ಬೆಂಗಳೂರು : ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ವಿಭಿನ್ನವಾದ ಕಥಾಹಂದರ ಹೊಂದಿರುವ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಇವರು ಎತ್ತಿದ ಕೈ. ಆದರೆ ಈ ಹಿಂದೆ ನಟಿ ಇನಾಯಾ ಸುಲ್ತಾನ್ ಜತೆ ಪಾರ್ಟಿವೊಂದರಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಇದೀಗ ಇನಾಯಾ ಸುಲ್ತಾನ್ ಕುಟುಂಬ ಈ ಬಗ್ಗೆ ಬೇಸರ ವ್ಯಕ್ತ ಪಡಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ನಟಿ ಇನಾಯಾ ಸುಲ್ತಾನ್ ಜತೆ ಪಾರ್ಟಿ ಒಂದರಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೊ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ನೆಗೆಟಿವ್ ಕಮೆಂಟ್ಗಳು ಬರುತ್ತಿದ್ದಂತೆ ಡಿಲೀಟ್ ಮಾಡಿರುವುದಾಗಿ ಯೂಟ್ಯೂಬ್ ಚಾನಲ್ವೊಂದಕ್ಕೆ ಹೇಳಿಕೊಂಡಿದ್ದಾರೆ. ವಿಡಿಯೊ ಪ್ರಕರಣ ಬಗ್ಗೆ ಇನಾಯಾ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | Ladki Film | ಬೆಂಗಳೂರಿನಲ್ಲಿ ಹುಡುಗಿ ಚಿತ್ರದ ಪ್ರಚಾರ ಮಾಡಿದ RGV: ಬಿಡುಗಡೆಗೆ ಸಜ್ಜಾದ ಲಡ್ಕಿ
ʻʻನನಗೆ ಸಿನಿಮಾ ಅಂದರೆ ತುಂಬಾ ಇಷ್ಟ. ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ನನಗೆ ಇಷ್ಟವಿದ್ದ ಕಾರಣ ಮನೆಯಿಂದ ಹೊರ ಬಂದೆ. ನಂತರ ಸಿನಿಮಾ ಅವಕಾಶಕ್ಕಾಗಿ ಹೈದರಾಬಾದ್ನಲ್ಲಿ ಪ್ರಯತ್ನಿಸಿದೆ. ನಂತರ ನಿರ್ದೇಶಕ ರಾಮ್ಗೋಪಾಲ್ ಸಂಪರ್ಕಕ್ಕೆ ಬಂದರು. ಈ ಸ್ನೇಹದ ಮೇರೆಗೆ ಅವರ ಬರ್ತ್ಡೇಗೆ ಆಹ್ವಾನಿಸಿದ್ದರು. ಅವರ ಜತೆ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದೆ. ನಾಲ್ಕು ದಿನಗಳ ನಂತರ ವಿಡಿಯೊವನ್ನು ಯಾರೋ ಅಪರಿಚಿತರು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೊ ವೈರಲ್ ಆಯ್ತು. ನನ್ನ ತಾಯಿ ಈ ಬಗ್ಗೆ ಫೋನ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ನನ್ನ ಕುಟುಂಬ ಆ ಒಂದು ವಿಡಿಯೊ ಕಾರಣದಿಂದಾಗಿ ನನ್ನ ಜತೆ ಮಾತನಾಡಿಸುತ್ತಿಲ್ಲʼʼ ಎಂದಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೊವನ್ನು ರಾಮ್ಗೋಪಾಲ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ʻʻನಾನು ಪದೇಪದೆ ಸ್ಪಷ್ಟನೆ ಕೊಡುತ್ತೇನೆ. ಅದರಲ್ಲಿರುವ ವ್ಯಕ್ತಿ ನಾನು ಅಲ್ಲ. ಕೆಂಪು ಉಡುಪನ್ನು ಧರಿಸಿರುವುದು ನಟಿ ಇನಾಯಾ ಸುಲ್ತಾನ್ ಕೂಡ ಅಲ್ಲ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮೇಲೆ ಪ್ರಮಾಣ ಮಾಡಿ ಹೇಳುತ್ತಿರುವೆʼʼ ಎಂದು ಹೇಳಿಕೊಂಡಿದ್ದರು. ಇನಾಯಾ ಸುಲ್ತಾನ್ ಸದ್ಯಕ್ಕೆ ʻನಟರತ್ನಾಲುʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ | ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್