Site icon Vistara News

Ram Charan: ಪ್ರಿಯಾಂಕಾ ಚೋಪ್ರಾ ಕುಟುಂಬದ ಜತೆ ರಾಮ್‌ಚರಣ್‌-ಉಪಾಸನಾ

Ram Charan, wife Upasana visit Priyanka Chopra's LA mansion

ಬೆಂಗಳೂರು: ಎರಡನೇ ವಾರ್ಷಿಕ ಸೌತ್ ಏಷ್ಯನ್ ಎಕ್ಸಲೆನ್ಸ್ (South Asian Excellence) ಮಾರ್ಚ್ 9ರಂದು ನಡೆಯಿತು. ನಿಕ್ ಜೋನಾಸ್, ಪ್ರೀತಿ ಜಿಂಟಾ, ಜಾಕ್ವೆಲಿನ್ ಫರ್ನಾಂಡೀಸ್, ಜ್ಯೂನಿಯರ್‌ ಎನ್‌ಟಿಆರ್‌ ಮತ್ತು ಇತರರು ಪ್ರಿಯಾಂಕಾ ಚೋಪ್ರಾ ಹೋಸ್ಟ್ ಮಾಡಿದ ಪ್ರಿ ಆಸ್ಕರ್‌ ಭ್ಯಾಷ್‌ನಲ್ಲಿ ಭಾಗವಹಿಸಿದ್ದರು. ಲಾಸ್ ಏಂಜಲೀಸ್‌ನ ಪ್ಯಾರಾಮೌಂಟ್ ಸ್ಟುಡಿಯೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲುಗು ನಟ ರಾಮ್ ಚರಣ್ (Ram Charan) ಮತ್ತು ಪತ್ನಿ ಉಪಾಸನಾ ಕೂಡ ಇದ್ದರು. ಉಪಾಸನಾ ಅವರು ಇದೀಗ ಇವೆಂಟ್‌ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಅವರೊಂದಿಗಿನ ಫೋಟೊಗಳನ್ನು ಉಪಾಸನಾ ಹಂಚಿಕೊಂಡಿದ್ದಾರೆ. ಫೋಟೊದಲ್ಲಿ ಅವರ ಅತ್ತೆಯಂದಿರಾದ ಡೆನಿಸ್ ಜೋನಾಸ್ ಮತ್ತು ಪಾಲ್ ಕೆವಿನ್ ಜೋನಾಸ್ ಕೂಡ ಕಾಣಿಸಿಕೊಂಡಿದ್ದಾರೆ. ರಾಮ್ ಮತ್ತು ಉಪಾಸನಾ ಅವರ ಮುದ್ದಿನ ನಾಯಿ ಕೂಡ ಗ್ರೂಪ್ ಫೋಟೊದಲ್ಲಿ ಭಾಗವಾಗಿತ್ತು. ಎಲ್ಲರೂ ಕ್ಯಾಶುಯಲ್ ಉಡುಪನ್ನು ಧರಿಸಿದ್ದರು. ಪ್ರಿಯಾಂಕಾ ಮತ್ತು ಉಪಾಸನಾ ಸಂಪೂರ್ಣ ಬಿಳಿ ಬಟ್ಟೆ ಧರಿಸಿದ್ದರೆ, ರಾಮ್ ನೀಲಿ ಬಣ್ಣದ ಟಿ-ಶರ್ಟ್‌ನೊಂದಿಗೆ ಬಿಳಿ ಪ್ಯಾಂಟ್ ಧರಿಸಿದ್ದರು. ಫೋಟೊಗಳನ್ನು ಹಂಚಿಕೊಂಡಿರುವ ಉಪಾಸನಾ, “ಪ್ರಿಯಾಂಕಾ ಚೋಪ್ರಾ ಅವರ ಲಾಸ್ ಏಂಜಲೀಸ್ ಮನೆಯಲ್ಲಿ (LA), ಪ್ರಿಯಾಂಕಾ ಚೋಪ್ರಾ ಯಾವಾಗಲೂ ನಮ್ಮೊಂದಿಗೆ ಇರುವುದಕ್ಕೆ ಧನ್ಯವಾದಗಳು” ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ram Charan: ಹಾಲಿವುಡ್‌‌ಗೆ ಹಾರಿದ್ರಾ ರಾಮ್ ಚರಣ್? RRR ನಟ ಹೇಳಿದ್ದೇನು?

ಉಪಾಸನಾ ಶೇರ್‌ ಮಾಡಿಕೊಂಡ ಫೋಟೊಗಳು

ಪ್ರಿಯಾಂಕಾ ಚೋಪ್ರಾ ಮತ್ತು ಸೆಲೆಬ್ರಿಟಿ ಮ್ಯಾನೇಜರ್-ಉದ್ಯಮಿ ಅಂಜುಲಾ ಆಚಾರ್ಯ, ಸಹ-ಅಧ್ಯಕ್ಷರಾದ ಮಲಾಲಾ ಯೂಸುಫ್‌ಜಾಯ್, ಮಿಂಡಿ ಕಾಲಿಂಗ್, ಕುಮೈಲ್ ನಂಜಿಯಾನಿ, ಕಾಲ್ ಪೆನ್, ಅಜೀಜ್ ಅನ್ಸಾರಿ, ಬೇಲಾ ಬಜಾರಿಯಾ, ರಾಧಿಕಾ ಜೋನ್ಸ್, ಜೋಸೆಫ್ ಪಟೇಲ್, ಮತ್ತು ಪ್ರಿ ಆಸ್ಕರ್‌ ಭ್ಯಾಷ್‌ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Exit mobile version