Site icon Vistara News

Oscars 2023: ಬರಿಗಾಲಿನಲ್ಲೇ ಅಮೆರಿಕಕ್ಕೆ ಹಾರಿದ ನಟ ರಾಮ್‌ಚರಣ್‌: ಹಾಡಿ ಹೊಗಳಿದ ಅಭಿಮಾನಿಗಳು

Ram Charan walks barefoot at the airport

ಬೆಂಗಳೂರು: ಮಾರ್ಚ್ 12ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿ 2023ಗಾಗಿ ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಈಗಾಗಲೇ ಅಮೆರಿಕಾಗೆ ಹಾರಿದ್ದಾರೆ. ರಾಮ್ ಚರಣ್ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿಡಿಯೊಗಳು, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಮೆರಿಕಾಗೆ (Oscars 2023) ತೆರಳುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ರಾಮ್ ಚರಣ್ ಬರಿಗಾಲಲ್ಲಿ ನಡೆದಾಡುವ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಹಾಗೂ ಅಭಿಮಾನಿಗಳು ಅವರನ್ನು ಅತ್ಯಂತ ವಿನಮ್ರ ನಟ ಎಂದು ಹಾಡಿ ಹೊಗಳಿದ್ದಾರೆ.

ರಾಮ್ ಚರಣ್ ಅಯ್ಯಪ್ಪ ಸ್ವಾಮಿಯ ಭಕ್ತ. ಸದ್ಯ ಮಾಲೆ ಧರಿಸಿರುವ ಚರಣ್ ಕಪ್ಪು ಉಡುಪಿನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಮಯಕ್ಕೆ ನಾಟು ನಾಟು…ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಹಾಗಾಗಿ ವಿದೇಶಕ್ಕೆ ಹೋಗುತ್ತಿರುವಾಗಲೂ ಕಪ್ಪು ಉಡುಪು ಧರಿಸಿ ಬರಿಗಾಲಿನಲ್ಲೇ ರಾಮ್ ಚರಣ್ ಪ್ರಯಾಣ ಬೆಳೆಸಿದರು. ಅಭಿಮಾನಿಗಳು ನಟನನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಅವರ ಸರಳತೆಯನ್ನು ಹೊಗಳುತ್ತಿದ್ದಾರೆ.

ಇದನ್ನೂ ಓದಿ: Sachin Tendulkar: ಟೀಮ್​ ಇಂಡಿಯಾಕ್ಕೆ ‘RRR’ ಆಸರೆ; ಸಚಿನ್​ ತೆಂಡೂಲ್ಕರ್​ ಹೀಗೆ ಟ್ವೀಟ್​ ಮಾಡಲು ಕಾರಣವೇನು?

ಇದನ್ನೂ ಓದಿ: Ram Charan | ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟ ರಾಮ್‌ಚರಣ್‌-ಉಪಾಸನಾ ದಂಪತಿ!

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಇತ್ತೀಚೆಗಷ್ಟೆ ಆರ್ ಆರ್ ಆರ್ ಸಿನಿಮಾದ ನಾಟು..ನಾಟು.. ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ನಲ್ಲಿ ಪ್ರಶಸ್ತಿ ಗೆದ್ದಿದೆ. ಇದೀಗ ಏರ್‌ಪೋರ್ಟ್‌ನಲ್ಲಿ ರಾಮ್‌ಚರಣ್‌ ಹೊರತಾಗಿ ರಾಜಮೌಳಿ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಕಾಣಿಸಿಕೊಂಡಿಲ್ಲ. ಜೂ.ಎನ್ ಟಿ ಆರ್ ತೆರಳುವುದು ಮತ್ತಷ್ಟು ತಡವಾಗಬಹುದು ಎನ್ನಲಾಗುತ್ತಿದೆ. ತಾರಕರತ್ನ ಅವರನ್ನು ಕಳೆದುಕೊಂಡು ಜೂ.ಎನ್ ಟಿ ಆರ್ ಕುಟುಂಬ ಇನ್ನೂ ದುಃಖದಲ್ಲಿದೆ.

Exit mobile version