‌ ಅಂಗಳದಲ್ಲಿ ಕೇಳಿ ಬಂದಿತ್ತು. ಅನೇಕ ತೆಲುಗು ಮಾಧ್ಯಮಗಳು ಕೂಡ ಇದೇ ರೀತಿ ವರದಿ ಮಾಡಿವೆ. ಜನರ ಪ್ರಶ್ನೆಗಳಿಗೆ ಬೇಸತ್ತಿದ್ದ ಉಪಾಸನಾ, ”ಮಕ್ಕಳು ಮಾಡಿಕೊಳ್ಳುವುದು, ಬಿಡುವುದು ನಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದು. ಜನರು ಪದೇಪದೆ ಇಂತಹ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ. ಒಂದು ವೇಳೆ ಆ ದಿನ ಎದುರಾದಾಗ ನಿಮ್ಮೆಲ್ಲರಿಗೂ ತಿಳಿಸುತ್ತೇನೆ ಎಂದಿದ್ದರು. ಅದರಂತೆ ಡಿಸೆಂಬರ್‌ 12 ರಂದು ರಾಮ್‌ಚರಣ್‌ ಹಾಗೂ ಉಪಾಸನಾ ಅಪ್ಪ-ಅಮ್ಮ ಆಗುತ್ತಿದ್ದೇವೆ” ಎಂದು ಹೇಳಿಕೊಂಡಿದ್ದರು.

‌ಪ್ರೆಗ್ನೆನ್ಸಿ ಅನೌನ್ಸ್‌ ಮಾಡಿದ ನಂತರ ಉಪಾಸನಾ, ತಮ್ಮ ಕುಟುಂಬದ ಮಹಿಳಾ ಸದಸ್ಯರ ಜತೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದರು, ”ನನ್ನ ಜೀವನದ ಬಹಳ ಪ್ರಮುಖ ವ್ಯಕ್ತಿಯ ಆಶೀರ್ವಾದದೊಂದಿಗೆ ತಾಯ್ತನದ ಅನುಭವಕ್ಕೆ ಕಾಲಿಡುತ್ತಿದ್ದೇನೆ, ಮಿಸ್‌ ಯೂ ಅತ್ತಮ್ಮ” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ | Ram Charan | ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ರಾಮ್‌ಚರಣ್‌-ಉಪಾಸನಾ ದಂಪತಿ!

Exit mobile version