ಬೆಂಗಳೂರು: ರಾಮ್ ಚರಣ್ (Ram Charan) ಅವರ ಪತ್ನಿ ಉಪಾಸನಾ ಅವರ ಬೇಬಿ ಶವರ್ ಪಾರ್ಟಿ ದುಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ತಮ್ಮ ಬೇಬಿ ಶವರ್ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ದಂಪತಿ ಹಂಚಿಕೊಂಡಿದ್ದಾರೆ. ಸಮುದ್ರ ತೀರದ ರೆಸಾರ್ಟ್ನಲ್ಲಿ ನಡೆದ ಈ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.
ಕ್ಲಿಪ್ ಹಂಚಿಕೊಂಡ ಉಪಾಸನಾ ಅವರು ʻʻನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ. ಅತ್ಯುತ್ತಮ ಬೇಬಿ ಶವರ್ಗಾಗಿ, ನನ್ನ ಪ್ರೀತಿಯ ಸಹೋದರಿಯರಾದ ಅನುಷ್ಪಾಲಾ ಮತ್ತು ಸಿಂಧೂರಿ ರೆಡ್ಡಿ ಅವರಿಗೆ ಧನ್ಯವಾದಗಳುʼʼಎಂದು ಬರೆದುಕೊಂಡಿದ್ದಾರೆ. ರಾಮ್ ಚರಣ್ ಆಗಾಗ ತಮ್ಮ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು ಬಿಳಿ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದು, ಉಪಾಸನಾ ಕೂಡ ಬಿಳಿ ಡ್ರೆಸ್ನಲ್ಲಿ ಮಿಂಚಿದ್ದಾರೆ.
ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ, ಉಪಾಸನಾ ಅವರು ತಾಯಿಯಾಗಲು ಉತ್ಸುಕರಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. “ನಾನು ತುಂಬಾ ಉತ್ಸುಕನಾಗಿದ್ದೇನೆ. ಸಮಾಜ ಬಯಸಿದಾಗ ನಾವು ಮಗುವನ್ನು ಪಡೆಯಬೇಕೆಂಬ ನಿರ್ಧಾರ ಮಾಡಿದ್ದಲ್ಲ. ನಮ್ಮ ಮದುವೆಯಾದ ಹತ್ತು ವರ್ಷಗಳ ನಂತರ, ನಾವು ಈಗ ಮಗುವನ್ನು ಪಡೆಯಬೆಕೆಂಬ ನಿರ್ಧಾರಕ್ಕೆ ಬಂದಿದ್ದೇವೆ. ನಾವಿಬ್ಬರೂ ಅಭಿವೃದ್ಧಿ ಹೊಂದುತ್ತಿರುವ ಕಾರಣ ಇದು ಅತ್ಯುತ್ತಮ ಸಮಯ ಎಂದು ನಾನು ಭಾವಿಸುತ್ತೇನೆ. ನಾವಿಬ್ಬರೂ ಆರ್ಥಿಕವಾಗಿ ಸುರಕ್ಷಿತರಾಗಿದ್ದೇವೆ. ನಮ್ಮ ಮಕ್ಕಳನ್ನು ನಾವೇ ನೋಡಿಕೊಳ್ಳಬಹುದು. ಇದು ನಮ್ಮ ಪರಸ್ಪರ ನಿರ್ಧಾರವಾಗಿತ್ತು. ಹೊರಗಿನ ಸಮಾಜದಿಂದಾಗಲಿ, ನಮ್ಮ ಕುಟುಂಬದಿಂದಾಗಲಿ ಯಾವುದೇ ಒತ್ತಡ ನಮಗಿರಲಿಲ್ಲ. ಎಂದು ಉಪಾಸನಾ ಹೇಳಿಕೊಂಡಿದ್ದರು.
ಇದನ್ನೂ ಓದಿ: Ram Charan: ಮಗು ಪಡೆಯಲು ಕುಟುಂಬ, ಸಮಾಜ ನಮ್ಮ ಮೇಲೆ ಒತ್ತಡ ಹೇರಿಲ್ಲ, ಇದು ನಮ್ಮಿಬ್ಬರ ನಿರ್ಧಾರ ಎಂದ ಉಪಾಸನಾ
ಉಪಾಸನಾ ಹಾಗೂ ರಾಮ್ಚರಣ್ ಪೋಸ್ಟ್
ಮದುವೆಯಾಗಿ 10 ವರ್ಷಗಳ ನಂತರ ತಾಯಿಯಾಗುತ್ತಿರುವ ಉಪಾಸನಾ ಚೊಚ್ಚಲ ಮಗು ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ. ಉಪಾಸನಾ ಸಹೋದರಿ ಅನುಷ್ಪಾಲಾ ಮತ್ತು ಸಿಂಧೂರಿ ರೆಡ್ಡಿ ಈ ಪಾರ್ಟಿಯನ್ನು ಆಯೋಜನೆ ಮಾಡಿದ್ದಾರೆ. ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಚಿತ್ರೀಕರಣದಿಂದ ರಾಮ್ ಚರಣ್ ಸದ್ಯಕ್ಕೆ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದಾರೆ. ನಿರ್ದೇಶಕರು ಪ್ರಸ್ತುತ ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರೀಕರಣಕ್ಕಾಗಿ ತೈವಾನ್ನಲ್ಲಿದ್ದಾರೆ. ರಾಮ್ಚರಣ್ ಇತ್ತೀಚೆಗಷ್ಟೇ ಮುಂಬರುವ ಸಲ್ಮಾನ್ ಖಾನ್ ಅವರ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಯೆಂಟಮ್ಮ ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು.