Site icon Vistara News

Sidharth Kiara Wedding: ಕಿಯಾರ- ಸಿದ್ಧಾರ್ಥ್‌ ಜೋಡಿಗೆ ರಾಮ್ ಚರಣ್ ಪತ್ನಿ ಉಪಾಸನಾ ಕ್ಷಮೆಯಾಚಿಸಿದ್ದು ಏಕೆ?

Ram Charan's Wife Upasana Apologises Sidharth Kiara Wedding

ಬೆಂಗಳೂರು: ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Kiara Wedding) ಮಂಗಳವಾರ ಫೆಬ್ರವರಿ 7 ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಕುಟುಂಬ ಮತ್ತು ಕೆಲವು ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅತಿಥಿಗಳ ಪಟ್ಟಿಯು ಕೆಲವೇ ಕೆಲವು ಆಪ್ತ ಸ್ನೇಹಿತರನ್ನು ಒಳಗೊಂಡಿತ್ತು. ಕಿಯಾರಾ- ಸಿದ್ಧಾರ್ಥ್, ಮದುವೆಯ ಆಲ್ಬಂ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿದ್ದಂತೆ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕ್ಷಮೆ ಕೇಳಿದ್ದಾರೆ. ಕಿಯಾರಾ ಅವರ ಪೋಸ್ಟ್‌ನ ಕಮೆಂಟ್‌ ವಿಭಾಗದಲ್ಲಿ, ಮದುವೆಗೆ ಹಾಜರಾಗದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

ರಾಮ್ ಚರಣ್ ಪತ್ನಿ ಉಪಾಸನಾ ಕಿಯಾರ ಅವರ ಪೋಸ್ಟ್‌ಗೆ “ನವ ಜೋಡಿಗೆ ಅಭಿನಂದನೆಗಳು! ಕ್ಷಮಿಸಿ ನಾವು ಅಲ್ಲಿರಲು ಸಾಧ್ಯವಾಗಲಿಲ್ಲ” ಎಂದು ಶುಭಹಾರೈಸಿದ್ದಾರೆ. ನಿರ್ದೇಶಕ ಎಸ್ ಶಂಕರ್ ಅವರ ಹೆಸರಿಡದ ಚಿತ್ರದಲ್ಲಿ ಕಿಯಾರಾ ಜತೆ ನಟಿಸಲಿರುವ ರಾಮ್ ಚರಣ್ ʻʻ”ಮ್ಯಾಚ್ ಮೇಡ್ ಇನ್ ಹೆವೆನ್‌ʼʼ ಎಂದು ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದಾರೆ.

ಮದುವೆ ಸಮಾರಂಭದಲ್ಲಿ ಕಬೀರ್ ಸಿಂಗ್, ಸಹ-ನಟ ಶಾಹಿದ್ ಕಪೂರ್ , ಕಿಯಾರಾ ಅವರ ಬಾಲ್ಯದ ಗೆಳತಿ ಇಶಾ ಅಂಬಾನಿ ಜತೆಗೆ ಪತಿ ಆನಂದ್ ಪಿರಾಮಳ್ ಕೂಡ ಮದುವೆಯಲ್ಲಿ ಉಪಸ್ಥಿತರಿದ್ದರು. ಕಿಯಾರಾ ಅಡ್ವಾಣಿ ಅವರ ಕುಟುಂಬದ ಸ್ನೇಹಿತೆಯಾಗಿರುವ ಜೂಹಿ ಚಾವ್ಲಾ ಅವರು ಪತಿ ಜಯ್ ಮೆಹ್ತಾ ಅವರೊಂದಿಗೆ ಹಾಜರಿದ್ದರು. ಕರಣ್ ಜೋಹರ್ ಸಹ ಭಾಗವಹಿಸಿದ್ದರು.

ಇದನ್ನೂ ಓದಿ: Sidharth Kiara Wedding: ಸತಿ-ಪತಿಯಾದ್ರು ಲವ್ ಬರ್ಡ್ಸ್ ಕಿಯಾರಾ-ಸಿದ್ಧಾರ್ಥ್

ಇದನ್ನೂ ಓದಿ: Sidharth Kiara Wedding: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ಕೊನೆಯದಾಗಿ ಧರ್ಮ ಪ್ರೊಡಕ್ಷನ್ಸ್‌ನ ʻಗೋವಿಂದ ನಾಮ್ ಮೇರಾʼದಲ್ಲಿ (govind naam mera) ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ ಜತೆ ಕಾಣಿಸಿಕೊಂಡಿದ್ದರು. ನಿರ್ದೇಶಕ ಎಸ್ ಶಂಕರ್ ಅವರ ಹೆಸರಿಡದ ಚಿತ್ರದಲ್ಲಿ ಕಿಯಾರಾ ಅವರು ರಾಮ್ ಚರಣ್ ಜತೆ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರು ರಶ್ಮಿಕಾ ಮಂದಣ್ಣ ಜತೆ ಕೊನೆಯದಾಗಿ ಮಿಷನ್ ಮಜ್ನುದಲ್ಲಿ (mission majnu) ಕಾಣಿಸಿಕೊಂಡಿದ್ದರು. ಚಿತ್ರ ಕಳೆದ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

Exit mobile version