ಬೆಂಗಳೂರು : ನಿರ್ದೇಶಕ ಶಂಕರ್ ಜತೆ ಸಿನಿಮಾ ಮಾಡುವಾಗಲೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ ನಟ ರಾಮ್ ಚರಣ್ (Ramcharan). ಇದೇ ಮೊದಲ ಬಾರಿಗೆ ʻಉಪ್ಪೇನʼ ಸಿನಿಮಾ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ಜತೆ ಕೈ ಜೋಡಿಸಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
“ಈ ಸಿನಿಮಾ ಬಗ್ಗೆ ಉತ್ಸುಕನಾಗಿದ್ದೇನೆ. ಬುಚ್ಚಿ ಬಾಬು ಸನಾ ಮತ್ತು ಇಡೀ ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ. ಬುಚ್ಚಿ ಬಾಬು ಸನಾ ಅವರು ಟ್ವೀಟ್ ಮಾಡಿದ್ದು ʻʻಅವಕಾಶಕ್ಕಾಗಿ ಧನ್ಯವಾದಗಳು ಚರಣ್ ಸರ್.. ನಾನು ನಿಮಗೆ ಯಾವಾಗಲೂ ಕೃತಜ್ಞನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಚಿತ್ರ ಮಾರ್ಚ್ ಅಥವಾ ಏಪ್ರಿಲ್ 2023ರಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ಸಿನಿಮಾಸ್ ಸಹ ಚಲನಚಿತ್ರ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ರಾಮ್ ಚರಣ್ ಸದ್ಯ ಶಂಕರ್ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ | Marriage Anniversary ನಿಮಿತ್ತ ರಾಮ್ಚರಣ್ ರಿಯಲ್ ಡ್ಯೂಯೆಟ್
ʻಉಪ್ಪೇನ’ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದ ಬುಚ್ಚಿ ಬಾಬು ಅವರು ಎನ್ಟಿಆರ್ ಅವರಿಗಾಗಿ ಈ ಸ್ಕ್ರಿಪ್ಟ್ ಮಾಡಲಾಗಿತ್ತು ಎನ್ನಲಾಗಿದೆ. ಇದೊಂದು ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಎನ್ನಲಾಗುತ್ತಿದೆ. ಚಿತ್ರದ ಶೀರ್ಷಿಕೆ ಹಾಗೂ ಇನ್ನಷ್ಟು ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದೆ ಚಿತ್ರತಂಡ.
ಇದನ್ನೂ ಓದಿ | Ram Charan | ಸಿನಿರಂಗದಲ್ಲಿ 15 ವರ್ಷ ಪೂರೈಸಿದ ರಾಮ್ ಚರಣ್