ರಮೇಶ್ ಅರವಿಂದ್ (Ramesh Aravind) ಅವರ ಹೊಸ ಅವತಾರದಲ್ಲಿ ಕಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಈ ಫೋಟೊಗಳು ವೈರಲ್ ಆಗುತ್ತಿವೆ.
ರಮೇಶ್ ಅರವಿಂದ್ ಬೆಂಗಳೂರು ಗೋಲ್ಡ್ ಫೆಸ್ಟಿವಲ್ ಪ್ರತಿನಿಧಿಸುತ್ತಿದ್ದಾರೆ. ಇದೇ ಅಕ್ಟೋಬರ್-15ರಿಂದಲೇ ಈ ಫೆಸ್ಟಿವಲ್ ಶುರು ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಆಭರಣ ತೊಟ್ಟು ಹೀಗೆ ಪೋಸ್ ನೀಡಿದ್ದಾರೆ.
ಹಲವರು ಈ ಫೋಟೊಗೆ ʻʻಅಯ್ಯೋ ಸರ್ ಯಾಕೆ ಈ ಲುಕ್? ನನಗೆ ಇಷ್ಟ ಆಗಿಲ್ಲ ಕ್ಷಮಿಸಿʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Ramesh Aravind: ವಿಭಿನ್ನ ಅವತಾರದಲ್ಲಿ ಬರಲಿದ್ದಾರೆ ರಮೇಶ್ ಅರವಿಂದ್; ಸೆಟ್ಟೇರಲಿದೆ ʻದೈಜಿʼ!
ರಮೇಶ್ ಅರವಿಂದ್ ಅವರು ಇದೀಗ ದೈಜಿ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಲುಕ್ ಕೂಡ ಬದಲಿಸಿಕೊಂಡಿದ್ದಾರೆ.
ಚಿತ್ರದ ಶೀರ್ಶಿಕೆ ‘ದೈಜಿ’ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನಿ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹೀಗೆ ಹಲವು ಅರ್ಥಗಳು.