ಬೆಂಗಳೂರು: ಅಲ್ಲು ಅರ್ಜುನ್ (Allu Arjun) ಮತ್ತು ರಾಮ್ ಚರಣ್ (Ram Charan) ಇಬ್ಬರೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು, ಇಬ್ಬರೂ ತಾರೆಯರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ನಂದ್ಯಾಲದಲ್ಲಿ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ರವಿಚಂದ್ರ ಕಿಶೋರ್ ರೆಡ್ಡಿ ಪರ ಪ್ರಚಾರದಲ್ಲಿ ಅಲ್ಲು ಅರ್ಜುನ್ ಪಾಲ್ಗೊಂಡಿದ್ದರೆ, ನಟ ರಾಮ್ ಚರಣ್, ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ ಪರವಾಗಿ ಚುನಾವಣೆ ಪ್ರಚಾರ ಮಾಡಲೆಂದು ಪೀಠಾಪುರಂಗೆ ತೆರಳಿದ್ದರು. ಪವನ್ ಕಲ್ಯಾಣ್ ಪರವಾಗಿ ರೋಡ್ ಶೋಗಳಲ್ಲಿ ಭಾಗಿಯಾದರು. ರಾಮ್ ಚರಣ್ ಜೊತೆಗೆ ಅವರ ತಾಯಿ ಸಹ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡಿದರು. ಹೀಗಾಗಿ ಇಬ್ಬರೂ ನಟರ ಸುತ್ತ ಅಭಿಮಾನಿಗಳ ದಂಡೇ ಇತ್ತು. ಇದೇ ವೇಳೆ ರಾಮ್ಚರಣ್ ಅವರ ಶರ್ಟ್ ಕೂಡ ಹರಿದು ಹಾಕಿದ್ದಾರೆ ಫ್ಯಾನ್ಸ್. ಈ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ,
ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಎಕ್ಸ್ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ʻʻಅಲ್ಲು ಅರ್ಜುನ್ ಅವರು ಮುಂಬರುವ ಲೋಕಸಭೆ ಚುನಾವಣೆಗೆ ತಮ್ಮ ಸ್ನೇಹಿತ ರವಿಚಂದ್ರ ಕಿಶೋರ್ ರೆಡ್ಡಿ ಅವರನ್ನು ಬೆಂಬಲಿಸಲು ನಂದ್ಯಾಲಕ್ಕೆ ಭೇಟಿ ನೀಡಲು ಹೊರಟಾಗ ನೂರಾರು ಅಭಿಮಾನಿಗಳು ಸ್ವಾಗತಿಸಿರುವುದು ಕಂಡು ಬಂದಿದೆ. ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಕೈಮುಗಿದು ಸ್ವಾಗತಿ ಅವರತ್ತ ಕೈ ಬೀಸಿದರು ಮತ್ತು ಮುಗುಳ್ನಕ್ಕರು. ಅವರ ಪಕ್ಕದಲ್ಲಿ ಸ್ನೇಹಾ ರೆಡ್ಡಿ ಕೂಡ ನಿಂತಿದ್ದರು.
ಇದನ್ನೂ ಓದಿ: Ram Charan: ನಟ ರಾಮ್ಚರಣ್ಗೆ ಗೌರವ ಡಾಕ್ಟರೇಟ್: ಫ್ಯಾನ್ಸ್ ಫುಲ್ ಖುಷ್!
ಇತ್ತ ರಾಮ್ ಚರಣ್, ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ ಪರವಾಗಿ ಚುನಾವಣೆ ಪ್ರಚಾರ ಮಾಡಲೆಂದು ಪೀಠಾಪುರಂಗೆ ತೆರಳಿದ್ದರು. ಪವನ್ ಕಲ್ಯಾಣ್ ಪರವಾಗಿ ರೋಡ್ ಶೋಗಳಲ್ಲಿ ಭಾಗಿಯಾದರು. ರಾಮ್ ಚರಣ್ ಜತೆಗೆ ಅವರ ತಾಯಿ ಸಹ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡಿದರು. ರಾಮ್ ಚರಣ್, ಪವನ್ ಕಲ್ಯಾಣ್ ಒಟ್ಟಿಗೆ ಬಂದಿದ್ದನ್ನು ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಪೀಠಾಪುರಂನಲ್ಲಿ ನೆರೆದಿದ್ದರು.
ರೋಡ್ ಶೋ ಮಾಡುವ ವೇಳೆ ರಾಮ್ ಚರಣ್ ಅನ್ನು ಅಭಿಮಾನಿಗಳು ಮುತ್ತಿಕೊಂಡರು. ರಾಮ್ ಚರಣ್ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟರು.. ಅಭಿಮಾನಿಗಳು ರಾಮ್ ಚರಣ್ ಅನ್ನು ತಳ್ಳಿದರು, ಶರ್ಟ್ ಅನ್ನು ಹರಿದರು. . ಇಷ್ಟೆಲ್ಲ ಆದರೂ ಸಹ ರಾಮ್ ಚರಣ್ ಏನೂ ಪ್ರತಿಕ್ರಿಯೆ ನೀಡದೆ ಸಹಿಸಿಕೊಂಡು ಕಾರಿನ ಬಳಿ ಹೋಗಿ ಕುಳಿತುಕೊಂಡರು. ಈ ಘಟನೆಯ ಹಲವು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸಿನಿಮಾ ವಿಚಾರಕ್ಕೆ ಬಂದರೆ ಅಲ್ಲು ಅರ್ಜುನ್ ಪುಷ್ಪ: ದಿ ರೂಲ್ ಬಿಡುಗಡೆಗಾಗಿ ಸಜ್ಜಾಗಿದ್ದಾರೆ. ಆಗಸ್ಟ್ 15 ರಂದು ಅಲ್ಲು ಅವರ ಪುಷ್ಪ: ದಿ ರೂಲ್ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಧನಂಜಯ್, ರಾವ್ ರಮೇಶ್ ಮುಂತಾದವರು ನಟಿಸಿದ್ದಾರೆ. ರಾಮ್ ಚರಣ್ ಪ್ರಸ್ತುತ ಕಿಯಾರಾ ಆಡ್ವಾಣಿ ಜತೆ ಶಂಕರ್ ಅವರ ಗೇಮ್ ಚೇಂಜರ್ ಚಿತ್ರೀಕರಣದಲ್ಲಿದ್ದಾರೆ.