Site icon Vistara News

Ram Charan: ಈಜುಕೊಳದಲ್ಲಿ ರಾಮ್‌ಚರಣ್‌ ಮಗಳ ಪ್ರತಿಬಿಂಬ; ಇಟಲಿಯಲ್ಲಿದೆ ಮೆಗಾ ಕುಟುಂಬ!

Ram Charan, Upasana Konidela family

ಬೆಂಗಳೂರು: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ವಿವಾಹ ಮಹೋತ್ಸವಕ್ಕೆ ಮುಂಚಿತವಾಗಿ, ಕೊನಿಡೇಲಾ ಮತ್ತು ಕಾಮಿನೇನಿ ಕುಟುಂಬ ಇಟಲಿಗೆ ತಲುಪಿದೆ. ರಾಮ್‌ಚರಣ್‌ ಮತ್ತು ಉಪಾಸನಾ ಕುಟುಂಬದೊಂದಿಗೆ ಇರವ ಗ್ರೂಪ್‌ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ನವೆಂಬರ್ 1ರಂದು ಇಟಲಿಯಲ್ಲಿ ಮದುವೆಯಾಗಲಿದ್ದಾರೆ. ನಂತರ ಭಾರತದಲ್ಲಿ ಎರಡು ವಿವಾಹ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಹೆಚ್ಚಾಗಿ ಇದೀಗ ಸುದ್ದಿಯಲ್ಲಿರುವುದು ರಾಮ್‌ ಚರಣ್ (Ram Charan) ಪುತ್ರಿ.

ಚಿತ್ರದಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಪರಸ್ಪರರ ಪಕ್ಕದಲ್ಲಿ ನಿಂತಿದ್ದರು, ಚಿರಂಜೀವಿ ಇತರ ಕುಟುಂಬ ಸದಸ್ಯರೊಂದಿಗೆ ಕುಳಿತುಕೊಂಡಿದ್ದಾರೆ. ರಾಮ್‌ಚರಣ್‌ ಪುತ್ರಿ ಕ್ಲೀಂಕಾರ ಕೂಡ ಫೋಟೊದಲ್ಲಿ ಇದ್ದು, ಹೃದಯದ ಇಮೋಜಿಯೊಂದಿಗೆ ಮುಖವನ್ನು ಮರೆಮಾಡಲಾಗಿದೆ. ಮತ್ತೊಂದು ಚಿತ್ರದಲ್ಲಿ ರಾಮ್ ಚರಣ್ ಸಾಲ್ವಟೋರ್ ಫೆರ್ರಾಗಾಮೊ ಜತೆ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಳ್ಳುತ್ತಾ, ಉಪಾಸನಾ ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ “ಟಸ್ಕಾನಿಯಲ್ಲಿ ಕೊನಿಡೆಲಾ ಕಾಮಿನೇನಿ ರಜಾದಿನ! ಈ ಸ್ಮರಣೀಯ ಅನುಭವಕ್ಕಾಗಿ ಧನ್ಯವಾದಗಳು ಸಾಲ್ವಟೋರ್ ಫೆರ್ರಾಗಾಮೊ”ಎಂದು ಬರೆದುಕೊಂಡಿದ್ದಾರೆ.

ಈ ಫೋಟೊ ವೈರಲ್‌ ಆಗುತ್ತಿದ್ದಂತೆ ಕಮೆಂಟ್‌ನಲ್ಲಿ ನೆಟ್ಟಿಗರು ʻʻಚಿತ್ರದಲ್ಲಿ ಕ್ಲೀಂಕಾರ ಅವರ ಮುಖವನ್ನು ಮರೆಮಾಡಿದ್ದರೂ, ಈಜುಕೊಳದಲ್ಲಿ ಅವರ ಪ್ರತಿಬಿಂಬವನ್ನು ಸ್ಪಷ್ಟವಾಗಿ ಕಾಣಬಹುದುʼʼ ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಕೂಡ “ಅಮ್ಮಾ ನಾವು ನೀರಿನ ಪ್ರತಿಬಿಂಬದ ಮೂಲಕ ಮಗುವಿನ ಮುಖವನ್ನು ನೋಡಿದ್ದೇವೆ” ಎಂದು ಬರೆದಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಉಪಾಸನಾ ಮದುವೆ ಇಟಲಿಯಲ್ಲಿ ನಡೆಯಲಿದೆ ಎಂದು ಬಹಿರಂಗಪಡಿಸಿದ್ದರು.

ಇದನ್ನೂ ಓದಿ: Ram Charan; ಧೋನಿ ಜತೆ ಪೋಸ್‌ ಕೊಟ್ಟ ರಾಮ್‌ ಚರಣ್‌; ಸಿನಿಮಾ ಬಗ್ಗೆ ಮಾತುಕತೆನಾ?

ನಾಯಕಿ ಲಾವಣ್ಯ ತ್ರಿಪಾಠಿ ಜತೆ ಲವ್ ಟ್ರ್ಯಾಕ್‌ನಲ್ಲಿದ್ದ ವರುಣ್ ಕೊನೆಗೂ ಮದುವೆಯಾಗುತ್ತಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥ ನಾಗಬಾಬು ಅವರ ನಿವಾಸದಲ್ಲಿ ಜೂನ್‌ 9ರಂದು ನೆರವೇರಿತ್ತು ನಾಗ ಬಾಬು ಅವರು ವರುಣ್ ತೇಜ್ ಅವರ ತಂದೆ. ತೆಲುಗು ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ʻಮಿಸ್ಟರ್ʼ, ʻಅಂತರಿಕ್ಷಂʼ ನಂತಹ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 2017ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. 2014ರಲ್ಲಿ ‘ಮುಕುಂದ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು ವರುಣ್‌ ತೇಜ್‌. ಆನಂತರ ‘ಕಂಚೆ’, ‘ಫಿದಾ’, ‘ತೊಲಿ ಪ್ರೇಮ’, ‘ಎಫ್‌2’, ‘ಎಫ್‌3’ ಥರದ ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ‘ಗಾಂಡೀವಧಾರಿ ಅರ್ಜುನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಲಾವಣ್ಯ ತ್ರಿಪಾಠಿ ‘ಅಂಡಲಾ ರಾಕ್ಷಸಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ನೀಡಿದರು. ಕೆಲ ತಮಿಳು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ‘ಹ್ಯಾಪಿ ಬರ್ತ್‌ಡೇ’ ನಂತರ ಯಾವುದೇ ತೆಲುಗು ಸಿನಿಮಾಗಳಲ್ಲೂ ಲಾವಣ್ಯ ನಟಿಸುತ್ತಿಲ್ಲ..

Exit mobile version