Site icon Vistara News

Ramesh Aravind Birthday | ‘ಎವರ್​ಗ್ರೀನ್ ಹೀರೋ’ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್!

Ramesh Aravind Birthday

ಬೆಂಗಳೂರು: ನಟ ರಮೇಶ್ ಅರವಿಂದ್ ಕನ್ನಡಿಗರಿಗೆ ಸಖತ್ ಇಷ್ಟವಾಗುವ ಆಕ್ಟರ್. ಚಂದನವನಕ್ಕೆ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ರಮೇಶ್ ಅರವಿಂದ್​ರನ್ನ ಅಭಿಮಾನಿಗಳು ‘ಎವರ್​ಗ್ರೀನ್ ಹೀರೋ’ ಅಂತಾನೇ ಕರೆಯೋದುಂಟು. ಹೀಗೆ ಫ್ಯಾನ್ಸ್ ಪಾಲಿಗೆ ‘ಎವರ್​ಗ್ರೀನ್ ಹೀರೋ’ ಆಗಿರುವ ರಮೇಶ್ ಅರವಿಂದ್ (Ramesh Aravind Birthday) 58ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ.

ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಶ್ ಮಾಡಲು ಅಭಿಮಾನಿಗಳಿಗೆ ಸುವರ್ಣಾವಕಾಶ ಸಿಕ್ಕಿದೆ. ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ ರಮೇಶ್ ಅರವಿಂದ್ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪುಸ್ತಕ ಗಿಫ್ಟ್ ಕೊಡಲಿದ್ದಾರೆ. ಇದೇ ಹೊತ್ತಲ್ಲಿ ಸಂಥಿಂಗ್ ಸರ್ಪ್ರೈಸ್ ಕೊಟ್ಟು, ನೇರವಾಗಿ ಅಭಿಮಾನಿಗಳು ತಮಗೆ ವಿಶ್ ಮಾಡಲು ವಾಟ್ಸ್​ಆ್ಯಪ್‌ ನಂಬರ್ ನೀಡಿದ್ದಾರೆ.

ನಂಬರ್ ಇಲ್ಲಿದೆ!
89515 99009 & 89516 99009 ನಂಬರ್​ಗೆ ವಾಟ್ಸ್​​ಆ್ಯಪ್‌ ವಿಶ್ ಕಳಿಸಿ ನಟ ರಮೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಬಹುದು. ಇಲ್ಲಿಯೂ ಸರ್ಪ್ರೈಸ್ ಕೊಟ್ಟಿರುವ ರಮೇಶ್ ಅರವಿಂದ್, ಪ್ರತಿಯೊಬ್ಬ ಅಭಿಮಾನಿಗೂ ರೀಪ್ಲೇ ನೀಡಲಿದ್ದಾರೆ. ಹಾಗೇ ತುಂಬಾ ವಿಭಿನ್ನವಾಗಿ ವಿಶ್ ಮಾಡಿದವರಿಗೆ ಖುದ್ದಾಗಿ ಕರೆ ಮಾಡಿ ಮಾತನಾಡಲಿದ್ದಾರೆ.

ರಮೇಶ್ ಅರವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಸಂದರ್ಭದಲ್ಲಿ ನಿಮ್ಮ ಹೆಸರು, ಊರು & ಜಿಲ್ಲೆಯ ಹೆಸರನ್ನು ತಪ್ಪದೇ ನಮೂದಿಸಿ. ಹೀಗೆ ಮಾಡಿದರೆ ನಿಮ್ಮನ್ನು ಗುರುತಿಸುವುದು ಸುಲಭ. ಒಟ್ಟಾರೆ ಹೇಳುವುದಾದರೆ ಫ್ಯಾನ್ಸ್​​ಗೆ ಮತ್ತಷ್ಟು ಹತ್ತಿರವಾಗಲು ನಟ ರಮೇಶ್ ಅರವಿಂದ್ ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾ ಜಮಾನದಲ್ಲಿ ಒಳ್ಳೆಯ ಅವಕಾಶ ಒದಗಿಸಿದ್ದಾರೆ. ವಿಶ್ ಮಾಡಲು ಬಯಸುವ ಅಭಿಮಾನಿಗಳು ಮೇಲೆ ಕೊಟ್ಟಿರುವ ನಂಬರ್ ಮೂಲಕ ವಾಟ್ಸ್​​ಆ್ಯಪ್‌ ಮಾಡಬಹುದು.

ಇದನ್ನೂ ಓದಿ: Puneeth lucky man | ಲಕ್ಕಿ ಮ್ಯಾನ್ ರಿಲೀಸ್‌ಗೆ ಕ್ಷಣಗಣನೆ: ಅಪ್ಪು ಫ್ಯಾನ್ಸ್‌ಗೆ ಡಬಲ್‌ ಗಿಫ್ಟ್!

Exit mobile version