Site icon Vistara News

Ram Gopal Varma | ನಟಿಯ ಪಾದ ಮಸಾಜ್‌ ಮಾಡುತ್ತ ಸಂದರ್ಶನ: ವೈರಲ್‌ ಆಯ್ತು RGV ಪೋಟೊ, ವಿಡಿಯೊ!

Ram Gopal Varma

ಬೆಂಗಳೂರು : ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ (Ram Gopal Varma) ವಿಭಿನ್ನ ಸಿನಿಮಾಗಳನ್ನು ನೀಡುವುದರಲ್ಲಿ ಎತ್ತಿದ ಕೈ. ತಮಗೆ ಅನ್ನಿಸಿದ್ದನ್ನು ಅಂದುಕೊಂಡಂತೆಯೇ ಸಿನಿಪ್ರಿಯರ ಮುಂದೆ ತರುವಲ್ಲಿ ನಿಸ್ಸೀಮ. ರಾಮ್ ಗೋಪಾಲ್ ವರ್ಮಾ ನಟಿಯರ ಜತೆ ತೀರ ಆಪ್ತವಾಗಿರುವ ಪೋಟೊ, ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ನಟಿ ಇನಾಯ ಸುಲ್ತಾನ್ ಜತೆ ಪಾರ್ಟಿ ವಿಡಿಯೋ ಶೇರ್ ಮಾಡಿದ್ದರು. ಈ ವಿವಾದದ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಖ್ಯಾತಿಯ ಆಶು ರೆಡ್ಡಿ ಜತೆ ಇರುವ ಫೋಟೊಗಳು ವೈರಲ್‌ ಆಗಿವೆ. ರಾಮ್ ಗೋಪಾಲ್ ವರ್ಮಾ ನಟಿಯ ಪಾದದ ಬಳಿ ಕುಳಿತಿರುವ ಫೋಟೊ ಹಂಚಿಕೊಂಡಿದ್ದು, ಇದೀಗ ನೆಟ್ಟಿಗರಿಂದ ಟ್ರೋಲ್‌ಗೆ ಒಳಗಾಗಿದ್ದಾರೆ.

ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಹೆಸರು ಹೊಂದಿರುವ ರಾಮ್ ಗೋಪಾಲ್ ವರ್ಮಾ ತೆಲುಗು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಚಿತ್ರಗಳನ್ನು ಮಾಡಿ ಖ್ಯಾತಿ ಪಡೆದಿದ್ದಾರೆ. ತೆಲುಗು ಜತೆಗೆ ಕನ್ನಡ ಮತ್ತು ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿ  ಪ್ರೇಕ್ಷಕರ ಹೃದಯ ಗೆದ್ದಿರುವ ರಾಮ್ ಗೋಪಾಲ್ ವರ್ಮಾ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ | Ram Gopal Varma | ಬೇಸರ ಹೊರಹಾಕಿದ ಇನಾಯಾ ಕುಟುಂಬ : ವೈರಲ್‌ ಆಯ್ತು RGV ವಿಡಿಯೊ!

ಇದೀಗ ತನ್ನದೇ ಯೂಟ್ಯೂಬ್ ಮಾಹಿನಿ ಮೂಲಕ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ ರಾಮ್‌ ಗೋಪಾಲ್‌ ವರ್ಮಾ. ಬಿಗ್ ಬಾಸ್ ಖ್ಯಾತಿಯ ಆಶು ರೆಡ್ಡಿ ಅವರನ್ನು ಸಂದರ್ಶನ ಮಾಡಿದ ರಾಮ್‌ ಗೋಪಾಲ್‌ ವರ್ಮ ಸಂದರ್ಶನ ವೇಳೆ ನಟಿ ಆಶು ರೆಡ್ಡಿ ಜತೆ ವಿಚಿತ್ರವಾಗಿ ಪೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.  ರಾಮ್ ಗೋಪಾಲ್ ವರ್ಮಾ ಆಕೆಯ ಪಾದದ ಬಳಿ ಕುಳಿತಿರುವ ಫೋಟೊ ಹಂಚಿಕೊಂಡು, ‘ಡೇಂಜರಸ್ ಅಶು ರೆಡ್ಡಿ ಅವರೊಂದಿಗಿನ ನನ್ನ ಸಂದರ್ಶನʼ ಎಂದು ಕ್ಯಾಪ್ಟನ್‌ ನೀಡಿ ವಿಡಿಯೊ ಜತೆ ಫೋಟೊವನ್ನು ಹಂಚಿಕೊಂಡಿದ್ದಾರೆ.

ವಿಡಿಯೊ ಹಾಗೂ ಫೋಟೊಗನ್ನು ನೋಡಿ ನೆಟ್ಟಿಗರು ಕಮೆಂಟ್‌ ಮೂಲಕ ರಾಮ್‌ ಗೋಪಾಲ್‌ ವರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ | ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಕೇಸ್‌

Exit mobile version