Site icon Vistara News

Ram Charan: ಅಮೆರಿಕದಲ್ಲಿ ಆರ್‌ಆರ್‌ಆರ್‌ ಪ್ರದರ್ಶನ ವೇಳೆ ಪ್ರೇಕ್ಷಕರ ಜತೆ ಸೆಲ್ಫಿ ಹಂಚಿಕೊಂಡ ರಾಮ್‌ ಚರಣ್‌

shares selfie from latest screening of RRR

ಬೆಂಗಳೂರು: ನಟ ರಾಮ್‌ ಚರಣ್‌ (Ram Charan) ಅಮೆರಿಕದಲ್ಲಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಲಾಸ್ ಏಂಜಲೀಸ್‌ನ ದಿ ಏಸ್ ಹೋಟೆಲ್‌ನಲ್ಲಿ ಆರ್‌ಆರ್‌ಆರ್‌ ಸಿನಿಮಾದ ಪ್ರದರ್ಶನ ವೇಳೆ ಪ್ರೇಕ್ಷಕರೊಂದಿಗಿನ ಸೆಲ್ಫಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 2023ರ ಅಕಾಡೆಮಿ ಅವಾರ್ಡ್ಸ್‌ಗೆ ಮುಂಚಿತವಾಗಿ ನಟ ಆರ್‌ಆರ್‌ಆರ್‌ ಸಿನಿಮಾ (RRR) ಪ್ರಚಾರದ ಸಂದರ್ಶನಗಳಲ್ಲಿ ನಿರತರಾಗಿದ್ದಾರೆ.

ರಾಮ್ ಚರಣ್ ಅವರಲ್ಲದೆ, ಆರ್‌ಆರ್‌ಆರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ, ಸಂಗೀತ ಸಂಯೋಜಕ ಎಂಎಂ ಕೀರವಾಣಿ ಮತ್ತು ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಅವರು ಸ್ಕ್ರೀನಿಂಗ್‌ನಲ್ಲಿ ಉಪಸ್ಥಿತರಿದ್ದರು.ʻʻ ಏಸ್ ಹೋಟೆಲ್‌ನಲ್ಲಿ ಆರ್‌ಆರ್‌ಆರ್‌ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ. ನಿಮ್ಮೆಲ್ಲರಿಂದ ಚಪ್ಪಾಳೆಗಳನ್ನು ಸ್ವೀಕರಿಸುತ್ತಿರುವುದು ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಎಲ್ಲರಿಗೂ ಧನ್ಯವಾದಗಳು ”ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Ramcharan | ʻಉಪ್ಪೇನʼ ಖ್ಯಾತಿಯ ನಿರ್ದೇಶಕರ ಜತೆ ನಟ ರಾಮ್‌ ಚರಣ್‌ ಹೊಸ ಸಿನಿಮಾ ಅನೌನ್ಸ್‌!

ಇದನ್ನೂ ಓದಿ: Ram Charan: ರಾಮ್ ಚರಣ್ ಭಾರತದ ಬ್ರಾಡ್ ಪಿಟ್! RRR ನಟ ಪ್ರತಿಕ್ರಿಯಿಸಿದ್ದೇನು?

ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಹಾಲಿವುಡ್‌ನ ಅತ್ಯಂತ ನೆಚ್ಚಿನ ಭಾರತೀಯ ತಾರೆ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಹಾಲಿವುಡ್ ಪ್ರೇಕ್ಷಕರು ನೀಡಿದ ಪ್ರಶಂಸೆಗೆ ನಾವು ತುಂಬಾ ಹೆಮ್ಮೆಪಡುತ್ತೇವೆ” ಎಂದಿದ್ದಾರೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

Exit mobile version