ಬೆಂಗಳೂರು: ಉಪಾಸನಾ ಕೊನಿಡೆಲಾ (Upasana Konidela) ಪ್ರೆಗ್ನೆಂಟ್ ಎಂಬ ವಿಚಾರವನ್ನು ಕಳೆದ ಡಿಸೆಂಬರ್ನಲ್ಲಿ ತಿಳಿಸಲಾಗಿತ್ತು. ಸದ್ಯದಲ್ಲೇ ಅವರು ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ರಾಮ್ ಚರಣ್ (Ram Charan) ದಂಪತಿ, ಪೋಷಕರಾಗಲು ಯಾವುದೇ ಸಾಮಾಜಿಕ ಒತ್ತಡಕ್ಕೆ ಮಣಿಯದೆ ಮಗುವನ್ನು ಪಡೆಯಲು ನಿರ್ಧರಿಸಿದ್ದರು ಎಂದು ಉಪಾಸನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 2012 ರಲ್ಲಿ ವಿವಾಹವಾದ ರಾಮ್‌ಚರಣ್ ಹಾಗೂ ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ, ಉಪಾಸನಾ ಅವರು ತಾಯಿಯಾಗಲು ಉತ್ಸುಕರಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ನಾನು ತುಂಬಾ ಉತ್ಸುಕನಾಗಿದ್ದೇನೆ. ಸಮಾಜ ಬಯಸಿದಾಗ ನಾವು ಮಗುವನ್ನು ಪಡೆಯಬೇಕೆಂಬ ನಿರ್ಧಾರ ಮಾಡಿದ್ದಲ್ಲ. ನಮ್ಮ ಮದುವೆಯಾದ ಹತ್ತು ವರ್ಷಗಳ ನಂತರ, ನಾವು ಈಗ ಮಗುವನ್ನು ಪಡೆಯಬೆಕೆಂಬ ನಿರ್ಧಾರಕ್ಕೆ ಬಂದಿದ್ದೇವೆ. ನಾವಿಬ್ಬರೂ ಅಭಿವೃದ್ಧಿ ಹೊಂದುತ್ತಿರುವ ಕಾರಣ ಇದು ಅತ್ಯುತ್ತಮ ಸಮಯ ಎಂದು ನಾನು ಭಾವಿಸುತ್ತೇನೆ. ನಾವಿಬ್ಬರೂ ಆರ್ಥಿಕವಾಗಿ ಸುರಕ್ಷಿತರಾಗಿದ್ದೇವೆ. ನಮ್ಮ ಮಕ್ಕಳನ್ನು ನಾವೇ ನೋಡಿಕೊಳ್ಳಬಹುದು. ಇದು ನಮ್ಮ ಪರಸ್ಪರ ನಿರ್ಧಾರವಾಗಿತ್ತು. ಹೊರಗಿನ ಸಮಾಜದಿಂದಾಗಲಿ, ನಮ್ಮ ಕುಟುಂಬದಿಂದಾಗಲಿ ಯಾವುದೇ ಒತ್ತಡ ನಮಗಿರಲಿಲ್ಲ. ಎಂದು ಉಪಾಸನಾ ಹೇಳಿದರು.
ಇದನ್ನೂ ಓದಿ: Actor Ram Charan : ರಾಮ್‌ಚರಣ್ ಬರ್ತ್‌ಡೇ ಪಾರ್ಟಿಯಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ಗರ್ಭಿಣಿ ಉಪಾಸನಾ
ಇತ್ತೀಚೆಗೆ, ರಾಮ್ ಚರಣ್ ಆರ್‌ಆರ್‌ಆರ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಇದ್ದಾಗ ಉಪಾಸನಾ ಕೂಡ ಇದ್ದರು. ಆಸ್ಕರ್ ಅಭಿಯಾನದ ಭಾಗವಾಗಿ ಅಮೆರಿಕದಲ್ಲಿ ಪ್ರವಾಸದಲ್ಲಿದ್ದಾಗ, ಉಪಾಸನಾ ಕೂಡ ಜತೆಗಿದ್ದರು. ಈ ಬಗ್ಗೆ ಮಾತನಾಡಿ ʻʻನಮಗೆ ಪ್ರೀತಿಯನ್ನು ನೀಡಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆಯನ್ನು ಹೇಳುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮಗುವಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟವರಿಗೆ. ನನ್ನ ಹಿಂದೆ ಇರುವ ಸಂಪೂರ್ಣ ವೈದ್ಯಕೀಯ ತಂಡಕ್ಕೆ ಮತ್ತು ನನ್ನ ಪತಿಗೆ ನಾನು ಧನ್ಯವಾದ ಹೇಳುತ್ತೇನೆ, ಅವರು ನನ್ನ ದೊಡ್ಡ ಬೆಂಬಲವಾಗಿದ್ದರುʼʼಎಂದರು.